ಬೆಂಗಳೂರು: ಉಪ ಚುನಾವಣೆ ನಡೆಯುತ್ತಿರುವ ರಾಜರಾಜೇಶ್ವರಿ ನಗರದಲ್ಲಿ 40 ಸಾವಿರ ಬೋಗಸ್ ಮತದಾರರಿದ್ದಾರೆ. ಖಾಲಿ ನಿವೇಶನಕ್ಕೂ ನಂಬರ್ ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿದೆ!
ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಖಾಲಿ ಮನೆ, ಖಾಲಿ ಸೈಟ್ ತೋರಿಸಿ ಹೆಸರು ಸೇರ್ಪಡೆಯಾಗಿದೆ. ಒಟ್ಟು ನಲವತ್ತು ಸಾವಿರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ. ಮನೆಯೊಂದರಲ್ಲೇ 56 ಹೆಸರನ್ನು ಅಕ್ರಮವಾಗಿ ಸೇರಿಸಿದ್ದಾರೆ. ನಾವು ಸರ್ವೇ ಮಾಡಿದ್ದಾಗ ಈ ಮಾಹಿತಿ ಬಹಿರಂಗವಾಗಿದೆ. ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿಸಿದ್ದೇವೆ ಎಂದರು.
ಒಂದು ಮನೆಯಲ್ಲಿ ಇಬ್ಬರು ಮತದಾರರಿದ್ದರೆ ನಾಲ್ಕು, ಐದು ಜನರ ಹೆಸರನ್ನು ಸೇರಿಸಿದ್ದಾರೆ. ಆಂಧ್ರ, ಚಿತ್ತೂರು, ತಮಿಳುನಾಡು ಕಡೆಯಿಂದ ಕರೆದುಕೊಂಡು ಬಂದು ಮತ ಹಾಕಿಸುತ್ತಾರೆ ಎಂದು ಆಪಾದಿಸಿದರು. ಕೂಡಲೇ ಬಿಜೆಪಿ ಅಭ್ಯರ್ಥಿ ಮುನಿರತ್ನನನ್ನ ಅನರ್ಹ ಮಾಡುವಂತೆ ಆಗ್ರಹಿಸಿ ಚುನಾವಣೆ ಆಯೋಗಕ್ಕೆ ದೂರು ಸಲ್ಲುಸುತ್ತಿದ್ದೇವೆ. ಮುನಿರತ್ನನ ಆದಾಯ ಕೂಡ ಹೆಚ್ಚಾಗಿದೆ. ಈ ಬಗ್ಗೆ ಐಟಿ-ಇಡಿ ತನಿಖೆಯಾಗಲಿ. ನಮ್ಮ ಮೇಲೆ ಸಿಎಂ ತನಿಖೆಗೆ ಅನುಮತಿ ಕೊಟ್ಟಿಲ್ವಾ? ಮುನಿರತ್ನ ಆದಾಯ ಹೆಚ್ಚಳ ಬಗ್ಗೆ ತನಿಖೆಯಾಗಬೇಕು ಎಂದು ಡಿ.ಕೆ.ಶಿವಕುಮಾರ್​ ಆಗ್ರಹಿಸಿದರು.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 34 ಸಾವಿರ ಸೆಟ್ ಟಾಪ್ ಬಾಕ್ಸ್ ಅನ್ನು ಉಚಿತವಾಗಿ ನೀಡಿದ್ದಾರೆ. ಇದನ್ನು ಖುದ್ದು ಮುನಿರತ್ನ ಅವರೇ ಒಪ್ಪಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಅನರ್ಹ ಮಾಡಬೇಕು. ಕಣದಲ್ಲಿರುವ ಇತರ ಅಭ್ಯರ್ಥಿಗಳು ಚುನಾವಣೆಯನ್ನು ಫೇಸ್ ಮಾಡ್ಲಿ ಎಂದು ಒತ್ತಾಯಿಸಿದರು.
ನಕಲಿ ವೋಟರ್ ಐಡಿ ಕಾರ್ಡ್ ಇರೋರನ್ನು ಕೂಡಲೇ ಬಂಧಿಸಬೇಕು. ಈ ಆಕ್ರಮದ ಹಿಂದೆ ಸರ್ಕಾರ ಶಾಮೀಲಾಗಿದೆ. ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

ಕರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ! ಚುನಾವಣೆ ಬಳಿಕ ರ‍್ಯಾಂಡಮ್​ ಟೆಸ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 12 =
Remember me
