ಬೆಂಗಳೂರು:ರಾಜ್ಯದಲ್ಲೀಗ ಉಪ ಚುನಾವಣೆ ಸಮರ ಕಾವೇರಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಎರಡೂ ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್​ ಮುಖಂಡರು ಸೂಕ್ತ ಅಭ್ಯರ್ಥಿ ಆಯ್ಕೆಗೆ ತಿಂಗಳಿಂದ ಕಸರತ್ತು ನಡೆಸಿದ್ದರು. ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಅಳೆದು ತೂಗಿ ಪ್ರತಿ ಕ್ಷೇತ್ರಕ್ಕೂ ತಲಾ ಓರ್ವ ಅಭ್ಯರ್ಥಿಯ ಹೆಸರನ್ನಷ್ಟೇ ಅಂತಿಮ ಮಾಡಿದ್ದಾರೆ.
ಅಭ್ಯರ್ಥಿ ಆಯ್ಕೆ ಪಟ್ಟಿಯನ್ನು ಫೈನಲ್​ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಎಐಸಿಸಿ ಶಿಫಾರಸ್ಸಿಗಾಗಿ ಭಾನುವಾರ ಸಂಜೆ ಕಳುಹಿಸಿದ್ದಾರೆ. ಅಂದಹಾಗೇ ಆ ಪಟ್ಟಿಯಲ್ಲಿ ಹೆಸರಿದೆ ಗೊತ್ತಾ? ಈಗಾಗಲೇ ಶಿರಾ ಕ್ಷೇತ್ರಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೇ ಅಭ್ಯರ್ಥಿ ಎಂದು ಡಿಕೆಶಿ ಘೋಷಿಸಿದ್ದರು. ಅದರಂತೆ ಅಭ್ಯರ್ಥಿ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರಿದೆ. ಇನ್ನು ಭಾರೀ ಕುತೂಹಲ ಮೂಡಿಸಿರುವ ಆರ್​ಆರ್​ ನಗರ ಕ್ಷೇತ್ರಕ್ಕೆ ಐಎಎಸ್​ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್​ ಸಜ್ಜಾಗಿದೆ. ಪದವೀಧರ ಕ್ಷೇತ್ರಕ್ಕೆ ರಮೇಶ್ ಕುಮಾರ್​ರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವ ಡಿ.ಕೆ.ಶಿವಕುಮಾರ್​, ಈ ಮೂವರ ಹೆಸರನ್ನೂ ಅಂತಿಮ ಮಾಡಿ ಸಿಂಗಲ್​ ನೇಮ್​ ಲಿಸ್ಟ್​ ಅನ್ನು ಎಐಸಿಸಿಗೆ ರವಾನಿಸಿದ್ದಾರೆ.
ಮಗಳು ಕುಸುಮಾರನ್ನು ಕಾಂಗ್ರೆಸ್​ನಿಂದ ಕಣಕ್ಕಿಳಿಸುವಲ್ಲಿ ತಂದೆ ಹನುಮಂತರಾಯಪ್ಪರ ಕಸರತ್ತು ಬಹುತೇಕ ಯಶಸ್ವಿಯಾಗಿದೆ. ಭಾನುವಾರ ಬೆಳಗ್ಗೆಯಷ್ಟೇ ತಂದೆ ಸಮ್ಮುಖದಲ್ಲಿ ಕುಸುಮಾ ಕಾಂಗ್ರೆಸ್​ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಆರ್​ಆರ್​ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕುಸುಮಾ, ಮಾಗಡಿ ಮಾಜಿ ಶಾಸಕ ಎಚ್​.ಸಿ.ಬಾಲಕೃಷ್ಣ ಸೇರಿದಂತೆ ಏಳು ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಕೊನೆಗೆ ಕುಸುಮಾರ ಹೆಸರನ್ನು ಅಂತಿಮ ಮಾಡಲಾಗಿದೆ.
ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

ಪಕ್ಷ ಸೇರ್ಪಡೆ ಬೆನ್ನಲ್ಲೇ ವಿಶೇಷವಾಗಿ ಕುಸುಮಾಗೆ ಡಿಕೆಶಿ ಮಾಡಿದ ತಾಕೀತು ಏನು?

ಈ ಫ್ಲೆಕ್ಸ್​ನಲ್ಲಿ ಗಾಂಧಿ-ಶಾಸ್ತ್ರಿ ಭಾವಚಿತ್ರ ಹುಡುಕಿಕೊಟ್ಟವರಿಗೆ ಬಹುಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
