ಹಾವೇರಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಊರಿಗೆ ತೆರಳುತ್ತಿದ್ದ ಭಕ್ತರು ಇದ್ದ ವಾಹನ ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಹಾವೇರಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.
ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಕ್ರೂಸರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿರುವುದಾಗಿ ವರದಿಯಾಗಿದೆ. ಅಪಘಾತ ನಡೆದ ತಕ್ಷಣ ಸತೀಶ್ ಕಾಸರಕರ ಎಂಬ ವ್ಯಕ್ತಿ ಕ್ರೂಸರ್‌ನಲ್ಲಿ ಸಿಕ್ಕು ಹೊರಕ್ಕೆ ಬರಲಾರದೇ ಪರದಾಡಿದ್ದಾರೆ.
ಸತೀಶ್‌ ಅವರ ಕಾಲು ಕ್ರೂಸರ್‌ನಲ್ಲಿಯೇ ಸಿಲುಕಿಬಿಟ್ಟಿದೆ. ಅವರನ್ನು ಹೊರಕ್ಕೆ ತೆಗೆಯಬೇಕಾದರೆ ಕಾಲು ಮಾತ್ರ ಸಿಲುಕಿ ಹಾಕಿಕೊಂಡಿದ್ದರಿಂದ ಅವರನ್ನು ಹೊರಕ್ಕೆ ತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಈ ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪಡೆಯಲು ಹೋಗಿದ್ದ ಇವರೆಲ್ಲರೂ ಮಹಾರಾಷ್ಟ್ರದವರು ಎನ್ನಲಾಗಿದೆ. ಕ್ರೂಸರ್‌ನಲ್ಲಿ ಇವರು ಊರಿಗೆ ವಾಪಸಾಗುತ್ತಿದ್ದರು. ಅಲ್ಲಿಯೇ ಕ್ಯಾಂಟರ್‌ ನಿಂತಿತ್ತು. ಆದರೆ ವೇಗದಲ್ಲಿ ಬರುತ್ತಿದ್ದ ಕ್ರೂಸರ್‌ ಚಾಲಕನಿಗೆ ತಕ್ಷಣ ಬ್ರೇಕ್‌ ಹಾಕಲು ಸಾಧ್ಯವಾಗದೇ ನಿಂತ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿರುವುದಾಗಿ ಪ್ರಾಥಮಿಕ ವರದಿಗಳು ಹೇಳುತ್ತಿವೆ.
ಹಾವೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.
VIDEO: ಹೊಡಿಮಗ… ಹೊಡಿಮಗ… ಗ್ರಾಹಕರಿಗಾಗಿ ಚಾಟ್‌ ಅಂಗಡಿಯ ಮಾಲೀಕರ ಫಿಲ್ಮಿಸ್ಟೈಲ್‌ ಫೈಟಿಂಗ್‌

ಕ್ರಯ ಪತ್ರ ನೋಂದಾಯಿತವಾಗಿದ್ದರೆ ಕೇಸ್‌ ಹಾಕಿದರೆ ಯಾವುದೇ ರೀತಿಯಲ್ಲಿ ಯೋಜನವಿಲ್ಲ

ಪತ್ನಿ ತಿಂಗಳಲ್ಲಿ 15-20 ದಿನ ಬೋಲ್ಟ್‌ ಹಾಕಿ ಒಬ್ಬಳೇ ಮಲಗ್ತಾಳೆ- ಜೀವನ ಸಾಕಾಗಿದೆ; ಏನ್‌ ಮಾಡ್ಲಿ ಮೇಡಂ…

80 ವರ್ಷದ ವೃದ್ಧನಿಗೆ ಬಂತು 80 ಕೋಟಿ ರೂಪಾಯಿ ವಿದ್ಯುತ್‌ಬಿಲ್‌- ಮುಂದೇನಾಯ್ತು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
