ಹಾಸನ:ಇಂದು ನಸುಕಿನ ವೇಳೆ ಹಾಸನ ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಕ್ವಾಲೀಸ್‌ ಕಾರು ಮತ್ತು ಟಾಟಾ ಸುಮೋ ನಡುವೆ ಈ ಅಪಘಾತ ನಡೆದಿದೆ. ಘಟನೆಯಲ್ಲಿ 14 ಮಂದಿಗೆ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಟಾಸುಮೋಕ್ಕೆ ಹಿಂದುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ಹೇಳಿದೆ. ಕೆಂಚಟ್ಟಳ್ಳಿ ಬಳಿ ಇದ್ದ ಹಂಪ್ಸ್‌ ಬಳಿ ಟಾಟಾಸುಮೋ ಚಾಲಕ ವಾಹನ ನಿಧಾನ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಡಿಕ್ಕಿಯೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಕಾರಿನ ಈ ವೇಗಕ್ಕೆ ಟಾಟಾ ಸುಮೋ ಪಲ್ಟಿಹೊಡೆದಿದ್ದು, ಅದರಲ್ಲಿದ್ದ 10 ಮಂದಿಗೆ ಗಾಯಗಳಾಗಿವೆ.
ಟಾಟಾಸುಮೋದಲ್ಲಿದ್ದ ಎಲ್ಲರೂ ಮಳಬಾಗಿಲು ಮೂಲದವರಾಗಿದ್ದ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕ್ವಾಲಿಸ್‍ನಲ್ಲಿದ್ದವರು ಕೆಜಿಎಫ್ ಮೂಲದವರಾಗಿದ್ದು ಉಡುಪಿಗೆ ಮದುವೆಗೆ ಹೋಗುತ್ತಿದ್ದರು. ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಸುನೀಲ್‌ ಕುಮಾರ್‌, ನವೀನ್‌ ಕುಮಾರ್‌, ಪ್ರದೀಪ್ ಕುಮಾರ್ ಹಾಗೂ ಚಂದ್ರಶೇಖರ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ
ಮುಂದುವರೆದಿದೆ ಚಿತ್ರತಾರೆಯರ ಆತ್ಮಹತ್ಯೆಯ ಸರಣಿ: ತಮಿಳು ನಟ ನೇಣಿಗೆ ಶರಣು!

ತ್ರಿಕೋನ ಪ್ರೇಮ ಕಥೆಯ ಭೀಕರ ಅಂತ್ಯ: ಕ್ಲಾಸ್‌ ಒಳಗೆ ನುಗ್ಗಿ ಗೆಳೆಯನ ಮೇಲೆ ಗುಂಡು- ಪ್ರೇಯಸಿಯ ಕೊಲೆ!

ಅಪಘಾತ ಮಾಡಿ ಶವವನ್ನು ಕಾರಿನ ಮೇಲೆ 10 ಕಿ.ಮೀ. ಒಯ್ದು ಬೀಸಾಕಿದ ಭೂಪ- ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
