ಬೆಂಗಳೂರು:ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಅವರು ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ತಂದೆ ಹನುಮಂತರಾಯಪ್ಪ ಜತೆ ಕುಸುಮಾ ಅವರಿಂದು ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದರು. ತಂದೆ ಮತ್ತು ಮಗಳು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಉಪಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ತಂದೆ-ಮಗಳ ಭೇಟಿ ಮಹತ್ವ ಪಡೆದುಕೊಂಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಅಂದಹಾಗೆ ರಾಜರಾಜೇಶ್ವರಿ ನಗರದಿಂದ ತಂದೆ ಅಥವಾ ಪುತ್ರಿ ಚುನಾವಣೆಗೆ ಇಳಿಯುವ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಸಾರಾ ಮಹೇಶ್​ ಗಂಭೀರ ಆರೋಪ..!
ಇನ್ನು ಕುಸುಮಾ ಅವರು ಆರ್​ಆರ್​ ನಗರದಿಂದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದರೆ, ಕಾಂಗ್ರೆಸ್​ ಪಕ್ಷದಲ್ಲಿ ದಿನಕೊಂದು ಹೆಸರು ಚರ್ಚೆಯಾಗುತ್ತಿದೆ. ಹನುಮಂತರಾಯಪ್ಪ, ಕುಸುಮಾ, ಪ್ರಿಯಾಕೃಷ್ಣ ಮತ್ತು ರಕ್ಷಾ ರಾಮಯ್ಯ ಹೆಸರು ಚಾಲ್ತಿಯಲ್ಲಿದೆ.
ಟಿಕೆಟ್ ಕೊಟ್ಟರೆ ಪಕ್ಷದಿಂದ ಚುನಾವಣೆ ಖರ್ಚು ಕೇಳಲ್ಲ ಎಂದು ರಕ್ಷಾ ರಾಮಯ್ಯ ಪಕ್ಷದ ಮುಂದೆ ಆಫರ್ ಇಟ್ಟಿದ್ದಾರೆನ್ನಲಾಗಿದೆ. ಅಂದಹಾಗೆ ರಕ್ಷಾ ರಾಮಯ್ಯ ಮಾಜಿ ಸಚಿವ ಎಂಆರ್ ಸೀತಾರಾಂ ಮಗ. ಅಲ್ಲದೆ, ಕೆಪಿಸಿಸಿ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದು, ಆರ್​ಆರ್ ನಗರ ಟಿಕೆಟ್​ಗೆ ಬಾರಿ ಪೈಪೋಟಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ಪಿಪಿಇ ಕಿಟ್​ ಧರಿಸಿರುವ ದಕ್ಷಿಣ ಭಾರತದ ಈ ಪ್ರಖ್ಯಾತ ನಟಿ ಯಾರೆಂದು ಗುರುತಿಸುವಿರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twenty =
Remember me
