ಬಳ್ಳಾರಿ:ಕರ್ನಾಟಕ ಮೂಲದ ಸ್ವಾಮಿಜಿಯೊಬ್ಬರು ಖದೀಮರಿಂದ ಹತ್ಯೆಯಾಗಿದ್ದಾರೆ ಎನ್ನಲಾದ ಘಟನೆ ಮಹಾರಾಷ್ಟ್ರದಲ್ಲಿ ನಿನ್ನೆ (ಶನಿವಾರ) ರಾತ್ರಿ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!
ರುದ್ರಪಶುಪತಿ ಶಿವಾಚಾರ್ಯ ಶ್ರೀ ಹತ್ಯೆಗೀಡಾದ ಸ್ವಾಮೀಜಿ. ಮಠದ ಕಳ್ಳತನಕ್ಕೆ ಬಂದ ಕಳ್ಳರು ರಾತ್ರಿ ಪೀಠಾಧಿಪತಿಯನ್ನು ಕತ್ತು ಹಿಸುಕಿ ಸಾಯಿಸಿರುವ ಸಂಶಯ ವ್ಯಕ್ತವಾಗಿದೆ.
ರುದ್ರಪಶುಪತಿ ಶ್ರೀಗಳು ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರದವರು. ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಪತಿಯಾಗಿದ್ದರು. ನಾಗಠಾಣದ ನಿರ್ವಾಣಿ ಮಠವು ಉಜ್ಜಯಿನಿ ಪೀಠದ ಶಾಖಾ ಮಠವಾಗಿದೆ.
ಇದನ್ನೂ ಓದಿ:ಜಡ್ಜ್​ ಮನೆಯಿಂದ ಕಳ್ಳರು ದೋಚಿದ ವಸ್ತುವನ್ನು ಕೇಳಿ ಪೊಲೀಸರೇ ಶಾಕ್​…!
ರುದ್ರಪಶುಪತಿ ಶ್ರೀಗಳು ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಮಠದ ಪೀಠಾಧಿಪತಿಯಾದ ಮಹೇಶ್ವರ ಮಹಾಸ್ವಾಮಿಗಳ ಸಹೋದರರೂ ಹೌದು. ಸಹೋದರನ ಹತ್ಯೆ ವಿಷಯ ತಿಳಿಯುತ್ತಲೇ ಮಹೇಶ್ವರ ಮಹಾಸ್ವಾಮಿಗಳು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಕರೊನಾ ಬರದಂತೆ ತಡೆಯಲು ಗಿಡಮೂಲಿಕೆ ಔಷಧ ಸೇವನೆ: ಮಗ ಸಾವು, ಅಪ್ಪನ ಸ್ಥಿತಿ ಗಂಭೀರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + 12 =
Remember me
