ಚಿತ್ರದುರ್ಗ:ಕೆಲವೇ ದಿನಗಳ ಹಿಂದೆ ರಾಜ್ಯದ ಭೀಮಾತೀರದಲ್ಲಿ ಕಾಣಿಸಿಕೊಂಡಿದ್ದ ಆರ್​ಎಸ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್ ಅವರು ಇಂದು ಚಿತ್ರದುರ್ಗದಲ್ಲಿ ಮಾದಾರಶ್ರೀಗಳನ್ನು ಭೇಟಿಯಾಗಿದ್ದಲ್ಲದೆ, ಆರ್​ಎಸ್​ಎಸ್​ ಮುಖಂಡರ ಜತೆಗೂ ಮಾತುಕತೆ ನಡೆಸಿದ್ದಾರೆ.
ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳೊಂದಿಗೆ ಇಂದು ಶಿವಶರಣ ಮಾದಾರ ಚನ್ನಯ್ಯ ಸ್ವಾಮಿ ಮಠಕ್ಕೆ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರು, ಸ್ವಾಮೀಜಿ ಮಾತ್ರವಲ್ಲದೆ ಆರ್​ಎಸ್​ಎಸ್​ ಮುಖಂಡರೊಂದಿಗೂ ಮಾತುಕತೆ ನಡೆಸಿದರು.
ಇದನ್ನೂ ಓದಿ:ಭೀಮಾತೀರದಲ್ಲಿ ಆರ್​​ಎಸ್​​ಎಸ್​ ಸರಸಂಘಚಾಲಕರ ಸಂಚಲನ; ರಾನಡೆ ಆಶ್ರಮದಲ್ಲಿ ಮೋಹನ್ ಭಾಗವತ್ ವಾಸ್ತವ್ಯ
ಮಾದಾರ ಚನ್ನಯ್ಯ ಶ್ರೀಗಳನ್ನು ಕುಂಭಮೇಳದಲ್ಲಿ ಭೇಟಿ ಆಗಿದ್ದೆ. ಕೋವಿಡ್ ಕಾರಣದಿಂದ ಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಜನವರಿಯಲ್ಲಿ ಮಠಕ್ಕೆ ಬರಬೇಕೆಂದು ಅಂದುಕೊಂಡಿದ್ದೆ, ಆಗಲೂ ಆಗಿರಲಿಲ್ಲ. ಆದರೆ ಈಗ ಭೇಟಿ ನೀಡಿದ್ದು, ಎಲ್ಲರನ್ನೂ ಮಾತನಾಡಿಸಿದ್ದು ಖುಷಿ ನೀಡಿದೆ ಎಂದು ಮೋಹನ್ ಭಾಗವತ್ ತಿಳಿಸಿದರು. ಜಿಲ್ಲೆಯ ಸುತ್ತ-ಮುತ್ತಲ ಮಠಾಧೀಶರೊಂದಿಗೆ ಮಂಗಳವಾರ ಸಮಾಲೋಚನಾ ಸಭೆಯಲ್ಲಿ ಭಾಗವತ್ ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದರು.
ಕಿಚ್ಚ ಸುದೀಪ್​ಗೆ ಅವಹೇಳನ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪೊಲೀಸರಿಗೆ ದೂರು..
ಶಾಲೆಗೆ ಹೋಗಲು ಇಷ್ಟವಿಲ್ಲದೆ ನೇಣು ಹಾಕಿಕೊಂಡ ಬಾಲಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 4 =
Remember me
