|ಕೀರ್ತಿನಾರಾಯಣ ಸಿ.ಬೆಂಗಳೂರು
ಐಶಾರಾಮಿ ಕಾರುಗಳ ಅಕ್ರಮ ನೋಂದಣಿ ಮೂಲಕ ರಸ್ತೆತೆರಿಗೆ ವಂಚಿಸಿರುವ ಪ್ರಕರಣ ಬಗೆದಷ್ಟೂ ಆಳಕ್ಕೆ ಹೋಗುತ್ತಿದ್ದು, ವಾಹನ ಮಾರಾಟ ಶೋರೂಂ ಡೀಲರ್​ಗಳ ಜತೆ ಆರ್​ಟಿಒ ಅಧಿಕಾರಿಗಳು ಹಾಗೂ ಸಿಬ್ಬಂದಿ ‘ಡೀಲ್’ ಕುದುರಿಸಿಕೊಂಡು ಅವ್ಯವಹಾರ ನಡೆಸಿರುವುದು ಬಹಿರಂಗವಾಗಿದೆ. ಇದರ ಬೆನ್ನಲ್ಲೇ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸಲು ಮೂವರು ಹಿರಿಯ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚಿಸಿ ಸಾರಿಗೆ ಆಯುಕ್ತರು ಆದೇಶಿಸಿದ್ದಾರೆ.
ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ್, ಹೊಸಪೇಟೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಈಶ್ವರ್ ಚೌವ್ಹಾಣ್ ಮತ್ತು ಬೆಂಗಳೂರು ಪೂರ್ವ ವಿಭಾಗದ ಆರ್​ಟಿಒ ಕಚೇರಿಯ ವಿ.ನಾಗರಾಜಾಚಾರ್ ತನಿಖಾ ಸಮಿತಿಯಲ್ಲಿದ್ದಾರೆ. ತೆರಿಗೆ ವಂಚಿಸಿರುವ ವಾಹನಗಳ ಕುರಿತು ಬೆಂಗಳೂರು ಕೇಂದ್ರದ ಎಆರ್​ಟಿಒ ಎ.ವಿ.ಪ್ರಸಾದ್ ನೇತೃತ್ವದ ತಂಡ ಕೊಟ್ಟಿರುವ ಮಧ್ಯಂತರ ವರದಿ ಆಧರಿಸಿ ತನಿಖೆ ನಡೆಸಲು ಸಮಿತಿಗೆ ಸೂಚಿಸಲಾಗಿದೆ.
ಡೀಲರ್​ಗಳಿಗೆ ನೋಟಿಸ್:ಕಾರು ತಯಾರಿಕಾ ಕಂಪನಿ ಗಳು ನಿಗದಿಪಡಿಸಿರುವ ದರದ ಬದಲಿಗೆ ಶೋರೂಂ ಡೀಲರ್​ಗಳು, ಇನ್​ವಾಯ್್ಸಲ್ಲಿ ಅಸಲಿ ದರಕ್ಕಿಂತ ಕಡಿಮೆ ದರ ನಮೂದು ಮಾಡಿ ಮಾರಾಟ ಮಾಡಿದ್ದಾರೆ. ಕಾನೂನು ಪ್ರಕಾರ ಕಂಪನಿ ನಿಗದಿಪಡಿಸಿರುವ ದರದಲ್ಲೇ ಮಾರಾಟ ಮಾಡಬೇಕು. ಒಬ್ಬೊಬ್ಬರಿಗೆ ಒಂದೊಂದು ದರಕ್ಕೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಸಲಿ ದರಪಟ್ಟಿ ಮಾಹಿತಿ ನೀಡುವಂತೆ ಕಂಪನಿಗಳಿಗೆ ಸೂಚಿಸಿದ್ದು, ವಿವರಣೆ ಕೋರಿ ಶೋರೂಂ ಡೀಲರ್​ಗಳಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಜಿಎಸ್​ಟಿ ಕಮಿಷನರ್ ಗಮನಕ್ಕೆ:ವಾಹನ ನೋಂದಣಿ ವೇಳೆ ಶೇ.20 ರಸ್ತೆ ತೆರಿಗೆ ಹಾಗೂ ಶೇ.28 ಜಿಎಸ್​ಟಿ ಕಟ್ಟಿಸಿಕೊಳ್ಳಬೇಕು. ಆದರೆ, ಅಕ್ರಮವಾಗಿ ವಾಹನಗಳನ್ನು ನೋಂದಣಿ ಮಾಡಿ ಸರ್ಕಾರಕ್ಕೆ ತೆರಿಗೆ ಹಾಗೂ ಜಿಎಸ್​ಟಿ ವಂಚಿಸಲಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು, ಜಿಎಸ್​ಟಿ ಕಮಿಷನರ್ ಗಮನಕ್ಕೆ ತಂದಿದ್ದು, ಜಿಎಸ್​ಟಿ ವಂಚನೆ ಬಗ್ಗೆ ಪ್ರತ್ಯೇಕ ತನಿಖೆ ನಡೆಯಲಿದೆ.
ಇನ್​ಸ್ಪೆಕ್ಟರ್​ಗಳ ಜತೆ ಗಲಾಟೆ:ಅಕ್ರಮವಾಗಿ ನೋಂದಣಿ ಯಾಗಿರುವ 278 ಕಾರುಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸಾರಿಗೆ ಆಯುಕ್ತರ ಸೂಚನೆ ಮೇರೆಗೆ ಶುಕ್ರವಾರ ವಾಹನಗಳ ಜಪ್ತಿ ಮಾಡಲು ಹೋದ ಇನ್​ಸ್ಪೆಕ್ಟರ್​ಗಳ ಜತೆ ಮಾಲೀಕರು ಗಲಾಟೆ ಮಾಡಿದ್ದಾರೆ. ವಾಹನ ಖರೀದಿ ಸಂದರ್ಭದಲ್ಲೇ ಟ್ಯಾಕ್ಸ್ ಕಟ್ಟಿದ್ದೇವೆ ಎಂದು ವಾದಿಸಿದ್ದಾರೆ. ದಾಖಲೆ ಕೊಡಲು ಸಮಯಾವಕಾಶ ಕೊಡಲಾಗಿದೆ.
ಕೋರ್ಟ್ ಮೆಟ್ಟಿಲೇರಲು ಸಿದ್ಧತೆ:ತೆರಿಗೆ ವಂಚಿಸಿರುವ ಬಗ್ಗೆ ವಾಹನ ಮಾಲೀಕರಿಗೆ ಆರ್​ಟಿಒ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಖರೀದಿ ಸಂದರ್ಭದಲ್ಲೇ ತೆರಿಗೆ ಪಾವತಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪಿಲ್ಲ. ಅಧಿಕಾರಿಗಳೇ ಇದಕ್ಕೆ ಹೊಣೆ ಎಂದು ಕೆಲ ಮಾಲೀಕರು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
ತಪ್ಪಿತಸ್ಥರು ಗೊತ್ತಿದ್ದರೂ ಕ್ರಮ ಏಕಿಲ್ಲ:ಅಕ್ರಮ ನೋಂದಣಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಯಾರೆಂಬುದು ಗೊತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ, ವಾಹನ ಜಪ್ತಿ ಮಾಡುವ ಜವಾಬ್ದಾರಿಯನ್ನು ನಮಗೆ ವಹಿಸಲಾಗಿದೆ ಎಂದು ಬ್ರೇಕ್ ಇನ್​ಸ್ಪೆಕ್ಟರ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
