ಬೆಂಗಳೂರು:ಲಾಕ್​ಡೌನ್​ನಿಂದಾಗಿ ಬೆಸ್ಕಾಂಗೆ 1,238 ಕೋಟಿ ರೂ. ಆದಾಯ ಖೋತಾ ಆಗಿದೆ. ಮಾ.23ರಿಂದ ಮಾಡಲಾದ ಲಾಕ್​ಡೌನ್​ನಿಂದಾಗಿ ಬಹುತೇಕ ಎಲ್ಲ ಸರ್ಕಾರಿ ಸಂಸ್ಥೆಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಲಾಕ್​ಡೌನ್ ಅವಧಿಯಲ್ಲಿ ಬೆಸ್ಕಾಂ ನಿರಂತರ ಸೇವೆ ನೀಡಿದ್ದರೂ ವಿದ್ಯುತ್ ಬಿಲ್​ನಲ್ಲಾದ ಗೊಂದಲದಿಂದಾಗಿ ಶೇ. 50 ಗ್ರಾಹಕರು ಬಿಲ್ ಪಾವತಿಸಿಲ್ಲ. ಅದಕ್ಕಿಂತ ಮುಖ್ಯವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಕಟ್ಟಡಗಳಿಂದ ಬರಬೇಕಿದ್ದ ಆದಾಯ ಕಡಿಮೆಯಾಗಿದ್ದು, ಸಂಸ್ಥೆಗೆ ನಷ್ಟವಾಗುವಂತಾಗಿದೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ನಷ್ಟವುಂಟಾಗಿದೆ. 2019ರಲ್ಲಿ 3 ತಿಂಗಳಲ್ಲಿ 4,726.28 ಕೋಟಿ ರೂ. ಆದಾಯ ಬಂದಿತ್ತು. 2020ರ ಆ ಮೂರು ತಿಂಗಳಲ್ಲಿ 3487.66 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಇದನ್ನು ಗಮನಿಸಿದರೆ 1,238.62 ಕೋಟಿ ರೂ. ಆದಾಯ ಕಡಿಮೆಯಾಗಿದೆ.
ಇದನ್ನೂ ಓದಿ;ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ
ವಿದ್ಯುತ್ ಬಳಕೆ ಇಳಿಕೆ:ಮಾರ್ಚ್ ಮತ್ತು ಏಪ್ರಿಲ್​ನಲ್ಲಿ ಶಕ್ತಿಯುತ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಈ ಎರಡು ತಿಂಗಳಲ್ಲಿ ಮಾಮೂಲಿಗಿಂತ ಶೇ. 38.81 ವಿದ್ಯುತ್ ಕಡಿಮೆ ಮಾರಾಟವಾಗಿದೆ. ಅದೇ ರೀತಿ ಕಡಿಮೆ ವೋಲ್ಟೇಜ್ ವಿದ್ಯುತ್ ಬಳಕೆಯಲ್ಲಿ ಶೇ. 46.51 ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಶೇ. 38.2 ಬೇಡಿಕೆ ಕಡಿಮೆಯಾಗಿದೆ.
ಸಂಘರ್ಷದ ನಡುವೆ ಸದ್ದಿಲ್ಲದೆ ಚೀನಾಗೆ ಭಾರಿ ತಿರುಗೇಟು ನೀಡಿದೆ ಭಾರತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 16 =
Remember me
