ಬೆಂಗಳೂರು:ಡಿಕೆಶಿ ಹಸು ಅಲ್ಲ. ಅವರು ಕರೆದ ಕೂಡಲೇ ಚಿತ್ರನಟ ದರ್ಶನ್ ಓಡೋಡಿ ಬರಲು… ಡಿಕೆಶಿಗೆ ತಾಕತ್ತು ಇದ್ದರೆ ದರ್ಶನ್​ರನ್ನ ಪ್ರಚಾರಕ್ಕೆ ಕರೆದುಕೊಂಡು ಬರಲಿ ಎಂದು ಸಚಿವ ಆರ್.ಅಶೋಕ್ ಸವಾಲು ಹಾಕಿದರು.
ಆರ್​ಆರ್​ ನಗರ ಕ್ಷೇತ್ರದ ಉಪಸಮರದ ಬಹಿರಂಗ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಶುಕ್ರವಾರ ಪ್ರಚಾರ ನಡೆಸಿದ್ದರು. ಈ ಕುರಿತು ನಾನು ಕರೆದರೂ ದರ್ಶನ್ ಬರ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದರು. ಈ ಬಗ್ಗೆ ಭಾನುವಾರ ಮಧ್ಯಾಹ್ನ ಕಟುವಾಗಿ ಟೀಕಿಸಿದ ಅಶೋಕ್​, ಕಾಂಗ್ರೆಸ್​ನವರು ಹಸು ಅಲ್ಲ, ದರ್ಶನ್​ ಕರು ಅಲ್ಲ. ಅವರು ಕರೆದ ಕೂಡಲೇ ದರ್ಶನ್​ ಬರೋಕೆ. ಡಿಕೆಶಿಗೆ ತಾಕತ್ತು ಇದ್ದರೆ ಇದೇ ಸಂಜೆಯೊಳಗೆ ದರ್ಶನ್​ರನ್ನು ಪ್ರಚಾರಕ್ಕೆ ಕರೆದುಕೊಂಡು ಬರಲಿ ಎಂದು ಬಹಿರಂಗ ಸವಾಲು ಎಸೆದರು.
ನಟ ದರ್ಶನ್ ಪ್ರಚಾರ ಸಂದರ್ಭದಲ್ಲಿ ಸಾಮಾಜಿಕ ಅಂತರ ಇರಲಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್​, ಬಿಜೆಪಿಯಿಂದ ಕೋವಿಡ್ ನಿಯಮಗಳ ಪಾಲನೆ ಆಗಿದೆ. ಕಾಂಗ್ರೆಸ್​ನಿಂದ ನಿಯಮಗಳ ಉಲ್ಲಂಘನೆ ಆಗಿದೆ. ದರ್ಶನ್ ರ್ಯಾಲಿ ವೇಳೆ ನಾನೂ ಇದ್ದೆ. ದರ್ಶನ್ ಬಂದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಅದಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮ ಪಕ್ಷದಿಂದ ನೂರು ಕಾರ್ಯಕರ್ತರು ಮಾತ್ರ ಬಂದಿದ್ದರು. ಉಳಿದಂತೆ ಬಂದಿದ್ದ ಜನಕ್ಕೂ-ನಮಗೂ ಸಂಬಂಧ ಇಲ್ಲ ಎಂದರು. ದರ್ಶನ್ ನಮ್ಮ ಪರ ಪ್ರಚಾರಕ್ಕೆ ಬಂದಿದ್ದರಿಂದ ಕಾಂಗ್ರೆಸ್​ನವರಿಗೆ ಭಯವಾಗಿದೆ. ಹಾಗಾಗಿ ಇಂಥ ಆರೋಪ ಮಾಡಿದ್ದಾರೆ ಎಂದರು.
ಪರಿಷತ್​ ಚುನಾವಣೆ: ನಾಲ್ಕು ಕ್ಷೇತ್ರಗಳ ಮತ ಎಣಿಕೆ ಮುಂದೂಡಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
