ಬೆಂಗಳೂರು:ರಾಜರಾಜೇಶ್ವರಿನಗರ ಉಪ ಉಪಚುನಾವಣೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆ ಸೇರಿ ಬಿರುಸಿನ ಚಟುವಟಿಕೆ ನಡೆಸಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆಸಿವೆ.
ಕಾಂಗ್ರೆಸ್ ಉಸ್ತುವಾರಿ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಶುಕ್ರವಾರ ಸಭೆ ನಡೆಸಿ, ಮಾಗಡಿ ಬಾಲಕೃಷ್ಣ ಮನವೊಲಿಸುವ ಪ್ರಯತ್ನ ಮಾಡಿತು. ಆದರೆ ಬಾಲಕೃಷ್ಣ ಒಪ್ಪಲಿಲ್ಲ ಎನ್ನಲಾಗಿದೆ. ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ, 2008ರಲ್ಲಿ ಸ್ಪರ್ಧಿಸಿದ್ದ ಕೃಷ್ಣಮೂರ್ತಿ ಸೇರಿ ಐದಾರು ಹೆಸರು ಚರ್ಚೆಗೆ ಬಂದವು. ಸಮಿತಿ ಭಾನುವಾರ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲು ನಿರ್ಧರಿಸಿತು.
ಮುನಿರತ್ನ ಸಂಪರ್ಕದಲ್ಲಿಲ್ಲ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಪಕ್ಷ ಬಿಟ್ಟು ಹೋಗಿರುವ ಮುನಿರತ್ನ ನನ್ನ ಸಂಪರ್ಕದಲ್ಲಿಲ್ಲ, ಅವರ ಬಗ್ಗೆ ನಾವು ಆಲೋಚನೆ ಸಹ ಮಾಡಿಲ್ಲ. ಕಾಂಗ್ರೆಸ್ ಹೆಸರು ಹೇಳಿಕೊಂಡು ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸುವ ಪ್ರಯತ್ನ ಮಾಡುತ್ತಿರಬೇಕು ಎಂದು ಲೇವಡಿ ಮಾಡಿದರು.
ಒಮ್ಮತಕ್ಕೆ ಜೆಡಿಎಸ್ ಯತ್ನ:ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಜೆ.ಪಿ.ನಗರ ನಿವಾಸದಲ್ಲಿ ಆರ್.ಆರ್.ನಗರ ಕ್ಷೇತ್ರದ ಮುಖಂಡರ ಸಭೆ ನಡೆಸಿದರು. ಯಾರಿಗೇ ಟಿಕೆಟ್ ಕೊಟ್ಟರೂ ಅಸಮಾಧಾನದ ಲವಲೇಶವೂ ಇಲ್ಲದೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆ ಬಳಿಕ ಮಾತನಾಡಿದ ಎಂಎಲ್​ಸಿ ಅಪ್ಪಾಜಿಗೌಡ, ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಆರ್.ಆರ್.ನಗರ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿಗೌಡ, ಜ್ಞಾನಭಾರತಿಯ ಕೃಷ್ಣಮೂರ್ತಿ ಹೆಸರು ಅಂತಿಮವಾಗಿದೆ. ಈ ಮೂವರಲ್ಲಿ ಒಬ್ಬರ ಹೆಸರನ್ನು ದೇವೇಗೌಡರ ಜತೆ ರ್ಚಚಿಸಿ ಅಂತಿಮಗೊಳಿಸಲು ಸಭೆ ನಿರ್ಧರಿಸಿದೆ ಎಂದರು.
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಮುನಿರತ್ನ ಹಾಗೂ ಶಿರಾಗೆ ರಾಜೇಶ್ ಗೌಡ ಹೆಸರುಗಳನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಫೈನಲ್ ಮಾಡುವ ನಿರೀಕ್ಷೆಯಿದೆ ಎಂದು ಪಕ್ಷದ ಉನ್ನತ ಮೂಲ ಮಾಹಿತಿ ನೀಡಿವೆ. ರಾಜ್ಯ ಕೋರ್ ಕಮಿಟಿ ಆರ್.ಆರ್.ನಗರಕ್ಕೆ ಇಬ್ಬರು ಹಾಗೂ ಶಿರಾಕ್ಕೆ ಮೂವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ, ಕ್ಷೇತ್ರದ ವಸ್ತುಸ್ಥಿತಿ, ಅಭ್ಯರ್ಥಿಗಳ ಕುರಿತು ತಮ್ಮದೇ ಮೂಲದಿಂದ ವರಿಷ್ಠರು ಮಾಹಿತಿ ಪಡೆದಿದ್ದು, ಮುನಿರತ್ನ ಮತ್ತು ರಾಜೇಶ್ ಗೌಡರಿಗೆ ಟಿಕೆಟ್ ನೀಡುವುದಕ್ಕೆ ಒಲವು ತೋರಿಸಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು:ಉಪಚುನಾವಣೆಗೆ ಇನ್ನೆರಡು ದಿನದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್ ತಿಳಿಸಿದರು. ಈಗಾಗಲೇ ಕೋರ್ ಕಮಿಟಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಿ ಕಳುಹಿಸಿ ಕೊಡಲಾಗಿದೆ. ಕೇಂದ್ರ ಕಮಿಟಿ ಯಾರು ಅಭ್ಯರ್ಥಿ ಎನ್ನುವುದನ್ನು ಪೈನಲ್ ಮಾಡಲಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಎರಡು ದಿನ ಕಾಯ್ದರೆ, ಎಲ್ಲ ವಿಚಾರದಲ್ಲಿ ಪರಿಪೂರ್ಣ ಉತ್ತರ ಸಿಗಲಿದೆ ಎಂದರು.
ನಂಬಿ ಬಂದವರನ್ನು ಪಕ್ಷದ ವರಿಷ್ಠರು, ಸಿಎಂ ಯಡಿಯೂರಪ್ಪ ಈವರೆಗೂ ಕೈಬಿಟ್ಟಿಲ್ಲ. ಮುನಿರತ್ನ ವಿಷಯದಲ್ಲೂ ಯಾವುದೇ ಆತಂಕ, ಅನುಮಾನಗಳಿಲ್ಲ.
| ಬಿ.ಸಿ.ಪಾಟೀಲ್ಕೃಷಿ ಸಚಿವ.
ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 4 =
Remember me
