ಬೆಂಗಳೂರು:ಸರ್ಕಾರಿ ಆರೋಗ್ಯ ಸೇವೆಯಲ್ಲಿ ವೈದ್ಯರ ಕೊರತೆ ನೀಗಿಸಿಕೊಳ್ಳಲು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ವೈದ್ಯರ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯದಲ್ಲಿ ವೈದ್ಯ ಪದವಿ ಪೂರೈಸಿದ ವಿದ್ಯಾರ್ಥಿಗಳ ಕಡ್ಡಾಯ ಸೇವೆ ಬಳಸಿಕೊಳ್ಳುವ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರುತ್ತಿದೆ.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ಈ ತೀರ್ಮಾನ ಜಾರಿಗೆ ತರಲು ಸುಗ್ರೀವಾಜ್ಞೆಯನ್ನೂ ತರಲಾಗುತ್ತಿದೆ. ಬಳಿಕ ಮುಂಬರುವ ಅಧಿವೇಶನದಲ್ಲಿ ಕಾಯ್ದೆ ರೂಪ ಕೊಡಲಾಗುತ್ತದೆ. ಸಂಪುಟ ಸಭೆಯ ನಿರ್ಣಯದ ಸಾರಾಂಶವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ವಿವರಿಸಿದರು. ಕರ್ನಾಟಕದಲ್ಲಿ ಎಂಬಿಬಿಎಸ್ ಅಥವಾ ವೈದ್ಯಕೀಯ ಪಿಜಿ ಕೋರ್ಸ್​ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಒಂದು ವರ್ಷ ಕಡ್ಡಾಯ ಸರ್ಕಾರಿ ಸೇವೆಗೆ ನೋಂದಾ ಯಿಸಿಕೊಳ್ಳುತ್ತಾರೆ. ಆದರೆ, ಅಭ್ಯರ್ಥಿಗಳ ಸೇವೆಯನ್ನು ಖಾಲಿ ಇರುವ ಹುದ್ದೆಗಳಿಗೆ ಮಿತಿಗೊಳಿಸಿ, ಕೌನ್ಸಲಿಂಗ್ ಮೂಲಕ ಮೆರಿಟ್ ಆಧಾರದಲ್ಲಿ ನಿಯೋಜಿಸಲು ಕಡ್ಡಾಯ ಸೇವಾ ತರಬೇತಿ ಅಧಿನಿಯಮ 2012ರ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದರು.
ನಿಯಮ ಏನಿತ್ತು?:2012ರ ಅಧಿನಿಯಮ ಮತ್ತು 2015ರ ನಿಯಮಗಳನ್ವಯ ಎಂಬಿಬಿಎಸ್ ಮತ್ತು ಮೆಡಿಕಲ್ ಪಿಜಿ ಅಭ್ಯರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜಿಸಲಾಗುತ್ತಿತ್ತು. 2023-24ನೇ ಸಾಲಿನಲ್ಲಿ 3,251 ಎಂಬಿಬಿಎಸ್ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಆದರೆ, ಈಗ ಕೇವಲ 1897 ಹುದ್ದೆಗಳು ಖಾಲಿ ಇವೆ. 1,354 ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ ಅಥವಾ ಒಂದೇ ಸ್ಥಳದಲ್ಲಿ ಹೆಚ್ಚುವರಿ ವೈದ್ಯರನ್ನು ನೇಮಿಸಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ 101.82 ಕೋಟಿ ರೂ. ಹೆಚ್ಚು ವೆಚ್ಚವಾಗುತ್ತದೆ. ಅಂತೆಯೇ, 2023-24ನೇ ಸಾಲಿನಲ್ಲಿ 3,515 ಪಿಜಿ ಅಭ್ಯರ್ಥಿಗಳು ಸೇವೆಗೆ ನೋಂದಾಯಿತರಾಗಿದ್ದಾರೆ. ಆದರೆ 1,270 ಹುದ್ದೆಗಳಷ್ಟೇ ಲಭ್ಯ ಇವೆ. ಹೆಚ್ಚುವರಿಯಾಗಿ 2,245 ವೈದ್ಯರನ್ನು ನಿಯೋಜಿಸುವುದು ಕಷ್ಟ ಸಾಧ್ಯ. ಅಲ್ಲದೇ ಎಲ್ಲರನ್ನೂ ಬಳಸಿಕೊಂಡರೆ 188.58 ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತದೆ.
ಅಕ್ಕಿ ವಿತರಣೆ ಯಥಾಸ್ಥಿತಿ:ಕೇಂದ್ರದಿಂದ ವಿತರಣೆಯಾಗುವ ಐದು ಕೆಜಿ ಅಕ್ಕಿ ಜತೆ ರಾಜ್ಯ ಸರ್ಕಾರದಿಂದಲೂ ಐದು ಕೆಜಿ ಆಹಾರ ಧಾನ್ಯ ವಿತರಿಸುವ ಯೋಜನೆಯನ್ನು ಪ್ರಸ್ತುತ ನಡೆಯುತ್ತಿರುವ ರೀತಿಯಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ವೆಚ್ಚದಲ್ಲಿ ಹೆಚ್ಚುವರಿಯಾಗಿ 5 ಕೆ.ಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಪ್ರತಿ ತಿಂಗಳು ಹೆಚ್ಚುವರಿಯಾಗಿ 2,29,343.19 ಮೆಟ್ರಿಕ್ ಟನ್ ಆಹಾರ ಧಾನ್ಯದ ಅಗತ್ಯವನ್ನು ಕಂಡುಕೊಳ್ಳಲಾಗಿತ್ತು. 5 ಕೆಜಿ ರಾಜ್ಯ ಸರ್ಕಾರದ ವೆಚ್ಚದ ಅಕ್ಕಿಯ ಅಲಭ್ಯತೆ ಉಂಟಾಗಿದ್ದರಿಂದ ಅಂತ್ಯೋದಯ ಅನ್ನ ಯೋಜನೆ ಮತ್ತು ಆರ್ಥಿಕ ಪಡಿತರ ಚೀಟಿ ಕುಟುಂಬದ ಪ್ರತಿ ಫಲಾನುಭವಿಗಳಿಗೆ 34.00 ರೂ.ನಂತೆ 5 ಕೆ.ಜಿ ಅಕ್ಕಿಗೆ 170 ರೂ. ಪಾವತಿಸುವುದನ್ನು ಮುಂದುವರಿಸಲಾಗುತ್ತದೆ.
ಬರಪೀಡಿತ ತಾಲೂಕುಗಳಿಗೆ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಈಗ ಕೇಂದ್ರ ಸಚಿವರ ಭೇಟಿಗೆ ಸಮಯಾವಕಾಶ ಕೊಡುತ್ತಿಲ್ಲ ಎಂದು ಸಂಪುಟ ಸಭೆ ಅಸಮಾಧಾನ ವ್ಯಕ್ತಪಡಿಸಿದೆ. ನೈಋತ್ಯ ಮುಂಗಾರು ಕೊರತೆಯಾಗಿ 195 ತಾಲೂಕು ಬರಪೀಡಿತ ಎಂದು ಘೊಷಿಸಿದ್ದೆವು. ಅದಲ್ಲದೆ 21 ತಾಲೂಕನ್ನು ಈ ಪಟ್ಟಿಗೆ ಸೇರಿಸುವ ನಿರ್ಣಯಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ ನಮ್ಮ ಸಚಿವರ ಭೇಟಿಗೆ ಕೇಂದ್ರ ಸಚಿವರು ಸಮಯಾವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ದೆಹಲಿಗೆ ತೆರಳಿ ಸಚಿವರನ್ನು ಭೇಟಿ ಮಾಡುವಂತೆ ಕಂದಾಯ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಎಚ್.ಕೆ. ಪಾಟೀಲ್ ಹೇಳಿದರು. ಕೃಷಿ, ತೋಟಗಾರಿಕೆ ನಷ್ಟ ಅಂದಾಜು -ಠಿ;33,770 ಕೋಟಿ ಆಗಿದ್ದು, -ಠಿ;4,414 ಕೋಟಿ ಕೃಷಿ ನಷ್ಟದ ಪರಿಹಾರಕ್ಕೆ ಬೇಡಿಕೆ ಇಡಲಾಗಿದೆ. ಪಶು ಸಂಗೋಪನೆ ಪರಿಹಾರಕ್ಕೆ 355 ಕೋಟಿ ರೂ., ಕುಡಿಯುವ ನೀರಿನ ಪೂರೈಕೆಗೆ 554 ಕೋಟಿಗೆ ಬೇಡಿಕೆ ಇಡುತ್ತಿದ್ದು, ಒಟ್ಟು 5,326.87 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗುವುದು ಎಂದರು.
ಮುಂದೇನು?:ಮುಂದಿನ ಸಾಲಿನಿಂದ ಖಾಲಿ ಹುದ್ದೆಗಳಿಗೆ ಅನುಗುಣವಾಗಿ ನೇಮಿಸಿಕೊಳ್ಳಲಾಗುತ್ತದೆ. ನೇಮಕಾತಿ ವೇಳೆ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಡಿ.4ರಿಂದ ಅಧಿವೇಶನ?:ಡಿಸೆಂಬರ್​ನಲ್ಲಿ ಎರಡು ವಾರ ಚಳಿಗಾಲದ ಅಧಿವೇಶನ ನಡೆಸಲು ಸಂಪುಟ ಸಭೆ ನಿರ್ಧರಿಸಿದೆ. ಅಧಿವೇಶನ ಯಾವಾಗ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲು ಸಂಪುಟ ಸಭೆ ತೀರ್ವನಿಸಿತು. ಡಿಸೆಂಬರ್ 4ರಿಂದ 14ರವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆಯೂ ಪ್ರಾಥಮಿಕ ಹಂತದ ಚರ್ಚೆ ಕೂಡ ನಡೆದಿದೆ.

ರಾಜ್ಯದ 100 ಸ್ಥಳಗಳಲ್ಲಿ ಗ್ರಾಮೀಣ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಕಾನೂನು ಮಾಡಿತ್ತು. ಪ್ರತಿ ನ್ಯಾಯಾಲಯಕ್ಕೆ ಅನುದಾನವನ್ನೂ ನೀಡಲಿದೆ. ರಾಜ್ಯದಲ್ಲಿ ಈಗ ಅನುಷ್ಠಾನ ಗೊಳಿಸಲಾಗುತ್ತಿದೆ. ಪಂಚಾಯಿತಿಗೆ ಅಥವಾ ಕ್ಲಸ್ಟರ್ ಆಫ್ ಪಂಚಾಯಿತಿ ಮಟ್ಟದಲ್ಲಿ ನ್ಯಾಯಾಲಯ ಸ್ಥಾಪನೆಯಾಗಲಿದೆ. ಮನೆ ಬಾಗಿಲಿಗೆ ನ್ಯಾಯದಾನ ಆಗಬೇಕು, ನ್ಯಾಯಕ್ಕಾಗಿ ಜನರು ಅಲೆದಾಡಬಾರದು ಎಂಬ ಹಿನ್ನೆಲೆಯಲ್ಲಿ ಜೆಎಂಎಫ್​ಸಿ ಮಟ್ಟದ ಕೋರ್ಟ್ ಸ್ಥಾಪನೆಗೆ ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 2 ಗ್ರಾಮ ನ್ಯಾಯಾಲಯಗಳು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲೂಕುಗಳಲ್ಲಿ ಕಾರ್ಯಾಚರಿಸುತ್ತಿವೆ. ಪ್ರತಿ ನ್ಯಾಯಾಲಯ ಸ್ಥಾಪನೆಗೆ ಒಂದು ಬಾರಿಗೆ ಹದಿನೆಂಟು ಲಕ್ಷ ರೂ. ಅನುದಾನ ಸಿಗಲಿದೆ. 100 ಕೋರ್ಟ್ ಸ್ಥಾಪನೆಗೆ ಅಂದಾಜಿನ ಪ್ರಕಾರ 25-30 ಕೋಟಿ ರೂ. ಬಿಡುಗಡೆ ಮಾಡಲುಒಪ್ಪಿಗೆ ನೀಡಲಾಗಿದೆ. ಹೈಕೋರ್ಟ್ ಜತೆ ಸೇರಿ ವ್ಯವಸ್ಥೆ ರೂಪಿಸಬೇಕಾಗುತ್ತದೆ. ನ್ಯಾಯಾಧೀಶರನ್ನು ಹೈಕೋರ್ಟ್ ನೇಮಿಸಲಿದ್ದು, ಮುಖ್ಯ ನ್ಯಾಯಮೂರ್ತಿ ಜತೆ ಈ ಬಗ್ಗೆ ಮಾತನಾಡಲಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ್ ವಿವರಿಸಿದರು. ಆರಂಭಿಕವಾಗಿ 400 ಗ್ರಾಮೀಣ ನ್ಯಾಯಾಲಯ ಸ್ಥಾಪಿಸಲು 100 ಕೋಟಿ ರೂ.ಗೆ ಬೇಡಿಕೆ ಇಡಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಆರಂಭಿಕವಾಗಿ 100 ನ್ಯಾಯಾಲಯ ಸ್ಥಾಪಿಸಲಾಗುತ್ತಿದೆ.
ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 14 =
Remember me
