ಚಿತ್ರದುರ್ಗ: ಮಾರ್ಚ್​ನಲ್ಲಿ ನಡೆಯಬೇಕಿದ್ದ ರುಸ್ತುಂ-2 ಮಾನವ ರಹಿತ ವಿಮಾನದ ಪರೀಕ್ಷಾರ್ಥ ಹಾರಾಟವನ್ನು ಈಗ ನಡೆಸಲು ಡಿಆರ್​ಡಿಒ ಉದ್ದೇಶಿಸಿದೆ. 2019 ಸೆ.19ರಂದು ನಡೆದಿದ್ದ ಪರೀಕ್ಷಾರ್ಥ ಹಾರಾಟದ ವೇಳೆ ಯುಎವಿ ಜೋಡಿಚಿಕ್ಕೇನಹಳ್ಳಿ ಬಳಿ ನೆಲಕ್ಕೆ ಅಪ್ಪಳಿಸಿತ್ತು.
ಬಳಿಕ ರುಸ್ತುಂ-2 ಹೊಸ ವೈಶಿಷ್ಟ್ಯಳೊಂದಿಗೆ ಸಜ್ಜುಗೊಂಡಿದೆ. ಮೇ 14ರಿಂದ 20ರೊಳಗೆ ಚಳ್ಳಕೆರೆ ವರವು ಕಾವಲು ವೈಮಾನಿಕ ಪರೀಕ್ಷಾ ತಾಣದಲ್ಲಿ ಇದರ ಸಾಮರ್ಥ್ಯ ಸಾಬೀತುಪಡಿಸಲು ಡಿಆರ್​ಡಿಒ ಮುಂದಾಗಿದೆ. ಏರೊನಾಟಿಕಲ್ ಡೆವಲಪ್​ವೆುಂಟ್ ಎಸ್ಟಾಬ್ಲಿಷ್​ವೆುಂಟ್​ನ ಈ ಯುಎವಿ ಭಾರತೀಯ ರಕ್ಷಣಾ ಪಡೆಗಳ ಕಣ್ಗಾವಲು ಮತ್ತು ವಿಚಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗಲಿದೆ.
ಈಗ ಬದಲಾದ ಸುಧಾರಿತ ಇಂಜಿನ್​ನೊಂದಿಗೆ ಕಡಿಮೆ ತೂಕದ ವಿದ್ಯುತ್ ವಿತರಣಾ ಘಟಕ, ಉಪಗ್ರಹ ಸಂವಹನ, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸಿ, ಸಂವಹನ ಬುದ್ಧಿಮತ್ತೆ, ಸಿಂಥೆಟಿಕ್ ಅಪಾರ್ಚರ್ ರಾಡಾರ್, ಲಾಂಗ್, ಮೀಡಿಯಂ ರೇಂಜ್ ಎಲೆಕ್ಟ್ರೋ ಆಪ್ಟಿಕಲ್ ಮತ್ತಿತರ ಕಣ್ಗಾವಲು ವ್ಯವಸ್ಥೆಗಳು ಇದರಲ್ಲಿವೆ. ಈ ಹಿನ್ನೆಲೆಯಲ್ಲಿ ರುಸ್ತುಂ-2 ಮಾನವರಹಿತ ವಿಮಾನಗಳು ದೇಶದ ರಕ್ಷಣಾ ವ್ಯವಸ್ಥೆಗೆ ಹೊಸ ಆಶಾಕಿರಣವಾಗಿ ಗೋಚರಿಸಲಿವೆ ಎಂದು ಹೇಳಲಾಗುತ್ತಿದೆ. ಕಾಲದಿಂದ ಕಾಲಕ್ಕೆ ಡಿಆರ್​ಡಿಒ, ಅಗತ್ಯ ತಾಂತ್ರಿಕ ಸುಧಾರಣೆಗಳೊಂದಿಗೆ ಚಳ್ಳಕೆರೆ ವೈಮಾನಿಕ ತಾಣದಲ್ಲಿ ಈ ವಿಮಾನದ ಸಾಮರ್ಥ್ಯವನ್ನು ಹಲವು ಬಾರಿ ಪರೀಕ್ಷಿಸಿದೆ.
ಮುಂಬೈನಿಂದ ಕಳ್ಳ ದಾರಿ ಹಿಡಿದು ಬಂದವರಿಗೀಗ ಫಜೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
