|ಕೀರ್ತಿನಾರಾಯಣ ಸಿ.ಬೆಂಗಳೂರು
ಆರು ವರ್ಷಗಳ ಬಳಿಕ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ) ಬ್ರೇಕ್ ಇನ್​ಸ್ಪೆಕ್ಟರ್​ಗಳ 150 ಹುದ್ದೆ ನೇಮಕಾತಿ ಪ್ರಕ್ರಿಯೆ ಪುನರಾರಂಭಕ್ಕೆ ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ವಿರುದ್ಧ ಉದ್ಯೋಗಾಕಾಂಕ್ಷಿಗಳ ವಲಯದಿಂದ ‘ಅನ್ಯಾಯ’ದ ಕೂಗು ಕೇಳಿಬಂದಿದೆ. ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ಮುಂದುವರಿಸುವ ಜತೆಗೆ ಕೆಪಿಎಸ್ಸಿ ವಿರುದ್ಧ ಪ್ರತಿಭಟನೆಗೆ ವೇದಿಕೆ ಸಜ್ಜಾಗುತ್ತಿದೆ.
2016ರ ಫೆಬ್ರವರಿಯಲ್ಲಿ 150 ಹುದ್ದೆ ನೇಮಕಾತಿಗೆ ಸಮ್ಮಿಶ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆ ಮುಗಿದು 2019ರ ಜುಲೈನಲ್ಲಿ 129 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಸೇವಾನುಭವ ಪತ್ರ ಸಲ್ಲಿಕೆ ವಿಚಾರವಾಗಿ ಆಯ್ಕೆ ವಂಚಿತರು ಕೆಎಟಿ ಮೆಟ್ಟಿಲೇರಿದ್ದರು. ಆದರೀಗ ಹೈಕೋರ್ಟ್ ಆದೇಶದ ಹೊರತಾಗಿಯೂ ತಾನೇ ರೂಪಿಸಿದ್ದ ವಾಹನ ದುರಸ್ತಿ ಸೇವಾನುಭವ ಪ್ರಮಾಣ ಪತ್ರದ ಅರ್ಹತೆ ಕೈಬಿಟ್ಟು ನೇಮಕಾತಿಗೆ ಕೆಪಿಎಸ್ಸಿ ಮುಂದಾಗಿದೆ.
ಕೆಪಿಎಸ್ಸಿ ನಿರ್ಧಾರದಿಂದಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ 129 ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ನೇಮಕಾತಿ ಅಧಿಸೂಚನೆ ಪ್ರಕಾರ ವಾಹನ ದುರಸ್ತಿ ತರಬೇತಿ ಪಡೆದಿರುವ ಸೇವಾನುಭವ ಪತ್ರ ಸಲ್ಲಿಸಬೇಕು ಎಂದು ನಿಯಮವಿತ್ತು. ಅದರಂತೆಯೇ ನೇಮಕಾತಿ ಪ್ರಕ್ರಿಯೆ ನಡೆಸಿದ್ದ ಕೆಪಿಎಸ್ಸಿ, ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿತ್ತು. ಆದರೀಗ ಹಠಾತ್ತನೆ ತನ್ನದೇ ನಿಯಮ ಬದಲಾಯಿಸಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳುತ್ತಿರುವ ಕೆಪಿಎಸ್ಸಿ ನಡೆ ಬಗ್ಗೆ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಆರ್​ಟಿಒ ಇನ್​ಸ್ಪೆಕ್ಟರ್​ಗಳ ನೇಮಕಾತಿ ವಿಚಾರ ವಾಗಿ ನ್ಯಾಯಾಲಯದ ನಿರ್ದೇಶನವಿದೆ. ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಾಗಲ್ಲ.
|ಜಿ.ಸತ್ಯವತಿಕಾರ್ಯದರ್ಶಿ, ಕೆಪಿಎಸ್ಸಿ
430 ಹುದ್ದೆಯಲ್ಲಿ 300 ಖಾಲಿ!:ಮಂಜೂರಾದ 430 ಮೋಟಾರು ವಾಹನ ಇನ್​ಸ್ಪೆಕ್ಟರ್ ಹುದ್ದೆ ಪೈಕಿ 300 ಹುದ್ದೆ ಖಾಲಿ ಉಳಿದಿವೆ. ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಣೆಗೆ ತೊಂದರೆ ಆಗುತ್ತಿದೆ. ಆದ್ದರಿಂದ ಆದಷ್ಟು ಬೇಗ ನೇಮಕಾತಿ ಪಕ್ರಿಯೆ ಮುಗಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಕೆಪಿಎಸ್ಸಿಗೆ ಮನವಿ ಮಾಡಿದ್ದಾರೆ.
ಸುಪ್ರೀಂನಲ್ಲಿ ವಿಚಾರಣೆ:2008ರಲ್ಲಿ 104 ಇನ್​ಸ್ಪೆಕ್ಟರ್​ಗಳ ನೇಮಕವಾಗಿತ್ತು. ಆದರೆ, ಸೇವಾನುಭವ ಪತ್ರ ಸಲ್ಲಿಕೆ ವಿಚಾರವಾಗಿ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.
ಹೈಕೋರ್ಟ್ ಹೇಳಿದ್ದೇನು?:ಕೆಎಟಿ ಆದೇಶ ರದ್ದುಗೊಳಿಸಿದ್ದ ಹೈಕೋರ್ಟ್, 2016ರಲ್ಲಿ ಅಜಿ ಆಹ್ವಾನದ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಸರ್ಕಾರ ರೂಪಿಸಿರುವ ನಿಯಮಾವಳಿ ಅನ್ವಯವೇ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಆದೇಶಿಸಿದೆ.
ಆದೇಶವೇನಿತ್ತು?:ವಾಹನ ದುರಸ್ತಿ ಸೇವಾನುಭವ ಪತ್ರ ಕಡ್ಡಾಯಗೊಳಿಸದೆ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಹುದ್ದೆಗಳ ನೇಮಕಾತಿ ನಡೆಸುವಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿ, ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + 13 =
Remember me
