ಚಿತ್ರದುರ್ಗ:ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾದ ರುಸ್ತುಂ-2 ಮಾನವ ರಹಿತ ಯುದ್ಧ ವಿಮಾನ ಚಳ್ಳಕೆರೆಯ ಡಿಆರ್​ಡಿಒ ವೈಮಾನಿಕ ತಾಣದಲ್ಲಿ ಮಾ.10ರಿಂದ 15ರವರೆಗೆ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ರಕ್ಷಣಾ ವ್ಯವಸ್ಥೆಗೆ ಹೊಸ ಆಶಾಕಿರಣ ಎಂದೇ ನಿರೀಕ್ಷಿಸಲಾದ ರುಸ್ತುಂ-2 ಈ ಹಿಂದೆಯೂ ಪರೀಕ್ಷೆಗೆ ಒಳಪಟ್ಟಿತ್ತು.
ಈಗ ಇನ್ನಷ್ಟು ಸುಧಾರಿತ ತಂತ್ರಜ್ಞಾನದೊಂದಿಗೆ ಸಾಮರ್ಥ್ಯ ಸಾಬೀತಿಗೆ ಸಿದ್ಧವಾಗಿದೆ. ಅತ್ಯಾಧುನಿಕ ಮತ್ತು ಅಧಿಕ ಶಕ್ತಿಯ ಇಂಜಿನ್​ನೊಂದಿಗೆ ಅಭಿವೃದ್ಧಿ ಪಡಿಸಲಾದ ರುಸ್ತುಂ-2 ಅನ್ನು ಅಮೆರಿಕದ ಪ್ರಿಡೇಟರ್ ಡ್ರೋನ್​ಗೆ ಸರಿಸಾಟಿ ಎನ್ನಲಾಗುತ್ತಿದ್ದು, ಇದಕ್ಕೆ ‘ತಪಸ್’ಎಂದೂ ಕರೆಯಲಾಗುತ್ತಿದೆ. ಸ್ವಯಂ ಚಾಲಿತ ಗುರುತಿಸುವಿಕೆ ವ್ಯವಸ್ಥೆ ಹೊಂದಿರುವ ಈ ವಿಮಾನವು ಶತ್ರುಗಳ ನೆಲೆ ಧ್ವಂಸಕ್ಕೆ ಭೂ, ವಾಯು ಹಾಗೂ ನೌಕಪಡೆಗಳಿಗೆ ಅಗತ್ಯ ನೆರವು ನೀಡಲಿದೆ.
ಸಾಮಾರ್ಥ್ಯ ಪರೀಕ್ಷೆ:ರುಸ್ತುಂ-2ನ ಮೊದಲ ಪರೀಕ್ಷಾರ್ಥ ಹಾರಾಟ 2016ರ ನವೆಂಬರ್ 16ರಂದು ಇಲ್ಲಿ ನಡೆದಿತ್ತು. ಕಳೆದ ವರ್ಷ ಸೆ.27ರಂದು ನಡೆದಿದ್ದ ಪರೀಕ್ಷಾರ್ಥ ಹಾರಾಟ ವೇಳೆ ಚಳ್ಳಕೆರೆ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಬಳಿ ಪತನವಾಗಿತ್ತು. ಡಿಆರ್​ಡಿಒ ಸಂಸ್ಥೆ ಕಾಲ ಕಾಲಕ್ಕೆ ಅಗತ್ಯವೆನಿಸುವ ತಾಂತ್ರಿಕ ಸುಧಾರಣೆ ಗಳೊಂದಿಗೆ ಮತ್ತೆ ಇದರ ಸಾಮಾರ್ಥ್ಯ ಪರೀಕ್ಷೆ ನಡೆಸಲಿದೆ.
ವಿಶೇಷತೆ ಏನು?
35 ಸಾವಿರ ಅಡಿ ಎತ್ತರದಲ್ಲಿ ಹಾರಾಡಬಲ್ಲ ರುಸ್ತುಂ-2 ಗಂಟೆಗೆ 225 ಕಿಮೀ ವೇಗ ಕ್ರಮಿಸಬಲ್ಲದು. ಗರಿಷ್ಠ 1,000 ಕಿಮೀ ದೂರ ಹಾರಬಲ್ಲದು. ನಿರಂತರ 25 ಗಂಟೆಗಳ ಕಾಲ ಹಾರಾಡುವ ಸಾಮರ್ಥ್ಯ ಹೊಂದಿದ್ದು, ಅಂದಾಜು 2 ಟನ್ ಭಾರವಿದೆ. ಪೈಲಟ್ ಸಹಿತ ಅಥವಾ ರಹಿತವಾಗಿ ಹಾರಬಲ್ಲ ಈ ಯುಎವಿ, ಸ್ವಯಂ ಚಾಲಿತವಾಗಿ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ. ಕ್ಷಿಪಣಿಗಳನ್ನು ಕೊಂಡೊಯ್ಯಬಲ್ಲ, ಉಡಾಯಿಸಬಲ್ಲ ವಿಶೇಷ ತಂತ್ರಜ್ಞಾನ ಹೊಂದಿರುವ ರುಸ್ತುಂ-2 ದೇಶದ ವಾಯುಡೆಗೆ ವಿಶೇಷ ಬತ್ತಳಿಕೆ ಆಗಲಿದೆ.
ಸೇನೆಗೆ ಸೇರಲು ಆಧಾರ್ ಕಿರಿಕಿರಿ: ಡೇಟಾ ಮಿಸ್​ವ್ಯಾಚ್, ಅಭ್ಯರ್ಥಿಗಳಲ್ಲಿ ಗೊಂದಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
