ಬೆಂಗಳೂರು:ಉಪಸಮರದ ಅಖಾಡದಲ್ಲಿ ಶಿರಾ ಮತ್ತು ಆರ್​ ಆರ್​ ನಗರ ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿದೆ. ಕರೊನಾ ಆತಂಕದ ನಡುವೆಯೂ ಮತದಾರರು ಪ್ರಜಾಪ್ರಭುತ್ವ ಹಬ್ಬವನ್ನ ಖುಷಿಯಾಗಿ ಆಚರಿಸಿದ್ದಾರೆ.
ಸಂಜೆ 6 ಗಂಟೆಯೊಳಗೆ ಮತದಾನ ಕೇಂದ್ರಕ್ಕೆ ಬಂದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಚುನಾವಣಾ ಅಧಿಕಾರಿಗಳು 6ಕ್ಕೆ ಸರಿಯಾಗಿ ಮತ ಕೇಂದ್ರದ ಗೇಟ್​ ಬಂದ್​ ಮಾಡಿದರು. ಇವಿಎಂ ಮತಯಂತ್ರಗಳನ್ನ ಸೀಲ್ಡ್ ಮಾಡಿದ ಚುನಾವಣಾಧಿಕಾರಿಗಳು, ನಿಗದಿತ ಸ್ಥಳಕ್ಕೆ ಕೊಂಡೊಯ್ದರು. ಟ್ರೈಆ್ಯಂಗಲ್​ ಸ್ಪರ್ಧೆ ಇರುವ ಎರಡೂ ಕ್ಷೇತ್ರದಲ್ಲಿ ಮತದಾರರು ಉತ್ಸಾಹದಿಂದ ಬಂದು ಹಕ್ಕು ಚಲಾಯಿಸಿದರು. ಕೋವಿಡ್​ ಸೋಂಕಿತ ಮತದಾರರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮತದಾನ ಮುಕ್ತಾಯಕ್ಕೆ ಇನ್ನೊಂದು ತಾಸು ಇರುವಾಗ ಎರಡೂ ಕ್ಷೇತ್ರದಲ್ಲಿ ಕರೊನಾ ಪಾಸಿಟಿವ್​ ಇರುವ ಮತದಾರರನ್ನು ಪಿಪಿಇ ಕಿಟ್ ಧರಿಸಿಕೊಂಡು ಆಂಬುಲೆನ್ಸ್​ ಮೂಲಕ ಕರೆತಂದ ಆರೋಗ್ಯ ಇಲಾಖೆ ಸಿಬ್ಬಂದಿ, ಮತದಾನ ಮಾಡಿಸಿದರು. ಬಳಿಕ ವಾಪಸ್​ ಕರೆದೊಯ್ದರು. ಈ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಚುನಾವನೆ ಮುಗಿಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಸಿಎಸ್​ ನಾಯಕರಿಂದ ವೋಟಿಂಗ್ ಪರ್ಸಂಟೇಜ್ ಲೆಕ್ಕಾಚಾರ ಶುರುವಾಗಿದೆ.
VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

‘ಯತ್ನಾಳ್​ ಮಾನಸಿಕ ಸ್ಥಿತಿ ಸರಿ ಇಲ್ಲ, ಚಿಕಿತ್ಸೆ ಕೊಡಿಸುವುದು ಗೆಳೆಯನಾಗಿ ನನ್ನ ಕರ್ತವ್ಯ’

RR Nagar-Shira-By Election-Voting Complete
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fourteen =
Remember me
