ಬೆಂಗಳೂರು:ಅಕಾಲಿಕವಾಗಿ ಮೃತರಾದ ಐಎಎಸ್ ಅಧಿಕಾರಿ ಡಿ.ಕೆ.ರವಿ ವಿಚಾರ ರಾಜರಾಜೇಶ್ವರಿನಗರ ಕ್ಷೇತ್ರ ಉಪ ಚುನಾವಣೆಯಲ್ಲಿ ಗಿರಕಿ ಹೊಡೆಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.
ಡಿ.ಕೆ. ರವಿ ಕುರಿತ ಅನುಕಂಪ ಗಿಟ್ಟಿಸಲು ಅವರ ಪತ್ನಿ ಕುಸುಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಆದರೆ, ಅದನ್ನೇ ತಿರುಗುಬಾಣವಾಗಿಸುವ ಪ್ರಯತ್ನ ಸಂಭಾವ್ಯ ಬಿಜೆಪಿ ಅಭ್ಯರ್ಥಿಯಿಂದ ನಡೆಯುವುದರಲ್ಲೂ ಅನುಮಾನವಿಲ್ಲ.
ಈವರೆಗೂ ತಾನು ಡಿ.ಕೆ.ರವಿ ಪತ್ನಿ ಎಂದು ಕುಸುಮಾ ಎಲ್ಲೂ ತುಟಿಬಿಚ್ಚಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರ ಈ ವಿಚಾರವನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಈ ಮೂಲಕ ಅವರ ಉದ್ದೇಶವನ್ನು ಪರೋಕ್ಷವಾಗಿ ಬಹಿರಂಗ ಪಡಿಸಿದ್ದಾರೆ. ಚುನಾವಣೆಯಲ್ಲಿ ಕಣಕ್ಕೆ ಇಳಿಯುವುದು ಅಧಿಕೃತ ವಾಗುತ್ತಿದ್ದಂತೆ ಕುಸುಮಾ ಬಿಡುಗಡೆ ಮಾಡಿದ ವೈಯಕ್ತಿಕ ವಿವರದಲ್ಲಿಯೂ ಡಿ.ಕೆ. ರವಿ ಹೆಸರು ಪ್ರಸ್ತಾಪ ಮಾಡಿಲ್ಲ.
ಈ ಎಲ್ಲ ವಿಚಾರವೂ ಕೂಡ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಹೇಗಿದ್ದರೂ ಡಿ.ಕೆ. ರವಿ ಪತ್ನಿ ಎಂಬುದು ಜನರಿಗೆ ತಿಳಿಯುತ್ತದೆ, ಅಭ್ಯರ್ಥಿಯಾಗಿ ನೀವು ಪ್ರಸ್ತಾಪಿಸಬೇಡಿ ಎಂಬ ಸೂಚನೆಯನ್ನೂ ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕುಸುಮಾ ಕಣಕ್ಕಿಳಿಯುತ್ತಾರೆಂಬ ಮಾಹಿತಿ ಕಳೆದ ವಾರ ಹೊರಬರುತ್ತಿ ದ್ದಂತೆ ರವಿ ತಾಯಿ ಗೌರಮ್ಮ ಸಿಡಿಮಿಡಿಗೊಂಡಿದ್ದರು. ರವಿ ಹೆಸರು ಹೇಳಿಕೊಂಡು ಕುಸುಮಾ ಚುನಾವಣೆಗೆ ಹೋಗಕೂಡದು, ಒಂದು ವೇಳೆ ರವಿ ಹೆಸರು ಪ್ರಸ್ತಾಪಿಸಿದರೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ಗಟ್ಟಿ ದನಿ ಮೊಳಗಿಸಿದ್ದರು. ಹೀಗಾಗಿ ಮುಂದಿನ ಚುನಾವಣೆ ಪ್ರಚಾರ, ಒಳ ರಾಜಕೀಯ ಯಾವ ಲೆಕ್ಕಾಚಾರ ನಡೆಯುತ್ತದೆ ಎಂಬುದು ಸ್ಪಷ್ಟವಾಗಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಸುಮಾ, ನನ್ನ ಅತ್ತೆ ಗೌರಮ್ಮ ದೊಡ್ಡವರು. ಅವರು ಏನು ಬೇಕಾದರೂ ಮಾತನಾಡಲಿ. ಅವರು ಏನೇ ಮಾಡಿದರೂ ಆಶೀರ್ವಾದ ಎಂದರು.
ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ. ನನಗೇನೂ ರಾಜಕೀಯ ಹೊಸದಲ್ಲ. ನಮ್ಮ ತಂದೆಯ ರಾಜಕೀಯ ಚಟುವಟಿಕೆಗಳನ್ನು ನಾನು ನೋಡಿದ್ದೇನೆ. ನಾನು ಇಲ್ಲಿನ ಹೆಣ್ಣು ಮಗಳು. ಕ್ಷೇತ್ರದ ಸಮಸ್ಯೆ ಗೊತ್ತು. ಉಪನ್ಯಾಸಕಿಯಾಗಿ ವಿದ್ಯಾರ್ಥಿಗಳಿಗೆ ಕೆಲಸ ಮಾಡಿದ್ದೇನೆ. ಈಗ ಜನರ ಸೇವೆಗೆ ಅವಕಾಶ ಸಿಕ್ಕಿದೆ. ನಾನು ವ್ಯಾಪಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಜನರ ಸೇವೆಯಷ್ಟೇ ನನ್ನ ಗುರಿ. ವಿರೋಧಿಯಾಗಿ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಮುಖ್ಯ ಅಲ್ಲ. ಗೆಲ್ಲುವುದಷ್ಟೇ ನನ್ನ ಗುರಿ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 6 =
Remember me
