ಬೆಂಗಳೂರು:ಖ್ಯಾತ ವಿದ್ವಾಂಸ, ಹಿಂದೂ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಹಾಗೂ ಅಮೆರಿಕಾ ಕ್ಷೇತ್ರದ ಸಂಘಚಾಲಕರಾಗಿದ್ದ ಪದ್ಮಭೂಷಣ ಪ್ರೊ.ವೇದ ಪ್ರಕಾಶ್ ಅವರು ಮಂಗಳವಾರ ಅಮೆರಿಕಾದ ಡೆನ್ವರ್‌ನಲ್ಲಿ ವಿಧಿವಶರಾಗಿದ್ದಾರೆ.
ಪ್ರೊಫೆಸರ್ ವೇದಪ್ರಕಾಶ ನಂದಾ ಅವರು ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿ ಮತ್ತು ಶ್ರೇಷ್ಠ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ಅವರು ಕಾನೂನು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾಜಿಕ ಜೀವನ ನಡೆಸುತ್ತಿದ್ದ ಹಲವು ಯುವಮನಸ್ಸುಗಳಿಗೆ ಇವರು ಸ್ಫೂರ್ತಿಯಾಗಿದ್ದರು.
ಕಾನೂನು ಅಧ್ಯಯನಗಳು, ಅಂತರರಾಷ್ಟ್ರೀಯ ಕಾನೂನು, ಶಿಕ್ಷಣ ಮತ್ತು ಸಾರ್ವಜನಿಕ ನೀತಿಗಳ ಬಗ್ಗೆ ಅವರಲ್ಲಿದ್ದ ಅಪಾರ ಜ್ಞಾನ ಕಾನೂನು ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗಿತ್ತು. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಗೌರವಗಳಿಗೆ ಭಾಜನರಾಗಿದ್ದರು.
ಪ್ರೊ. ವೇದಪ್ರಕಾಶ ನಂದಾ ಅವರು ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘದ ವಲಯ ಸಂಘಚಾಲಕರಾಗಿ ನೀಡಿದ ಕೊಡುಗೆ ಸದಾ ಸ್ಮರಣೀಯ. ಜೀವನದುದ್ದಕ್ಕೂ ಸಭ್ಯತೆ ಮತ್ತು ವಿನಮ್ರತೆಯನ್ನೊಳಗೊಂಡ, ಯಾರಿಗೂ ತೊಂದರೆಯನ್ನುಂಟು ಮಾಡದ ವ್ಯಕ್ತಿತ್ವ ಅವರದ್ದು. ಸಂಸ್ಕೃತಿ ಮತ್ತು ನ್ಯಾಯದ ವಿಷಯದಲ್ಲಿ ಅವರು ಅಪಾರ ಕಾಳಜಿ ಹೊಂದಿದ್ದರು.–ದತ್ತಾತ್ರೇಯ ಹೊಸಬಾಳೆ,ಸರಕಾರ್ಯವಾಹ,ಆರ್‌ಎಸ್‌ಎಸ್
ಆರ್‌ಎಸ್‌ಎಸ್ ಸಂತಾಪ :ಪ್ರೊ. ವೇದಪ್ರಕಾಶ ನಂದಾ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ು ಸಂತಾಪ ಸೂಚಿಸಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡುವಂತೆ ಮತ್ತು ಅಗಲಿದ ದಿವ್ಯ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸರಸಂಘಚಾಲಕ ಡಾ. ಮೋಹನ ಭಾಗವತ್ ಪ್ರಾರ್ಥಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + ten =
Remember me
