ಬೆಂಗಳೂರು:ಉಪ ಸಮರದ ಹೈವೋಲ್ಟೇಜ್​ ಕ್ಷೇತ್ರ ಎನಿಸಿದ ಆರ್​.ಆರ್​. ನಗರ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಸಿಎಂ ಎಚ್.​ಡಿ.ಕುಮಾರಸ್ವಾಮಿ ಸುಳಿವು ನೀಡಿದ್ದಾರೆ.
ಆರ್ ಆರ್ ನಗರ ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಹಣದ ಹೊಳೆಯನ್ನೇ ಹರಿಸಿದವು. ಬಿಜೆಪಿ, ಕಾಂಗ್ರೆಸ್​ ಹಣದ ಮುಖಾಂತರ ಚುನಾವಣೆ ನಡೆಸಿವೆ, ನಮ್ಮಲ್ಲಿ ಶಕ್ತಿ ಇರಲಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್​ ಎರಡು ಅಥವಾ ಮೂರನೇ ಸ್ಥಾನಕ್ಕೆ ಬರಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಆರ್​.ಆರ್​. ನಗರ ಮತ್ತು ಶಿರಾ ಮತದಾನದ ನಂತರ ಕಾಂಗ್ರೆಸ್​ ಮತ್ತು ಬಿಜೆಪಿಯವರು ತಾವು ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದೇವೆ ಎನ್ನುತ್ತಿವೆ. ಹಣದ ಮುಖಾಂತರ ಚುನಾವಣೆ ನಡೆಸಿರುವ ಮುನ್ಸೂಚನೆ ಇದು. ಕೆ.ಆರ್​ . ಪೇಟೆಯ ಚುನಾವಣೆಯಲ್ಲಿ ಬಿಜೆಪಿಯವರು ಸಕ್ಸಸ್​ ಆಗಿದ್ದಾರೆ. ಅದೇ ತಂತ್ರವನ್ನು ಆರ್​.ಆರ್​. ನಗರದಲ್ಲೂ ಅನುಸರಿಸಿದ್ದಾರೆ. ಆದರೆ, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ಎಚ್​ಡಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡು ಪಕ್ಷದವರು ವಿನಯ್​ ಕುಲಕರ್ಣಿ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಅಧಿಕಾರಿಗಳು ನ್ಯಾಯಯುತ ತನಿಖೆ ನಡೆಸಿ, ಯೋಗೀಶ್​ ಗೌಡರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದಿದ್ದಾರೆ.
ತವರು ಕ್ಷೇತ್ರದಲ್ಲೇ ಡಾ.ಜಿ.ಪರಮೇಶ್ವರ್​ಗೆ​ ಭಾರಿ ಮುಖಭಂಗ!

ಕೊಲೆ ಕೇಸ್​ನಲ್ಲಿ ವಿನಯ್​ ಕುಲಕರ್ಣಿ ಜೈಲುಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
