ಮಂಗಳೂರು:ಕಳೆದ ವರ್ಷ ಭಾರಿ ಗಲಾಟೆಗೆ ಕಾರಣವಾಗಿ ಸದ್ಯ ತಣ್ಣಗಾಗಿರುವ ಹಿಜಾಬ್​ ವಿವಾದ ಹೊಸ ರೂಪ ಪಡೆದುಕೊಂಡಿದೆ. ಹಿಜಾಬ್​ ಧರಿಸಲು ಅವಕಾಶ ಇಲ್ಲದ ಕಾರಣ ಇದಾಗಲೇ ಕೆಲವು ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಕೂಡ ಬರೆದಿರಲಿಲ್ಲ. ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ವಿದ್ಯಾರ್ಥಿನಿಯರು ಕಾಲೇಜುಗಳಿಂದಲೇ ಟ್ರಾನ್ಸ್​ಫರ್​ ಸರ್ಟಿಫಿಕೇಟ್​ (ಟಿ.ಸಿ) ವಾಪಸ್​ ಪಡೆದುಕೊಂಡಿದ್ದಾರೆ.
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕಾಲೇಜುಗಳಿಗೆ 145 ವಿದ್ಯಾರ್ಥಿನಿಯರು ಟಿ.ಸಿ. ವಾಪಸ್​ ಪಡೆದುಕೊಂಡಿದ್ದಾರೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ, ಧಾರ್ಮಿಕ ಉಡುಗೆಗಳಿಗೆ ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹಿಜಾಬ್​ಗೆ ಅವಕಾಶ ಇಲ್ಲದಿರುವ ಕುರಿತು ಆಕ್ರೋಶ ಹೊರಹಾಕಿದ ಹಿಜಾಬ್​ ಹೋರಾಟಗಾರ್ತಿ ಗೌಸಿಯಾ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣ ನೀಡಿ ಹಿಜಾಬ್​ಗೆ ರಾಜ್ಯ ಸರ್ಕಾರ ಹಿಜಾಬ್​ಗೆ ಅವಕಾಶ ನೀಡುತ್ತಿಲ್ಲ. ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಸಮಾನವಾದ ಶಿಕ್ಷಣ ಒದಗಿಸಲು ಸಾಧ್ಯವಾಗದಿದ್ದರೆ ಏನು ಪ್ರಯೋಜನ ಎಂದು ಕಿಡಿ ಕಾರಿದ್ದಾರೆ.
ಇದಾಗಲೇ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬರುವ ವಿವಿಧ ಕಾಲೇಜುಗಳಿಂದ ಶೇ.16ರಷ್ಟು ವಿದ್ಯಾರ್ಥಿನಿಯರು, ವಿವಿಧ ಸರ್ಕಾರ ಕಾಲೇಜುಗಳಿಂದ ಶೇ 34ರಷ್ಟು ವಿದ್ಯಾರ್ಥಿನಿಯರು ಹಾಗೂ ಅನುದಾನಿತ ಕಾಲೇಜುಗಳಿಂದ ಶೇ. 8ರಷ್ಟು ವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಇಂಥದ್ದೊಂದು ನಿರ್ಧಾರ ಕರ್ನಾಟಕದ ಬಹುತೇಕ ಎಲ್ಲಾ ಕಾಲೇಜುಗಳಿಂದಲೂ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ಇದಕ್ಕೆಲ್ಲಾ ಕಾರಣ ಎಂದರೆ ಬಿಜೆಪಿಯ ಸಚಿವರಿದ್ದಾರಲ್ಲ, ಬಿ.ಸಿ. ನಾಗೇಶ್​ ಅವರೇ’ ಎಂದು ಗೌಸಿಯಾ ಆರೋಪಿಸಿದ್ದಾರೆ. ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲಿ ಶೇ 30ರಷ್ಟು ವರ್ಗಾವಣೆ ಪತ್ರ ಪಡೆದಿರಬಹುದು ಇಲ್ಲವೇ ಡ್ರಾಪ್​ ಔಟ್​ ಆಗಿದ್ದಾರೆ. ಇದಕ್ಕೆಲ್ಲ ಅವರೇ ಕಾರಣ ಎಂದಿದ್ದಾರೆ.(ದಿಗ್ವಿಜಯ ನ್ಯೂಸ್​)
ವಿದ್ಯಾರ್ಥಿನಿ ಹೇಳಿರೋ ವಿಡಿಯೋ ಇಲ್ಲಿದೆ:

ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಮ್ಮೆ ಆಘಾತ: ಪಿಎಸ್​ಐ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಬಯಲು!

ಹನಿಟ್ರ್ಯಾಪ್ ಸುಳಿಯಲ್ಲಿ ಮಂಡ್ಯದ ಬಿಜೆಪಿ ಮುಖಂಡ? ಡ್ರಾಪ್​ ನಿಡೋ ನೆಪದಲ್ಲಿ ಲಾಡ್ಜ್​ಗೆ ಕರೆದೊಯ್ದು ವಿಡಿಯೋ!

VIDEO: ಸಿಎಂ ಪುತ್ರಿಯ ದರ್ಪ- ವೈದ್ಯರಿಗೆ ಕಪಾಳಮೋಕ್ಷ; ಮಗಳ ತಪ್ಪಿಗೆ ಕ್ಷಮೆ ಕೋರಿದ ಮಿಜೋರಾಂ ಮುಖ್ಯಮಂತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
