ಹಾವೇರಿ:ಯುದ್ಧಪೀಡಿತ ಯೂಕ್ರೇನ್​ನಲ್ಲಿ ರಷ್ಯಾ ಪಡೆ ನಡೆಸಿದ ಶೆಲ್​ ದಾಳಿಗೆ ಮಂಗಳವಾರ ಹಾವೇರಿ ಜಿಲ್ಲೆಯ ಯುವಕ ನವೀನ ಗ್ಯಾನಗೌಡರ ಬಲಿಯಾಗಿದ್ದು, ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
‘ಇಂದು ಬೆಳಗ್ಗೆ ಫೋನ್​ನಲ್ಲಿ ಮಾತನಾಡಿದ ನವೀನ ಮತ್ತೆ ಫೋನ್​ ಎತ್ತಿಲ್ಲ. ಎಂಬಿಬಿಎಸ್​ ಕಲಿತು ಬರುತ್ತೇನೆ ಎಂದು ಹೇಳಿ ಹೋಗಿದ್ದೆಲ್ಲೋ… ಎಲ್ಲಿ ಹೋದಿಯೋ ಮಗನೇ… ಎಂದು ಮೃತನ ತಾಯಿ ವಿಜಯಲಕ್ಷ್ಮಮ್ಮ ಹಾಗೂ ಸಂಬಂಧಿಕರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಂದೆ ಶೇಖನಗೌಡ್ರ ಮಗನ ಮರಣದ ಸುದ್ದಿ ಕೇಳಿ, ದಿಗ್ಭ್ರಮೆಗೊಂಡಿದ್ದು, ಯಾರೊಂದಿಗೂ ಮಾತನಾಡಲು ಆಗದ ಸ್ಥಿತಿಗೆ ತಲುಪಿದ್ದಾರೆ.
ನವೀನನ ತಂದೆಗೆ ಮಾಜಿ ಸಿಎಂ ಯಡಿಯೂರಪ್ಪ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಮೂರು ದಿನಗಳಲ್ಲಿ ಡೆಡ್ ಬಾಡಿ ತರಿಸೋಕೆ ಪ್ರಯತ್ನ ಮಾಡಲಾಗುವುದು. ನೀವು ಧೈರ್ಯವಾಗಿರಿ. ನಾವು ಯಾರೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವೇ ಧೈರ್ಯ ಕಳಕೊಂಡ್ರೆ ಕುಟುಂಬದ ಸ್ಥಿತಿ ಹೇಗೆ? ಎಂದು ಶೇಖನಗೌಡ್ರ ಅವರನ್ನು ಯಡಿಯೂರಪ್ಪ ಸಂತೈಸಿದರು.
ಯೂಕ್ರೇನ್​ನಲ್ಲಿ ಕ್ಷಿಪಣಿ ದಾಳಿಗೆ ​ಕನ್ನಡಿಗ ಬಲಿ: ಮುಗಿಲು ಮುಟ್ಟಿದೆ ಪಾಲಕರ ಆಕ್ರಂದನ

ಆಳಂದದಲ್ಲಿ ಉದ್ವಿಗ್ನ ಸ್ಥಿತಿ: ಶಿವಪೂಜೆ ಮಾಡಲು ಬಂದ ಹಿಂದೂ ಕಾರ್ಯಕರ್ತರಿಗೆ ಅರ್ಧದಲ್ಲೇ ತಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
