ಬೆಂಗಳೂರು:ಟ್ರಸ್ಟ್​ಗಳ ಮೂಲಕ ನಡೆಯುವ ಕಾನೂನು ಉಲ್ಲಂಘನೆ ತಡೆಯಲು ಸರ್ಕಾರ ಮುಂದಾಗಿದ್ದು, ಟ್ರಸ್ಟ್ ನಿಯಂತ್ರಿಸಲು ವಿಶೇಷ ಕಾನೂನು ತರುವ ನಿರ್ಧರಿಸಿದೆ. ಈ ಸಂಬಂಧ ಹಲವು ಸುತ್ತಿನ ಚರ್ಚೆ ನಡೆದಿದ್ದು, ಶೀಘ್ರವೇ ತೀರ್ಮಾನ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ವಿವರಣೆ ನೀಡಿದರು.
ಧಾರ್ವಿುಕ, ದತ್ತಿ, ಶೈಕ್ಷಣಿಕ ಸಂಸ್ಥೆಗಳ ಟ್ರಸ್ಟಿಗಳು ಮಾಲೀಕರಾಗಲು ಸಾಧ್ಯವಿಲ್ಲ, ಟ್ರಸ್ಟಿ ಜವಾಬ್ದಾರಿಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಂಸ್ಥೆಯ ಭೂಮಿ ಮಾರಾಟದಂತಹ ಚಟುವಟಿಕೆ ಮಾಡುವುದು ಎಷ್ಟು ಸರಿ? ಈ ಬಗ್ಗೆ ಅನೇಕ ಗೊಂದಲಗಳೂ ಇವೆ. ಹೀಗಾಗಿ ಟ್ರಸ್ಟ್ ಕಾನೂನು ತರಲು ಉದ್ದೇಶಿಸಲಾಗಿದೆ ಎಂದರು. 10 ವರ್ಷದ ಹಿಂದೆ ಟ್ರಸ್ಟ್ ನಿಯಂತ್ರಣ ಕಾನೂನು ತಂದು ಶಾಸನಸಭೆಯಲ್ಲಿ ಒಪ್ಪಿಗೆಯನ್ನೂ ಪಡೆದು ರಾಜ್ಯಪಾಲರ ಸಹಿಗೂ ಕಳಿಸಿಕೊಡಲಾಗಿತ್ತು.
ಕೆಲವು ತಾಂತ್ರಿಕ ಗೊಂದಲದ ಕಾರಣ ಸರ್ಕಾರ ವಾಪಸ್ ಪಡೆದಿತ್ತು. ಇದೀಗ ಮತ್ತೆ ಅದನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಮಾಧುಸ್ವಾಮಿ ತಿಳಿಸಿದರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಕಲ್ಪಿಸಲು ಸರ್ಕಾರ ಸೂಕ್ತ ನಿರ್ಧಾರ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ಪ್ರವೇಶ ಮಿತಿ ಹೆಚ್ಚಳ ಮಾಡಿ ಈ ಮೀಸಲು ಜಾರಿ ಮಾಡಿದೆ.
ಆದರಿಲ್ಲಿ, ಪ್ರವೇಶ ಮಿತಿ ಹೆಚ್ಚಳಕ್ಕೆ ಕೇಂದ್ರದ ಸಂಸ್ಥೆಗಳ ಅನುಮತಿ ಪಡಯಬೇಕು, ತಕ್ಕದಾದ ಸೌಲಭ್ಯಗಳ ಅವಕಾಶ ಇರಬೇಕು. ಈ ಕಾರಣಕ್ಕೆ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು. ಕುಡಿಯುವ ನೀರಿನ ಯೋಜನೆ, ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆಯವರು ಅಡ್ಡಿಪಡಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಧುಸ್ವಾಮಿ, ಬದಲಿ ಭೂಮಿಯನ್ನು ಅರಣ್ಯ ಇಲಾಖೆ ಒದಗಿಸಿದರೂ ರಸ್ತೆ ಅಗಲೀಕರಣಕ್ಕೆ ಅವಕಾಶ ನೀಡುತ್ತಿಲ್ಲ, ಹೀಗಾದರೆ ಹೇಗೆ ಕೆಲಸ ಮಾಡುವುದೋ ಗೊತ್ತಾಗುತ್ತಿಲ್ಲ. ಈ ಕುರಿತು ಒಂದು ವ್ಯಾಪಕ ಚರ್ಚೆ ಆಗಬೇಕಾಗಿದೆ ಎಂದು ಹೇಳಿದರು.
ಒಂದು ದಿನ ಸಂವಿಧಾನ ಬಗ್ಗೆಯೇ ಚರ್ಚೆ
ವಿಧಾನಸಭೆ ಕಲಾಪದಲ್ಲಿ ವಿಧೇಯಕಗಳನ್ನು ತರಾತುರಿಯಲ್ಲಿ ಒಪ್ಪಿಕೊಳ್ಳುವ ಬದಲು ಶಾಸಕರು ಹೆಚ್ಚು ಚರ್ಚೆ ಮಾಡಲು ಅವಕಾಶ ಮಾಡಿಕೊಡಲು ಸ್ಪೀಕರ್ ಆಸಕ್ತಿ ತೋರಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ ಸರ್ಕಾರ ಕೂಡ ತಯಾರಿ ನಡೆಸುತ್ತಿದೆ. ಜತೆಗೆ ಒಂದು ದಿನ ‘ಸಂವಿಧಾನ’ ಕುರಿತಂತೆ ಚರ್ಚೆ ನಡೆಸಲು ಸಮಾಯಾವಕಾಶ ನಿಗದಿ ಮಾಡಲಾಗುತ್ತಿದೆ.
ಈ ಬಗ್ಗೆ ವಿವರಣೆ ನೀಡಿದ ಸಚಿವ ಮಾಧುಸ್ವಾಮಿ, ಫೆ.17ರಿಂದ ಅಧಿವೇಶನ ನಡೆಯಲಿದೆ. 21ರವರೆಗೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುವುದು. ಫೆ.18ರಂದು ಸರ್ಕಾರದ ಮುಂದಿರುವ ಏಳು ಮಸೂದೆ ಮತ್ತು ಎರಡು ಸುಗ್ರೀವಾಜ್ಞೆಗಳನ್ನು ಒಟ್ಟಿಗೆ ಮಂಡಿಸಲಿದೆ.
ಫೆ.18ರಂದೇ ಕಲಾಪ ಸಲಹಾ ಸಮಿತಿ ಸಭೆ ನಡೆಯಲಿದ್ದು, ಪ್ರತಿ ಮಸೂದೆ ಬಗ್ಗೆ ರ್ಚಚಿಸಲು ಕಾಲಾವಕಾಶ ನಿಗದಿ ಮಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು. ಕೈಗಾರಿಕೆ ಅಥವಾ ಸಂಸ್ಥೆ, ಉದ್ದಿಮೆಗಳು ಯಾವ ಉದ್ದೇಶಕ್ಕೆ ಕೃಷಿಯೇತರ ಭೂಮಿ ಪಡೆದಿದ್ದಾರೋ ಅದು ಈಡೇರದೆ ಇದ್ದಾಗ ಮಾರಾಟ ಮಾಡಲು ಬಯಸಿದರೆ, ಅವಕಾಶ ಕಲ್ಪಿಸಲು ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ.
ನ್ಯಾಷನಲ್ ಲಾ ಸ್ಕೂಲ್​ನಲ್ಲಿ ಕನ್ನಡಿಗರಿಗೇ ಮೀಸಲು ಕೊಡಿ ಎಂದು ಕಾನೂನು ಮಾಡಿದರೆ ನ್ಯಾಯಾಲಯ ಒಪ್ಪಿಕೊಳ್ಳಲ್ಲ, ಹೀಗಾಗಿ ಹತ್ತು ವರ್ಷ ಕರ್ನಾಟಕದಲ್ಲಿ ಓದಿದವರಿಗೆ ಈ ಸಂಸ್ಥೆಯಲ್ಲಿ ಶೇ.25 ಮೀಸಲು ಅವಕಾಶ ಕಲ್ಪಿಸುವ ರೀತಿ ಕಾನೂನು ತರಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
