ಬೆಂಗಳೂರು:ಭಾರತೀಯ ಪರಂಪರೆಗೆ ಮನ ಸೋಲುವ ಅನೇಕ ವಿದೇಶಿಗರನ್ನು ನಾವು ಕಂಡಿರುತ್ತೇವೆ. ಅವರಲ್ಲಿ ಕೆಲವೇ ಕೆಲವರು ಹಿಂದೂ ಧರ್ಮಕ್ಕೆ ಮತಾಂತರ ಆಗುವವರು ಅಪರೂಪ. ಅದರಲ್ಲೂ ‘ನಾನು ಇಂತಹದ್ದೇ ಪಂಥದ ಅನುಯಾಯಿ ಆಗಬೇಕು’ ಎಂದು ಬಂದು ದೀಕ್ಷೆ ಪಡೆಯುವುದು ಇನ್ನೂ ಅಪರೂಪ. ಇಂತಹ ಅಪರೂಪದಲ್ಲಿ ಅಪರೂಪದ ಘಟನೆ ನಿನ್ನೆ ನಡೆದಿದ್ದು ರಷ್ಯನ್ ದಂಪತಿ ಜಗದ್ಗುರುಗಳಿಂದ ದೀಕ್ಷೆ ಪಡೆದಿದ್ದಾರೆ.
ಇದನ್ನೂ ಓದಿ:ಬಸವಕಲ್ಯಾಣದಲ್ಲಿ ಲಿಂಗಾಯತ ಮಹಾ ಅಧಿವೇಶನ
ರಷ್ಯಾದ ಮಾಸ್ಕೋದಲ್ಲಿ ನೆಲೆಸಿರುವ ದಿಮಾ ಮತ್ತು ಸ್ವೆಟಾ ದಂಪತಿ 2023ರ ಮಾ.10ರಂದು ಕಾಶಿ ಜಂಗಮವಾಡಿ ಮಠಕ್ಕೆ ಆಗಮಿಸಿ ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಂದ ಇಷ್ಟಲಿಂಗ ದೀಕ್ಷೆ ಹಾಗೂ ಮಂತ್ರ ದೀಕ್ಷೆ ಸ್ವೀಕರಿಸಿದರು. ರಷ್ಯಾ ನಿವಾಸಿ ದಿನೇಶ್ ಅವರ ಮಾರ್ಗದರ್ಶನದ ಮೇರೆಗೆ ಇಬ್ಬರೂ ಇಲ್ಲಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ:ವೀರಶೈವ ಧರ್ಮ ಇದು ವಿಶ್ವಧರ್ಮ. ಮಾನವ ಕಲ್ಯಾಣವನ್ನು ಬಯಸಿದ ಮಾನವ ಧರ್ಮ- ಚನ್ನವೀರಶ್ರೀ
ಮಹಾಸ್ವಾಮೀಜಿ, ಇಬ್ಬರಿಗೂ ವಿಧಿವತ್ತಾಗಿ ದೀಕ್ಷೆ ನೀಡಿದ್ದು ಅವರ ನಿರೀಕ್ಷೆಯಂತೆ ಶ್ರೀ ದಿಮಿಗೆ ಧರ್ಮೇಶ ಮತ್ತು ಸ್ವೆಟಾಗೆ ಸವಿತಾ ಎಂದು ಮರುನಾಮಕರಣ ಮಾಡಿದ್ದಾರೆ. ಈ ಜನರು 4 ದಿನಗಳ ಕಾಲ ಕಾಶಿಯಲ್ಲಿ ತಂಗಿದ್ದು ತಮ್ಮ ಆರಾಧನಾ ವಿಧಾನ ಹಾಗೂ ಶಿವಯೋಗ ವಿಧಾನಕ್ಕಾಗಿ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
