ಬೆಂಗಳೂರು: ಎಂಥದ್ದೇ ಸನ್ನಿವೇಶ ಬಂದರೂ ವಾರದ ಏಳೂ ದಿನಗಳ ಕಾಲ ಪ್ರತಿನಿತ್ಯವೂ 24 ಗಂಟೆ ಪಾಳಿಯಲ್ಲಿ ವಹಿವಾಟು ನಡೆಸುತ್ತಿದ್ದ ಮಾರುಕಟ್ಟೆ ಶನಿವಾರ ಸೈಲೆಂಟ್ ಆಗಿದೆ. ಲಾಕ್ ಡೌನ್ ಘೋಷಣೆಯಾಗಿದ್ದರೂ ಇಲ್ಲಿ ವಹಿವಾಟು ನಿಂತಿರಲಿಲ್ಲ. ಆದರೆ ಕರೊನಾ ಸನ್ನಿವೇಶಕ್ಕೆ ಯಾವುದೇ ಜಾತಿ, ಸಮುದಾಯದ ಹಂಗಿಲ್ಲದ ಕಾರಣ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದ ಪರಿಣಾಮ ಏನೆಂಬುದನ್ನು ಸಾಬೀತುಪಡಿಸಿದೆ. ಈ ಮಾರುಕಟ್ಟೆಗೆ ಇದ್ಯಾವುದೂ ಏನೂ ಅಲ್ಲವೇನೋ ಎಂಬಂತೆ ಕಾರ್ಯಾಚರಿಸುತ್ತಿತ್ತು. ಮುಂಜಾಗ್ರತಾ ಕ್ರಮಕ್ಕೂ ಇಲ್ಲಿ ಇರಲಿಲ್ಲ ಕಿಮ್ಮತ್ತು. ಕೆಲವು ದಿನಗಳಿಂದ ಇದನ್ನೆಲ್ಲ ಗಮನಿಸುತ್ತಿದ್ದ ಸರ್ಕಾರ, ಕೊನೆಗೂ ಶುಕ್ರವಾರ ಗಟ್ಟಿಮನಸ್ಸು ಮಾಡಿ ಧೃಡ ನಿರ್ಧಾರದೊಂದಿಗೆ ಈ ಮಾರುಕಟ್ಟೆಯನ್ನು ಬಂದ್ ಮಾಡಿಸುವ ನಿರ್ಧಾರ ತೆಗೆದುಕೊಂಡಿದೆ.
ಹೌದು ಇದು ರಸೆಲ್ ಮಾರುಕಟ್ಟೆಯ ಕುರಿತಾದ ಸುದ್ದಿ. ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಏ.14ರವರೆಗೆ ಶಿವಾಜಿನಗರದ ರಸೆಲ್ ಮಾರುಕಟ್ಟೆಯನ್ನು ಬಿಬಿಎಂಪಿ ಸ್ಥಗಿತಗೊಳಿಸಿದೆ. ಹಾಗೆ, ಎಂದೂ ನಿದ್ದೆಯನ್ನೇ ಮಾಡದ ಮಾರುಕಟ್ಟೆಯೊಂದು ಬಹುಶಃ ಇದೇ ಮೊದಲ ಬಾರಿಗೆ ಸೈಲೆಂಟಾಗಿದೆ!
ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಈ ಸೂಚನೆ ಪಾಲಿಸದ ಕಾರಣ ಏ.14 ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಜತೆಗೆ ಮಾರುಕಟ್ಟೆ ಸುತ್ತಮುತ್ತ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇಲ್ಲವೆಂದು ಪಾಲಿಕೆ ಪೂರ್ವ ವಲಯದ ಜಂಟಿ ಆಯುಕ್ತರಾದ ಕೆ.ಆರ್. ಪಲ್ಲವಿ ತಿಳಿಸಿದ್ದಾರೆ.
ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಬೈಕ್ ಸವಾರರು- ಮೂವರನ್ನು ಬಂಧಿಸಿದ ಹುಳಿಮಾವು ಪೊಲೀಸರು

BBMP has decided to close down the iconic Russell Market till April 14 midnight as#Social_Distancingmeasures were not being followed despite repeated warnings.#ಬಿಬಿಎಂಪಿಯು ಶಿವಾಜಿನಗರದ ರಸೆಲ್‌ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಏ.14, 2020 ವರೆಗೆ ಸ್ಥಗಿತಗೊಳಿಸಿದೆ.pic.twitter.com/Lzam1JnRvo
— Tushar Giri Nath IAS (@BBMPCOMM)April 3, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + five =
Remember me
