ಚನ್ನಪಟ್ಟಣ:ರುದ್ರಾಕ್ಷಿಗೆ ಸಾಕಷ್ಟು ಮಹತ್ವವಿದೆ. ಇದರ ಧಾರಣೆಯಿಂದ ಭಕ್ತರಿಗೆ ಶಿವನ ಅನುಗ್ರಹ ದೊರೆಯುತ್ತದೆ ಎಂದು ಆಸ್ತಿಕರು ನಂಬುತ್ತಾರೆ. ಭಕ್ತರು ವಿಶೇಷ ಎಂದು ನಂಬಿರುವ ಮೂರು ಮುಖದ ರುದ್ರಾಕ್ಷಿ ಮರವೊಂದು ತಾಲೂಕಿನ ಬೈರಶೆಟ್ಟಿಹಳ್ಳಿಯಲ್ಲಿ ಇರುವುದು ವಿಶೇಷ.
ಬೈರಶೆಟ್ಟಿಹಳ್ಳಿಯ ಮಂಜು ಎಂಬುವರ ತೋಟದಲ್ಲಿ ಈ ವಿಶೇಷ ತ್ರಿಮುಖ ರುದ್ರಾಕ್ಷಿ ಗಿಡ ಬೆಳೆದಿದೆ. ಪಶ್ಚಿಮ ಘಟ್ಟ, ಹಿಮಾಲಯ, ನೇಪಾಳದಂತೆ ಆಯ್ದ ಅರಣ್ಯಗಳಲ್ಲಿ ಕಾಣಸಿಗುವ ರುದ್ರಾಕ್ಷಿ ಮರ ಇಲ್ಲಿ ಬೆಳೆದಿರುವುದು ಅಚ್ಚರಿಗೆ ಕಾರಣವಾಗಿದೆ.
10 ವರ್ಷದ ಹಿಂದೆ ನೆಟ್ಟಿದ್ದರು:ಹತ್ತು ವರ್ಷಗಳ ಹಿಂದೆ ತಮಿಳುನಾಡಿನಿಂದ 2 ರುದ್ರಾಕ್ಷಿ ಗಿಡಗಳನ್ನು ತಂದಿದ್ದ ಮಂಜು, ಗ್ರಾಮದ ದೊಡ್ಡಮ್ಮ ತಾಯಿ ಮಠದ ಮುಂಭಾಗ ಹಾಗೂ ಇನ್ನೊಂದನ್ನು ಜಮೀನಿನಲ್ಲಿ ನೆಟ್ಟಿದ್ದರು. ಮಠದ ಮುಂದಿನ ಗಿಡ ಬೆಳೆಯಲಿಲ್ಲ. ತೋಟದಲ್ಲಿ ನೆಟ್ಟ ಗಿಡ ಕಾಯಿ ಬಿಡುತ್ತಿತ್ತಾದರೂ ರುದ್ರಾಕ್ಷಿ ವಿಶೇಷತೆ ಗಮನಿಸಿರಲಿಲ್ಲ. ಆದರೆ, ತೋಟಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಈ ಮರದ ಕೆಳಗೆ ಬಿದ್ದಿದ್ದ ಕಾಯಿ ನೋಡಿ, ಅದನ್ನು ಪರಿಣಿತರಿಂದ ಪರಿಶೀಲಿಸಿದಾಗ ಇದು ಮೂರು ಮುಖದ ರುದ್ರಾಕ್ಷಿ ಎಂಬುದು ತಿಳಿದುಬಂದಿದೆ.
ಬಯಲುಸೀಮೆ ಪ್ರದೇಶದಲ್ಲಿ ಬೆಳೆಯುವುದು ವಿರಳ
ರುದ್ರಾಕ್ಷಿ ಮರವು ವೈಜ್ಞಾನಿಕವಾಗಿ ಗ್ಯಾನಿಟ್ರಸ್ ಪ್ರಭೇದಕ್ಕೆ ಸೇರಿದ ಎಲಿಯೋಕ್ಯಾಪಸ್ ಎಂಬ ಜಾತಿಗೆ ಸೇರಿದ್ದಾಗಿದೆ. ಒಂದೊಂದು ಮರದಲ್ಲಿ ಒಂದೊಂದು ರೀತಿಯ ರುದ್ರಾಕ್ಷಿ ಕಾಯಿಗಳು ಬಿಡುತ್ತವೆ. ಒಂದು ಮುಖದಿಂದ ಹಲವು ಮುಖಗಳ ರುದ್ರಾಕ್ಷಿಯನ್ನು ಕಾಣಬಹುದಾಗಿದೆ. ಒಂದೊಂದು ಮರದಲ್ಲಿ ಅವಳಿ ರುದ್ರಾಕ್ಷಿ ಕಾಯಿಗಳು ಸಿಗುತ್ತವೆ. ಬಯಲು ಸೀಮೆ ಪ್ರದೇಶದಲ್ಲಿ ಈ ಮರಗಳು ವಿರಳ, ಈ ಹಿಂದೆ ಕೆಲ ಮಠದ ಆವರಣದಲ್ಲಿ ಕಾಣಿಸುತ್ತಿದ್ದವು. ಆದರೆ, ಈಗ ಅಲ್ಲೂ ಈ ಮರಗಳು ವಿರಳವಾಗಿವೆ. ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಮರಗಳನ್ನು ಕಾಣಬಹುದು ಎಂದು ತೆಂಗಿನಕಲ್ಲು ಉಪವಲಯ ಅರಣ್ಯಾಧಿಕಾರಿ ಮಧುಕುಮಾರ್ ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ತೋಟದಲ್ಲಿ ನೆಟ್ಟಿದ್ದೆವು. ಮರದಲ್ಲಿ ಕಾಯಿ ಬೀಳುತ್ತಿದ್ದರೂ ಗಮನಕ್ಕೆ ಬಂದಿರಲಿಲ್ಲ. ಇದನ್ನು ನೋಡಿದ ಸ್ನೇಹಿತರೊಬ್ಬರು ರುದ್ರಾಕ್ಷಿಯ ಮಹತ್ವ ತಿಳಿಸಿದ ಬಳಿಕ ನಮಗೆ ಇದು ಮೂರು ಮುಖದ ರುದ್ರಾಕ್ಷಿ ಮರ ಎಂದು ತಿಳಿಯಿತು. ಇಂತಹ ಪವಿತ್ರ ಮರ ನಮ್ಮ ತೋಟದಲ್ಲಿ ಬೆಳೆದಿರುವುದೇ ಹೆಮ್ಮೆ ಎನಿಸಿದೆ.
| ಬಿ.ಎಂ. ಮಂಜು ಬೈರಾಪಟ್ಟಣ
ಏನು ವಿಶೇಷ?
ಶಿವನ ಅಕ್ಷಿಗಳಿಂದ ಉದುರಿದ ಆನಂದಬಾಷ್ಪ ರುದ್ರಾಕ್ಷಿ ಮರವಾಗಿ ಭೂಮಿಯ ಮೇಲೆ ಬೆಳೆದಿದ್ದು, ಇದನ್ನು ಧರಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬುದು ಶಿವಭಕ್ತರ ನಂಬಿಕೆ. ಅದರಲ್ಲೂ ವಿಶೇಷವಾದ 3 ಮುಖದ ರುದ್ರಾಕ್ಷಿ ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸುತ್ತದೆ. ಇದನ್ನು ಧರಿಸಿದವರಿಗೆ ಯಾವುದೇ ಕಷ್ಟದ ಪರಿಸ್ಥಿತಿ ಎದುರಿಸಲು ಸಹಾಯ ಮಾಡುತ್ತದೆ. ಧರಿಸುವ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವೈದ್ಯಕೀಯವಾಗಿ ಈ ರುದ್ರಾಕ್ಷಿಯು ರಕ್ತದೊತ್ತಡ, ಮಧುಮೇಹ, ಉದರ ಸಂಬಂಧಿ ತೊಂದರೆ, ಜ್ವರ, ಕ್ಯಾನ್ಸರ್, ಋತುಚಕ್ರ ಮತ್ತು ಖಿನ್ನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ಆಸ್ತಿಕ ಸಮುದಾಯ ಪ್ರತಿಪಾದಿಸುತ್ತದೆ.
ರುದ್ರಾಕ್ಷಿ ಧಾರಣೆಯಿಂದ ರಜೋ ಮತ್ತು ತಮೋ ಗುಣಗಳು ಕಡಿಮೆಯಾಗಿ ಸತ್ವಗುಣ ವೃದ್ಧಿಯಾಗುತ್ತದೆ. ಮನಸ್ಸಿನ ಕ್ಷೋಭೆ ಮತ್ತು ತಲ್ಲಣಗಳಿಗೆ ಕಡಿವಾಣ ಹಾಕಿ ಸನ್ಮಾರ್ಗದಲ್ಲಿ ಸಾಗಲು ಈ ರುದ್ರಾಕ್ಷಿ ಸಹಕಾರಿಯಾಗುತ್ತದೆ. ಮೂರು ಮುಖದ ರುದ್ರಾಕ್ಷಿ ಧಾರಣೆ ಮಾಡುವವರಿಗೆ ಒಳ್ಳೆಯದಾಗುತ್ತದೆ.
| ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಬೇವೂರು ಮಠ
| ಅಭಿಲಾಷ್ ತಿಟ್ಟಮಾರನಹಳ್ಳಿ
ಕರೊನಾ ಮಣಿಸೋಣ: ಜನತಾ ಕರ್ಫ್ಯೂ ಬೆಂಬಲಿಸಿ, ವೈರಸ್ ಬಡಿದೋಡಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
