ಬೆಂಗಳೂರು:ಸಂಘ ಪರಿವಾರದ ಮುಖಂಡರು ಮುಖ್ಯಮಂತ್ರಿ ಹಾಗೂ ಕೆಲ ಆಯ್ದ ಸಚಿವರ ರಹಸ್ಯ ಸಭೆ ಕರೆದಿರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷವೂ ಉಳಿದಿಲ್ಲ. ಇಂತಹ ಸಂದರ್ಭದಲ್ಲೂ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲವೆಂಬ ಆರೋಪಗಳ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಸಂಘದ ಮುಖಂಡರು ಸಭೆ ಕರೆದಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಮುಖ್ಯಮಂತ್ರಿ ಹಾಗೂ ಕೆಲವು ಸಚಿವರಿಗಷ್ಟೇ ಸಭೆಗೆ ಆಹ್ವಾನ ಇದೆ. ಜೂನ್ 23 ಮತ್ತು 24 ರಂದು ಬೇರೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಸಚಿವರಿಗೆ ಸೂಚಿಸಿ ಖುದ್ದು ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ. ತಮ್ಮ ಸರ್ಕಾರ ಇದ್ದಾಗ ಅದರ ಜವಾಬ್ದಾರಿ ಹೊತ್ತವರನ್ನು, ಪಕ್ಷದ ಮುಖಂಡರನ್ನು ಕರೆದು ಸಂಘದ ಪ್ರಮುಖರು ಚರ್ಚೆ ನಡೆಸುವುದು ಹೊಸದೇನು ಅಲ್ಲ. ಸಂಘದ ಮೂಲದಿಂದ ಬಂದ ಸಚಿವರು ಹೋಗಿ ಚರ್ಚೆ ನಡೆಸುತ್ತಿರುತ್ತಾರೆ. ಆದರೆ, ಈ ಬಾರಿ ಮುಖ್ಯಮಂತ್ರಿ ಜತೆಗೆ ಆಯ್ದ ಆರೇಳು ಸಚಿವರಿಗೆ ಆಹ್ವಾನ ಇದೆ. ಆದ್ದರಿಂದಲೇ ಕುತೂಹಲ ಕೆರಳಿಸಿದೆ. ಹಿಂದುತ್ವದ ವಿಚಾರ, ಅಭಿವೃದ್ಧಿ ಯೋಜನೆಗಳ ಜಾರಿ, ಸಚಿವರ ಕಾರ್ಯವೈಖರಿಯ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ಹಿಂದುತ್ವ ಪರ ಸದಭಿಪ್ರಾಯ:ರಾಜ್ಯಸಭೆ ಹಾಗೂ ವಿಧಾನ ಪರಿಷತ್​ಗೆ ವಿಧಾನಸಭೆಯಿಂದ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಅದು ಜನರ ನಾಡಿಮಿಡಿತ ತಿಳಿಸುವುದಿಲ್ಲ. ಆದರೆ, ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಕಡಿಮೆ. ಈ ಬಾರಿ ಉತ್ತಮ ಸಾಧನೆ ಮಾಡಿರುವುದು ಸಂಘ ಪರಿವಾರ ಸಹ ಆಲೋಚನೆ ಮಾಡುವಂತೆ ಮಾಡಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪದೇಪದೆ ಸಂಘ ಪರಿವಾರವನ್ನು ಕೆಣಕುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಯಾವುದೇ ಸಚಿವರು ಅದಕ್ಕೆ ಉತ್ತರ ನೀಡುತ್ತಿಲ್ಲ. ಹಿಂದುತ್ವಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಚಿವರು ಬೆಂಬಲ ನೀಡುತ್ತಿಲ್ಲ. ಸಾರ್ವಜನಿಕವಾಗಿ ಹಿಂದುತ್ವ ಪರ ವಿಷಯಗಳಲ್ಲಿ ಸದಭಿಪ್ರಾಯ ಮೂಡಿಸುವ ಕೆಲಸ ಆಗುತ್ತಿಲ್ಲ. ಅದು ಸಂಘ ಪರಿವಾರದ ಮುಖಂಡರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದಲೇ ಆಯ್ದ ಸಚಿವರನ್ನು ಕರೆದು ಚರ್ಚೆ ಮಾಡಿ ಹಿಂದುತ್ವದ ವಿಚಾರಗಳಲ್ಲಿ ಹೆಚ್ಚು ಹೆಚ್ಚು ಮಾತನಾಡುವಂತೆ ಪ್ರೇರೆಪಿಸುವುದು ಒಟ್ಟಾರೆ ಸಭೆಯ ಉದ್ದೇಶವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಉತ್ತರಪ್ರದೇಶದಲ್ಲಿ ಹಿಂದುತ್ವ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದರಿಂದಲೇ ಎಷ್ಟೇ ನಕಾರಾತ್ಮಕ ವಿಚಾರಗಳಿದ್ದರೂ ಯೋಗಿ ಆದಿತ್ಯನಾಥ ಎರಡನೇ ಅವಧಿಗೆ ಸುಲಭವಾಗಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ರಾಜ್ಯದಲ್ಲಿಯೂ 12ಕ್ಕೂ ಹೆಚ್ಚು ಹಿಂದುತ್ವ ವಿಚಾರಗಳು ಚರ್ಚೆಯಾದರೂ ಸಾರ್ವಜನಿಕವಾಗಿ ಬೇರು ಬಿಡುವಂತೆ ಮಾಡಲು ಸಾಧ್ಯವಾಗಿಲ್ಲ ಎಂಬ ಸಂಗತಿ ಸಂಘಕ್ಕೆ ಅದರದೇ ಆದ ಮೂಲಗಳಿಂದ ತಿಳಿದು ಬಂದಿದೆ. ಅದಕ್ಕೆ ಕಾರಣ ಸರ್ಕಾರ ಹಾಗೂ ಬಿಜೆಪಿಯಲ್ಲಿ ಅದನ್ನು ಸಮರ್ಥವಾಗಿ ಬೆಂಬಲಿಸಲಿಲ್ಲ. ಆದ್ದರಿಂದಲೇ ಆ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ಪಠ್ಯಪರಿಷ್ಕರಣೆ ವಿವಾದ:ಪಠ್ಯ ಪರಿಷ್ಕರಣೆಯ ವಿಚಾರದಲ್ಲಿ ಸಚಿವ ಬಿ.ಸಿ. ನಾಗೇಶ್ ಬೆಂಬಲಕ್ಕೆ ಸಂಪುಟದ ಇತರೆ ಸದಸ್ಯರು ನಿಲ್ಲಲಿಲ್ಲ. ವಾಸ್ತವ ಸಂಗತಿಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿಲ್ಲ. ಇದು ಸಾರ್ವಜನಿಕವಾಗಿ ಸರ್ಕಾರದ ಬಗ್ಗೆ ತಪು್ಪ ಸಂದೇಶ ರವಾನೆಯಾಗುವಂತೆ ಮಾಡಿದೆ. ಇನ್ನಾದರೂ, ಸಂಪುಟದಲ್ಲಿ ಒಗ್ಗಟ್ಟು ಮೂಡಿಸುವ ಕೆಲಸವಾಗಬೇಕಾಗಿದೆ ಎಂಬ ಬಗ್ಗೆ ಚರ್ಚೆಯಾಗಲಿದೆ.
ಬಹುತೇಕ ಸಚಿವರ ಕಾರ್ಯವೈಖರಿಯ ಬಗ್ಗೆ ಸಂಘಕ್ಕೆ ಅಸಮಾಧಾನ ಇದೆ. ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಜಿಲ್ಲೆಗಳಲ್ಲಿ ಸಂಘಟನೆಯಾಗುತ್ತಿಲ್ಲ ಎಂಬ ಅಂಶ ಸಂಘದ ಮೂಲಗಳಿಂದ ತಿಳಿದು ಬಂದಿದ್ದು, ದುರ್ಬಲವಾಗಿರುವ ಭಾಗದಲ್ಲಿ ಗಟ್ಟಿ ಮಾಡುವ ಬಗ್ಗೆ ಸಂಘ ಹಾಗೂ ಸರ್ಕಾರದ ಪ್ರಮುಖರ ನಡುವೆ ವಿಚಾರ ವಿನಿಮಯ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಒಂದು ವರ್ಷ ಕಾಲ ಹೆಚ್ಚು ಅಭಿವೃದ್ಧಿ ಚಟುವಟಿಕೆಗಳು ನಡೆಯುವಂತಾಗಬೇಕು ಎಂಬ ಸೂಚನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ. ‘ನಾವು ಸಭೆ ನಡೆಸುವುದು ಹೊಸದೇನು ಅಲ್ಲ, ಆಗಾಗ ಸಿಎಂ, ಸಚಿವರು, ಹಾಗೂ ಪಕ್ಷದ ಮುಖಂಡರನ್ನು ಕರೆದು ಚರ್ಚೆ ನಡೆಸುತ್ತಿರುತ್ತೇವೆ. ಕೆಲವು ಸಲಹೆಗಳನ್ನು ನೀಡುವ ಕೆಲಸ ಮಾಡಬೇಕಾಗುತ್ತದೆ. ನಮಗೆ ಬಂದ ಮಾಹಿತಿಗಳ ವಿಚಾರ ವಿನಿಮಯ ಮಾಡುತ್ತಿರುತ್ತೇವೆ. ಅದೇ ರೀತಿಯಲ್ಲಿ ಈಗಲೂ ಚರ್ಚೆ ಮಾಡಲಿದ್ದೇವೆ’ ಎಂದು ಹೆಸರು ಬಹಿರಂಗಕ್ಕೆ ಒಪ್ಪದ ಸಂಘದ ಪ್ರಮುಖರೊಬ್ಬರು ಸ್ಪಷ್ಟಪಡಿಸಿದರು.
ಅಭಿಯಾನ ನಡೆಸಿದ್ರೂ ಸ್ಪಂದಿಸದ ಜನಪ್ರತಿನಿಧಿಗಳು; ಸ್ವಂತ ಖರ್ಚಲ್ಲೇ ಮೊಬೈಲ್​ ಟಾಯ್ಲೆಟ್ ಒದಗಿಸಿದ ಎಸ್​ಐ

ರಾಜ್ಯದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + sixteen =
Remember me
