ಮೈಸೂರು:ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವಿರುವ ಅಂಬಾರಿಯನ್ನು ಹೊತ್ತ ಅಭಿಮನ್ಯು ಅರಮನೆಯಿಂದ ಬನ್ನಿಮಂಟಪದತ್ತ ಹೆಜ್ಜೆ ಹಾಕಿದೆ. ದಸರಾ ಹಬ್ಬದ ಕೇಂದ್ರ ಬಿಂದುವಾಗಿರುವ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ತಳ್ಳಾಟ ಮತ್ತು ನೂಕಾಟವೂ ಕಂಡುಬಂದಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರು. ಸಂಜೆ 4.40 ರಿಂದ 5 ಗಂಟೆಯ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಪುಷ್ಪಾರ್ಚನೆಯನ್ನು ಮಾಡಬೇಕಿತ್ತು. ಆದರೆ 5 ಗಂಟೆ 9 ನಿಮಿಷಕ್ಕೆ ಪುಷ್ಪಾರ್ಚನೆ ಮಾಡಿದ್ದು, 9 ನಿಮಿಷ ತಡವಾಗಿದೆ. ಸದ್ಯ ಜಂಬೂ ಸವಾರಿ ಬನ್ನಿಮಂಟಪದ ಸಮೀಪ ಬರುತ್ತಿದೆ.
ಲಾಠಿ ಬೀಸಿದ ಪೊಲೀಸರುಕೆ.ಆರ್.ವೃತ್ತ, ಚಿಕ್ಕಗಡಿಯಾರ, ಹಸಿರು ಚಪ್ಪರ, ಆಯುರ್ವೇದ ವೃತ್ತ, ಭಾರತೀಯ ವೈದ್ಯಕೀಯ ಸಂಘ, ಪಂಚಮುಖಿ ಗಣಪತಿ ವೃತ್ತ, ಬಂಬೂಬಜಾರ್, ಹೈವೇ ವೃತ್ತ ಸೇರಿದಂತೆ ಎಲ್ಲ ಕಡೆಯೂ ನೂಕುನುಗ್ಗಲು ಕಂಡುಬಂತು. ಕೆಲವು ಕಡೆ ಪೊಲೀಸರು ಲಾಠಿ ಬೀಸಿ ಜನರನ್ನು ನಿಯಂತ್ರಣ ಮಾಡಿದರು. ಕೆ.ಆರ್.ವೃತ್ತದಲ್ಲಿ ತಳ್ಳಾಟ ಹೆಚ್ಚಾಗಿ ಕಂಡುಬಂತು.

ಜನದಟ್ಟನೆಯ ಜಾಗದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಿಲುಕಿ ಸಮಸ್ಯೆ ಎದುರಿಸಿದರು. ಕೆಲವು ಕಡೆ ನೂಕಾಟದಿಂದ ಮಹಿಳೆಯರು ಮತ್ತು ಮಕ್ಕಳು ಅಸ್ವಸ್ಥರಾದರು. ಈ ರೀತಿ ತೊಂದರೆ ಅನುಭವಿಸುತ್ತಿದ್ದ ಮಕ್ಕಳು ಮತ್ತು ಮಹಿಳೆಯರನ್ನು ಪೊಲೀಸರು ಜನರ ಗುಂಪುಗಳಿಂದ ಹೊರತಂದು ಮುಂದೆ ಕೂರಿಸುತ್ತಿದ್ದ ದೃಶ್ಯ ಕಂಡುಬಂತು.
ಲಾಟಿ ಏಟು: ಹೆಚ್ಚಾಗಿ ಕೆ.ಆರ್.ವೃತ್ತ ಹಾಗೂ ಚಿಕ್ಕಗಡಿಯಾರದ ಬಳಿ ನೂಕಾಟ ಕಂಡು ಬಂತು. ಇದರಿದ ಮಧ್ಯ ಸಿಲುಕಿದ್ದ ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ಸಮಸ್ಯೆ ಸಿಲುಕಿದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಲಾಟಿ ಬೀಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಡ್ರೈವಿಂಗ್​ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನ: ಕಾರು ನದಿಗೆ ಬಿದ್ದು ಒಂದೇ ಕುಟುಂಬದ ಐವರು ದುರಂತ ಸಾವು

ಹೆಣ್ಣು ಮಗುವಿಗೆ ಜನ್ಮ ಕೊಟ್ಟ ನಟಿ ಗೌತಮಿ ಗೌಡ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × two =
Remember me
