ಬೆಂಗಳೂರು:ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್‌ ಪಾವತಿಯ ವೇಳೆ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಡಾ.ಆರ್​. ಗೋವಿಂದರಾಜ್ ಅವರು ನಿಯಮಬಾಹಿರವಾಗಿ 680 ಕೋಟಿ ರೂ. ಪಾವತಿ ಮಾಡಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
ಗುತ್ತಿಗೆದಾರರಿಗೆ ಹಣ ಬಿಡುಗಡೆ ಜೇಷ್ಠತೆ ನಿಯಮ ಅನುಸರಿಸಿ ಹಣ ಬಿಡುಗಡೆ ಮಾಡಬೇಕೆಂಬ ನಿಯಮ ಉಲ್ಲಂಘಿಸಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಅ.2ರಂದು ಏಕಾಏಕಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಯನ್ನು ಸೀಲ್​ ಮಾಡಲಾಗಿತ್ತು. ಗೋವಿಂದರಾಜ್ ಅವರನ್ನು ಬಿಬಿಎಂಪಿ ಸೇವೆಯಿಂದ ಬಿಡುಗಡೆ ಮಾಡಿ, ಆರ್ಥಿಕ ಇಲಾಖೆಗೆ ವಾಪಾಸು ಕಳುಹಿಸಲಾಗಿತ್ತು.
ಇದೇ ವೇಳೆ ಆರೋಪದ ಕುರಿತು ತನಿಖೆಗೆ ಆದೇಶಿಸಲಾಗಿತ್ತು. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿರುವ ಆಯುಕ್ತರು, 43 ಪುಟಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇವರ ಕಚೇರಿಯಲ್ಲಿ ಇರುವ ಎಲ್ಲ ಕಡತಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅಕ್ರಮ ಬಯಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ:ಎಲ್ಲರೂ ‘ಐಟಂ’ಗಳೇ ಎಂದ ಕಾಂಗ್ರೆಸ್​- ಮಗಳನ್ನು ಹೀಗೆ ಕರೆದ್ರೆ ಸೋನಿಯಾ ಸುಮ್ಮನಿರ್ತಿದ್ರಾ ಎಂದ ಸಚಿವೆ!
ಈ ಕುರಿತು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಆಯುಕ್ತರು ಪತ್ರದ ಆಧಾರದ ಮೇಲೆ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಜೆ.ಶಶಿಧರ್ ಅವರು ಡಾ.ಆರ್. ಗೋವಿಂದ ರಾಜ್ ಅವರನ್ನು ಇದಾಗಲೇ ಅಮಾನತು ಮಾಡಲಾಗಿದೆ. ಅಲ್ಲದೇ ಇಲಾಖಾ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದದ್ದೇನು?* 14 ಹಣಕಾಸು ಆಯೋಗದ 421 ಕೋಟಿ ರು. ಅನುದಾನವನ್ನು ತಾತ್ಕಾಲಿಕ ಮಾರ್ಗಪಲ್ಲಟ.* ಆಫ್​ಲೈನ್‍ನಲ್ಲಿ ಕಾನೂನು ಬಾಹಿರವಾಗಿ 87.98 ಕೋಟಿ ರು. ಬಿಡುಗಡೆ.*ಬಿಬಿಎಂಪಿಯ ಕಾಮಗಾರಿಗಳಿಗೆ ರಾಜ್ಯ ಹಣಕಾಸು ಆಯೋಗದ ಅನುದಾನ 133 ಕೋಟಿ ರು. ಬಿಡುಗಡೆ.* ರಸ್ತೆಗಳ ವಾರ್ಷಿಕ ನಿರ್ವಹಣೆ ಎಸ್ಕ್ರೋ ಖಾತೆ ಜೇಷ್ಠತೆ ಉಲ್ಲಂಘಿಸಿ 21.38 ಕೋಟಿ ರೂ. ಬಿಡುಗಡೆ.ಬಿಬಿಎಂಪಿಯ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ಸರ್ಕಾರದ ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯ 12.26 ಕೋಟಿ ರೂ. ಬಿಡುಗಡೆ.* ಜಿಎಸ್‍ಟಿ ಬಗ್ಗೆ ತಪ್ಪು ಅಭಿಪ್ರಾಯದಿಂದ ಬಿಬಿಎಂಪಿಗೆ 4.39 ಕೋಟಿ ರೂ. ನಷ್ಟ.
ಸಚಿವೆಯನ್ನು ‘ಐಟಂ’ ಎಂದು ಕರೆದು ವಿವಾದ ಎಳೆದುಕೊಂಡ ಮಾಜಿ ಸಿಎಂ

ಆರ್​ಆರ್​ನಗರ: ಮತ್ತೆ ಶುರುವಾಯ್ತಾ ಅಕ್ರಮ? ಮತದಾರರಿಗೆ ಫೋನ್​ಕಾಲ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 4 =
Remember me
