ಬೆಂಗಳೂರು:ಸಾಲದ ಕಂತು ಕಟ್ಟಲಾಗದೆ ಫೈನಾನ್ಸ್ ಸಂಸ್ಥೆಗಳು ಹಾಗೂ ಪ್ರತಿಷ್ಠಿತ ಬ್ಯಾಂಕ್​ಗಳಿಂದ ಜಪ್ತಿಯಾಗಿರುವ ಖಾಸಗಿ ಬಸ್​ಗಳಿಂದ ಬರಬೇಕಾದ ತೆರಿಗೆ ಹಣ ವಸೂಲಿಗಾಗಿ ಕೈಗೊಂಡಿರುವ ಕಾರ್ಯಾ ಚರಣೆ ಮುಂದುವರಿಸಿರುವ ಆರ್​ಟಿಒ ಅಧಿಕಾರಿಗಳು, ಬೆಂಗಳೂರಿನ 2 ಯಾರ್ಡ್​ಗಳಲ್ಲಿ ನಿಲ್ಲಿಸಿದ್ದ 76 ಬಸ್​ಗಳನ್ನು ಪತ್ತೆಹಚ್ಚಿದ್ದು, ಬರೋಬ್ಬರಿ 4.71 ಕೋಟಿ ರೂ. ತೆರಿಗೆ ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ.
ಸಾರಿಗೆ ಇಲಾಖೆ (ಬೆಂಗಳೂರು ವಿಭಾಗ) ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ನೇತೃತ್ವದಲ್ಲಿ ಹಿರಿಯ ಇನ್​ಸ್ಪೆಕ್ಟರ್ ರಾಜಣ್ಣ ಮತ್ತವರ ತಂಡ ಕಾರ್ಯಾಚರಣೆ ನಡೆಸುತ್ತಿದೆ. ರಾಜರಾಜೇಶ್ವರಿನಗರದ ಪಟ್ಟಣಗೆರೆ ಯಾರ್ಡ್​ನಲ್ಲಿ 63 ಬಸ್ ಹಾಗೂ ಮೈಸೂರು ರಸ್ತೆ ಮೂಕಾಂಬಿಕಾ ಲೇಔಟ್ ಯಾರ್ಡ್​ನಲ್ಲಿ 13 ಬಸ್ ಪತ್ತೆಹಚ್ಚಲಾಗಿದೆ.
ಕೆಲ ಬಸ್​ಗಳ ತೆರಿಗೆ 2017ರಿಂದಲೂ ಪಾವತಿಸಿಲ್ಲ. 9 ಲಕ್ಷ ರೂ.ವರೆಗೆ ಬಾಕಿ ಕಟ್ಟಬೇಕಿದೆ. ಬೆಂಗಳೂರಿನ ಕುಂಬಳಗೋಡು ಸಮೀಪದ ಗೋಣಿಪುರ ಹಾಗೂ ತಾವರೆಕೆರೆ ಬಳಿಯ 2 ಯಾರ್ಡ್​ಗಳಲ್ಲೇ ಪತ್ತೆಯಾದ 20 ಬಸ್​ಗಳಿಂದ 1.70 ಕೋಟಿ ರೂ. ತೆರಿಗೆ ಬಾಕಿ ಇದೆ. ಈಗ 76 ಬಸ್​ಗಳಿಂದ 4.71 ಕೋಟಿ ರೂ. ವಸೂಲಿ ಆಗಬೇಕಿದೆ. ಸಂಬಂಧಪಟ್ಟವರಿಗೆ ನೋಟಿಸ್ ಕೊಡಲು ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ. ಜಪ್ತಿ ಮಾಡಿರುವ ಬಸ್​ಗಳನ್ನು ನಿಲ್ಲಿಸಿರುವ ಯಾರ್ಡ್​ಗಳ ಮಾಹಿತಿ ಸಂಗ್ರಹಿಸಿರುವ ತಂಡ, ಇಲಾಖೆಗೆ ವರದಿ ಸಲ್ಲಿಸಿದೆ.
ಮಾವಿನ ಹಣ್ಣಿನಿಂದ ಕರೊನಾ ಬರೋದಿಲ್ಲ; ನಾರಾಯಣಗೌಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 3 =
Remember me
