ರೋಣ (ಗದಗ):ಅಮ್ಮಾ… ಗೆಳೆಯನಿಗೆ ಆ್ಯಕ್ಸಿಡೆಂಟ್‌ ಆಗಿ ಆಸ್ಪತ್ರೆ ಸೇರಿದ್ದಾನೆ. ನೋಡಿಕೊಂಡು ಬರುತ್ತೇವೆ ಎಂದು ಮನೆಯಲ್ಲಿ ಹೇಳಿಹೋಗಿದ್ದ ಮೂವರು ಪ್ರಾಣಸ್ನೇಹಿತರು ಶವವಾಗಿ ಹೋಗಿರುವ ದಾರುಣ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಕಳೆದ ಶನಿವಾರ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಮೂವರು ಯುವಕರ ಪರಿಚಯ ಸಿಕ್ಕಿದ್ದು, ಇವರೆಲ್ಲರೂಆಪ್ತ ಸ್ನೇಹಿತರಾಗಿದ್ದಾರೆ. ದರ್ಶನ ರಮೇಶ ರಾಜಪುರೋಹಿತ (19), ಶೌಕತ್ ಅಲಿ ಪಠಾಣ (22), ಮೆಹಪೂಜ್ (25) ಸಾವಿಗೀಡಾಗಿದ್ದರೆ, ಅಪ್ಸಾನಾ ಮುಲ್ಲಾ (20) ಗಾಯಗೊಂಡಿದ್ದಾರೆ.
ಈ ಮೂವರು ಸ್ನೇಹಿತರು ಆಸ್ಪತ್ರೆಗೆ ದಾಖಲಾಗಿದ್ದ ಇನ್ನೋರ್ವ ಸ್ನೇಹಿತನನ್ನು ನೋಡಲು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಆ ಕಾರು ಹೊತ್ತಿ ಉರಿದಿದೆ.
ಅದೇ ರಸ್ತೆಯಲ್ಲಿ ಹೊರಟಿದ್ದ ಲಾರಿ ಚಾಲಕನೊಬ್ಬ ಜೀವದ ಹಂಗು ತೊರೆದು ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಿನಲ್ಲಿದ್ದ ನಾಲ್ಕು ಯುವಕರನ್ನು ಬದುಕುಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಮೂವರು ಅಲ್ಲಿಯೇ ಮೃತಪಟ್ಟಿದ್ದರೆ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
15 ವರ್ಷವಾದ್ರೂ ಮುಗಿಯದ ಇದೆಂಥ ದ್ವೇಷನಪ್ಪಾ? ಜನಸಂದಣಿ ನಡುವೆ ಬಂದು 500ಕ್ಕೂ ಹೆಚ್ಚು ಸಲ ಕಚ್ಚಿದ ಹಾವು!

VIDEO: ಸಾವಿನಲ್ಲೂ ಸಾರ್ಥಕತೆ- ಡಾಕ್ಟರ್‌ ಆಗಬೇಕೆಂದು ಹಂಬಲಿಸಿದ್ದ ನವೀನ್‌ ಮೃತದೇಹ ವಿದ್ಯಾರ್ಥಿಗಳ ಅಧ್ಯಯನಕ್ಕೆ…

ಕಳ್ಳನನ್ನು ಹಿಡಿಯಲು ಅವನ ಹೆಸರಲ್ಲೇ ವಾಟ್ಸ್‌ಆ್ಯಪ್‌ ಗ್ರೂಪ್‌! ರಂಗೋಲಿ ಕೆಳಗೆ ನುಸುಳಿದ ಪೊಲೀಸರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
