| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು:ಬೆಂಬಿಡದೆ ಕಾಡುತ್ತಿರುವ ಕರೊನಾ ಕಾಮೋಡದ ದುಷ್ಪರಿಣಾಮ ಗಳಿಂದಾಗಿ ರಾಜ್ಯದಲ್ಲಿ ವಿವಿಧ ವಲಯಗಳಲ್ಲಿನ ಒಟ್ಟಾರೆ ನಷ್ಟದ ಮೊತ್ತ 40 ಸಾವಿರ ಕೋಟಿ ರೂ. ದಾಟಿದೆ. ಇದೇ ಸಂದರ್ಭದಲ್ಲಿ ಶೇ.30 ಉದ್ಯೋಗ ಹಾಗೂ ಶೇ.70 ತೆರಿಗೆ ನಷ್ಟವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕರೊನಾ ದಿಂದಾಗಿ ಲಾಕ್​ಡೌನ್ ಘೋಷಣೆ ನಂತರ ವಹಿ ವಾಟುಗಳೇ ನಿಂತು ಹೋಗಿದೆ. ಪರಿಣಾಮ ನಷ್ಟದ ಮೊತ್ತ ಅಂದಾಜಿಗೂ ಸಿಗದಂತೆ ಹೆಚ್ಚಾಗಿದೆ.
ಯಾವ್ಯಾವ ವಲಯ?:ಪ್ರವಾಸೋದ್ಯಮ, ಸಿದ್ಧ ಉಡುಪು, ಉತ್ಪಾದನೆ, ಹೋಟೆಲ್, ರಿಯಲ್ ಎಸ್ಟೇಟ್, ಸಾರಿಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲೇ ಕನಿಷ್ಠ 40 ಸಾವಿರ ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿರುವ ಅಂದಾಜಿದೆ. ಈ ಕ್ಷೇತ್ರಗಳ ಸಂಘಟನೆಗಳು ನಷ್ಟದ ಅಂದಾಜು ಆರಂಭಿಸಿರುವುದರಿಂದ ಈ ಮೊತ್ತ ಇನ್ನಷ್ಟು ಹೆಚ್ಚಾದರೂ ಅಚ್ಚರಿ ಯಿಲ್ಲ. ಉದ್ಯಮಗಳಿಗೆ ತಟ್ಟಿರುವ ನಷ್ಟದಿಂದಾಗಿ ಸರ್ಕಾರಕ್ಕೆ ಬರಬೇಕಾದ ತೆರಿಗೆ ಸಂಗ್ರಹದಲ್ಲೂ ಹಿನ್ನಡೆ ಆಗಿದೆ. ಪ್ರತಿ ತಿಂಗಳು 7000 ಕೋಟಿ ರೂ. ತೆರಿಗೆ ಬರುತ್ತದೆ. ಆದರೆ ಈಗ ಬರುತ್ತಿರುವ ತೆರಿಗೆ ಪ್ರಮಾಣ ಶೇ. 30ರಷ್ಟು ಮಾತ್ರ ಎಂಬುದು ಒಂದು ಅಂದಾಜು.
ಉತ್ಪಾದನೆ ವಲಯ:ಸ್ಟೀಲ್, ಸಿಮೆಂಟ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಮೆಷಿನ್ ಟೂಲ್ಸ್ ಸೇರಿದಂತೆ ವಿವಿಧ ವಲಯಗಳಲ್ಲಿ 1054 ಬೃಹತ್ ಕೈಗಾರಿಕೆಗಳಿವೆ. 700 ಬಹುರಾಷ್ಟ್ರೀಯ ಉದ್ದಿಮೆಗಳಿವೆ. ರಾಜ್ಯದ ಜಿಡಿಪಿಗೆ ಶೇ. 18 ಕೊಡುಗೆ ಈ ವಲಯದಿಂದ ಬರುತ್ತದೆ. ಈ ವಲಯದಲ್ಲಿಯೂ ಈಗ ಕಾರ್ಖಾನೆಗಳು ಆರಂಭವಾಗುತ್ತಿವೆ. ಕಾರ್ವಿುಕರ ಬಹುದೊಡ್ಡ ಸಮಸ್ಯೆ ಇದೆ. ಸಣ್ಣ, ದೊಡ್ಡ ಕೈಗಾರಿಕೆಗಳಿಂದ ಒಂದು ಕೋಟಿಯಷ್ಟು ನೌಕರರಿದ್ದು ಶೇ. 30 ರಿಂದ 35 ಮಂದಿ ನೌಕರಿ ಕಳೆದುಕೊಂಡಿದ್ದಾರೆ.
ಮಾಹಿತಿ ತಂತ್ರಜ್ಞಾನ:ರಾಜ್ಯದಲ್ಲಿ 12 ಸಾವಿರ ಐಟಿ ಕಂಪನಿಗಳಿವೆ. ಅದರಲ್ಲಿ 5000ಕ್ಕೂ ಅಧಿಕ ನೌಕರರು ಕೆಲಸ ಮಾಡುವ 45 ದೊಡ್ಡ ಸಂಸ್ಥೆಗಳಿವೆ. 401 ಆರ್ ಅಂಡ್ ಡಿ ಸಂಸ್ಥೆಗಳಿವೆ. ಪ್ರತಿ ವರ್ಷ 62 ಬಿಲಿಯನ್ ಡಾಲರ್​ಗಿಂತ ಹೆಚ್ಚಿನ ರಫ್ತು ವಹಿವಾಟು ನಡೆಸುತ್ತವೆ. ಬಹುತೇಕ ಕಂಪನಿಗಳು ಅಮೆರಿಕ ಹಾಗೂ ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿವೆ. ಎಷ್ಟು ಉದ್ಯೋಗ ನಷ್ಟವಾಗಿದೆ ಎಂಬುದೇ ಅಂದಾಜಿಗೇ ಸಿಗುತ್ತಿಲ್ಲ.
ಹೋಟೆಲ್ ಉದ್ಯಮ:ರಾಜ್ಯದಲ್ಲಿ 60 ಸಾವಿರ ಹೋಟೆಲ್​ಗಳಿದ್ದು ಬೆಂಗಳೂರಲ್ಲೇ 21 ಸಾವಿರ ಹೋಟೆಲ್, 3500 ಲಾಡ್ಜ್​ಗಳಿವೆ. ಅನಕ್ಷರಸ್ಥರಿಗೆ ಉದ್ಯೋಗ ನೀಡುವ ಈ ವಲಯದಲ್ಲಿ 5 ಲಕ್ಷ ನೌಕರರಿದ್ದಾರೆ. ಈಗ ಹೋಟೆಲ್​ಗಳು ನಿಧಾನವಾಗಿ ಸೇವೆ ಆರಂಭಿಸಿದ್ದರೂ ಶೇ.30 ವಹಿವಾಟು ನಡೆಯುತ್ತಿಲ್ಲ. ಕಲ್ಯಾಣ ಮಂಟಪ, ಅನೇಕ ಕಂಪನಿಗಳಿಗೆ ನಿತ್ಯ 1.5 ಲಕ್ಷ ಊಟ, ತಿಂಡಿ ಸರಬರಾಜು ಮಾಡುವ ಕ್ಯಾಟರಿಂಗ್ ಉದ್ಯಮ ಸಹ ಇದೆ. ಲಾಕ್​ಡೌನ್ ಅವಧಿಯಲ್ಲಿ ಆತಿಥ್ಯೋದ್ಯಮಕ್ಕೆ 2500 ಕೋಟಿ ರೂ. ನಷ್ಟವಾಗಿರಬಹುದೆಂಬ ಅಂದಾಜಿದೆ.
ರಿಯಲ್ ಎಸ್ಟೇಟ್: ರಿಯಲ್ ಎಸ್ಟೇಟ್ ವಲಯದಲ್ಲಿ ರಿಯಾಯಿತಿ ನೀಡಿದರೂ ಮನೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಸಾವಿರಾರು ಫ್ಲ್ಯಾಟ್​ಗಳು ಖಾಲಿ ಇದ್ದು, ಒಟ್ಟಾರೆ ವಲಯದಲ್ಲಿ ಕೋಟ್ಯಂತರ ರೂ. ನಷ್ಟವಾಗಿರುವ ಅಂದಾಜು ಇದೆ. ಈಗ ಕೆಲಸ ಆರಂಭಿಸಲು ನೌಕರರ ಸಮಸ್ಯೆ ಇದೆ.
ವಾಹನ ಉದ್ಯಮಕ್ಕೆ ಸಂಕಷ್ಟ:ವಾಹನ ಉದ್ಯಮ ಕ್ಷೇತ್ರದಲ್ಲಿ ನಿತ್ಯ ಸುಮಾರು 200 ಕೋಟಿ ರೂ. ವಹಿವಾಟು ನಡೆಸುವ ಅಂದಾಜಿದೆ. ರಸ್ತೆ ಸಂಚಾರಕ್ಕೆ ಅನ್​ಲಾಕ್ ಮಾಡಿದ್ದರೂ ಪ್ರವಾಸಿಗರೇ ಕಾಣುತ್ತಿಲ್ಲ. ಬೆಂಗಳೂರಿನ 3 ಲಕ್ಷ ಸೇರಿದಂತೆ ರಾಜ್ಯಾದ್ಯಂತ 8 ಲಕ್ಷಕ್ಕೂ ಅಧಿಕ ಚಾಲಕರು ಕೆಲಸವಿಲ್ಲದೆ ಕುಳಿತಿದ್ದಾರೆ. 10 ಸಾವಿರ ಲಕ್ಸುರಿ ಕಾರುಗಳನ್ನು ವಿದೇಶಿ ಪ್ರವಾಸಿಗರಿಗಾಗಿ ಕಾಪೋರೇಟ್ ಸಂಸ್ಥೆಯವರು ಗುತ್ತಿಗೆ ಪಡೆಯುತ್ತಿದ್ದರು. ಆದರೆ ಫೆಬ್ರವರಿಯಿಂದಲೇ ವಿದೇಶಿ ಪ್ರವಾಸಿಗರಿಲ್ಲ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಖಾಸಗಿ ಬಸ್​ಗಳು ಓಡುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದರೂ ಪ್ರಯಾಣಿಕರಿಲ್ಲ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಆಘಾತ:ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ನಿಂತು ಹೋಗಿದೆ. ಸರ್ಕಾರದ ಅಂದಾಜಿನ ಪ್ರಕಾರ ಈ ಕ್ಷೇತ್ರದಲ್ಲಿ 6 ರಿಂದ 7 ಸಾವಿರ ಕೋಟಿ ರೂ. ನಷ್ಟವಾಗಿದೆ. ವಿದೇಶಿ ಪ್ರವಾಸಿಗರು ಬರದೇ ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುವುದು ಕಷ್ಟವೆಂಬ ಸ್ಥಿತಿ ಇರುವುದನ್ನು ಸರ್ಕಾರವೇ ಒಫ್ಪಿಕೊಳ್ಳುತ್ತಿದೆ.
ಸಣ್ಣ ಕೈಗಾರಿಕೆ ತತ್ತರ:ರಾಜ್ಯದಲ್ಲಿ 6.5 ಲಕ್ಷ ಸಣ್ಣ ಕೈಗಾರಿಕೆಗಳಿದ್ದು, ನಿತ್ಯ 6-7 ಸಾವಿರ ಕೋಟಿ ರೂ.ವಹಿವಾಟು ನಡೆಯುತ್ತಿತ್ತು. ಕರೊನಾಘಾತ ತಟ್ಟಿದ ಬಳಿಕ 1 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟವಾಗಿರಬಹುದು. ಸಿದ್ಧ ಉಡುಪು ಸೇರಿದಂತೆ ಬಹುತೇಕ ಉದ್ದಿಮೆಗಳಲ್ಲಿ ಹೊರದೇಶದ ಆರ್ಡರ್​ಗಳು ಸಿಗುತ್ತಿಲ್ಲ. ಕರೊನಾಕ್ಕಿಂತ ಮೊದಲು ಸಿಕ್ಕಿದ ಆರ್ಡರ್​ಗಳನ್ನೇ ಪೂರೈಸಲಾಗುತ್ತಿಲ್ಲ. ಕಚ್ಚಾ ಪದಾರ್ಥವೂ ಇಲ್ಲ. ಆರ್ಥಿಕ ಸಂಕಷ್ಟದ ಪರಿಣಾಮ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಶೇ. 30 ಉಳಿಯುವುದೂ ಕಷ್ಟವೆಂಬ ಮಾತಿದೆ. ಉತ್ತರ ಭಾರತದ ಲಕ್ಷಾಂತರ ಕಾರ್ವಿುಕರು ವಾಪಸ್ ಹೋಗಿದ್ದಾರೆ. ಅವರು ಬರದೆ ಕೈಗಾರಿಕೆಗೆ ಕುಶಲ ಕಾರ್ವಿುಕರು ಸಿಗಲಾರರು. ಕೈಗಾರಿಕೆಗಳು ಮುಚ್ಚಿರುವುದು, ಜನ ಕಡಿಮೆ, ಶಿಫ್ಟ್​ಗಳ ಪ್ರಮಾಣ ತಗ್ಗಿಸಿರುವುದರಿಂದ ಶೇ. 30ರಿಂದ ಶೇ.35 ಉದ್ಯೋಗಗಳುನಷ್ಟವಾಗಿರುವ ಅಂದಾಜಿದೆ.
ಕಾರ್ವಿುಕ ಕಾನೂನುಗಳಲ್ಲಿ ಇನ್ನಷ್ಟು ವಿನಾಯಿತಿ ನೀಡಬೇಕು. ಕೈಗಾರಿಕೆಗಳಿಗೆ ಸಾಲ ನೀಡಲು ಬ್ಯಾಂಕ್​ಗಳು ಮುಂದಾಗುವಂತೆ ಮಾಡಬೇಕು. ಆಂಧ್ರ ಪ್ರದೇಶ ಮಾದರಿ ತೆರಿಗೆ ವಿನಾಯಿತಿ ಸಿಗಬೇಕು.
| ಆರ್. ರಾಜು, ಅಧ್ಯಕ್ಷ, ಕಾಸಿಯಾ
ವಾಹನ ಮಾಲೀಕರಿಗೆ ಗುಜರಾತ್, ರಾಜಸ್ಥಾನ, ಉತ್ತರಾಖಂಡ ಮಾದರಿಯಲ್ಲಿ 6 ತಿಂಗಳ ತೆರಿಗೆ ವಿನಾಯಿತಿ ನೀಡಬೇಕು. ಚಾಲಕರಿಗೆ ಘೋಷಿಸಿರುವ ಪ್ಯಾಕೇಜ್ ಬೇಗ ಜಾರಿಯಾಗಬೇಕು.
| ರಾಧಾಕೃಷ್ಣ ಹೊಳ್ಳ ಟ್ರಾವೆಲ್ ಮಾಲೀಕರ ಸಂಘ
ಸೇವಾ ಕ್ಷೇತ್ರದಲ್ಲಿ ಡಾಕ್ಟರ್ ಹೊರತು ಬೇರೆಯವರು ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸೇವಾ ಕ್ಷೇತ್ರದಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗದು. ಸರ್ಕಾರ ಕರಸಮಾಧಾನ ಯೋಜನೆ ಜಾರಿಗೆ ತಂದರೆ ಸ್ವಲ್ಪ ತೆರಿಗೆ ವಸೂಲಿಗೆ ಅನುಕೂಲ.
| ಬಿ.ಟಿ. ಮನೋಹರ್ ತೆರಿಗೆ ಸಲಹೆಗಾರರು
ಹೋಟೆಲ್​ಗಳಿಗೆ ಆಸ್ತಿ ತೆರಿಗೆ ಮನ್ನಾ ಮಾಡಬೇಕು. ಬಾರ್ ಅಂಡ್ ರೆಸ್ಟೋರೆಂಟ್​ಗಳಿಗೆ ಶುಲ್ಕ, ವಿದ್ಯುತ್ ದರದಲ್ಲಿಯೂ ವಿನಾಯಿತಿ ಸಿಗಬೇಕು.
| ಪಿ.ಸಿ.ರಾವ್ ಅಧ್ಯಕ್ಷರು, ಬೆಂಗಳೂರು ಹೋಟೆಲ್​ಗಳ ಸಂಘ
ಇದೀಗ ಉದ್ದಿಮೆಗಳು ಚೇತರಿಕೆ ಹಾದಿಯಲ್ಲಿವೆ. ಆತ್ಮನಿರ್ಭರ ಪ್ಯಾಕೇಜ್​ನಲ್ಲಿ ಘೋಷಿಸಿರುವಂತೆ ಬೇಗ ಬೇಗ ಹಣವನ್ನು ಬಿಡುಗಡೆ ಮಾಡಬೇಕು.
| ಸಿ.ಆರ್. ಜನಾರ್ದನ್, ಅಧ್ಯಕ್ಷ, ಎಫ್​ಕೆಸಿಸಿಐ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + sixteen =
Remember me
