ಬೆಂಗಳೂರು :ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಪೆಸರ್ ಎನ್.ಎಸ್.ಅಶೋಕ್‌ಕುಮಾರ್(64) ತಮ್ಮ ಮನೆಯಲ್ಲಿ ಶನಿವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿವೃತ್ತ ಪ್ರೊಪೆಸರ್ ಅಶೋಕ್‌ಕುಮಾರ್ ನೇತ್ರದಾನ ಮಾಡಲಾಗಿದೆ.
ಸಿಲ್ಕ್​ ಬೋರ್ಡ್ ಬಳಿಯ ಮನೆಯಲ್ಲಿ ಪತ್ನಿ ಜತೆಗೆ ಅಶೋಕ್‌ಕುಮಾರ್ ನೆಲೆಸಿದ್ದು, ನಿವೃತ್ತಿ ಜೀವನ ಕಳೆಯುತ್ತಿದ್ದರು. ಇಬ್ಬರು ಮಕ್ಕಳು ಜೆ.ಪಿ.ನಗರದ ಮನೆಯಲ್ಲಿ ವಾಸವಾಗಿದ್ದರು. ಶನಿವಾರ ರಾತ್ರಿ ದಂಪತಿ ಊಟ ಮಾಡಿ ಸಾಕಷ್ಟು ಸಮಯ ಮಾತನಾಡಿಕೊಂಡು ಕುಳಿತಿದ್ದರು. ಇದಾದ ಮೇಲೆ ಪತ್ನಿ ಮಲಗಿದ್ದು, ಅಶೋಕ್‌ಕುಮಾರ್, ಓದುವ ಕೊಠಡಿಗೆ ಹೋಗಿದ್ದರು. ಭಾನುವಾರ ಬೆಳಗ್ಗೆ 6.45ರಲ್ಲಿ ಪತಿ ಹೊರಗೆ ಬಾರದೆ ಇದ್ದದನ್ನು ಕಂಡು ಪತ್ನಿ, ಬಾಗಿಲು ಬಡಿದಿದ್ದಾರೆ. ಎಷ್ಟು ಹೊತ್ತಾದರೂ ತೆಗೆಯದೆ ಇದ್ದಾಗ ಆತಂಕಗೊಂಡು ಮಕ್ಕಳಿಗೆ ತಿಳಿಸಿದ್ದಾರೆ. ಬಾಗಿಲು ತೆರೆದು ನೋಡಿದಾಗ ನೇಣು ಕುಣಿಕೆಯಲ್ಲಿ ಶವ ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಜೇಬಿನಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.
ಅದರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ‘ನನ್ನ ಸಾವಿಗೆ ನಾನೇ ಕಾರಣ. ನನ್ನ ದೇಹ ಮತ್ತು ಕಣ್ಣನ್ನು ಆದಷ್ಟು ಬೇಗ ದಾನ ಮಾಡು ಅಜಯ್’ ಎಂದು ಉಲ್ಲೇಖಿಸಿದ್ದರು. ಕುಟುಂಬ ಸದಸ್ಯರ ಒಪ್ಪಿಗೆ ಬೇರೆಗೆ ಲಯನ್ಸ್ ಕ್ಲಬ್‌ಗೆ ನೇತ್ರಾದಾನ ಮಾಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಕಾರಣ ದೇಹ ದಾನ ಮಾಡಲು ಸಾಧ್ಯವಾಗಿಲ್ಲ. ಅಶೋಕ್‌ಕುಮಾರ್, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬ ಸದಸ್ಯರು ಸಹ ಯಾವುದೇ ಆರೋಪ ಮಾಡಿಲ್ಲ. ಈ ಕುರಿತು ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
