ಬೆಂಗಳೂರು:ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ ‘ಜೊತೆಜೊತೆಯಲಿ’ ಕೆಲ ದಿನಗಳಿಂದ ಭಾರಿ ಚರ್ಚೆಯಲ್ಲಿದೆ. ಧಾರಾವಾಹಿಯ ನಾಯಕ ಅನಿರುದ್ಧ್​ (ಆರ್ಯವರ್ಧನ್​ ಪಾತ್ರಧಾರಿ) ಅವರನ್ನು ತಂಡ ಇದಾಗಲೇ ಧಾರಾವಾಹಿಯಿಂದ ಹೊರಗಟ್ಟಿದೆ. ಅನಿರುದ್ಧ್​ ಮತ್ತು ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್​ ಅವರ ನಡುವೆ ಕಿತ್ತಾಟ ಆಗಿರುವ ಹಿನ್ನೆಲೆಯಲ್ಲಿ ಅನಿರುದ್ಧ್​ ಅವರನ್ನು ಬಹಿಷ್ಕರಿಸಲಾಗಿದೆ.
ಆರ್ಯವರ್ಧನ್​ ಪಾತ್ರದಲ್ಲಿ ಅನಿರುದ್ಧ್​ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಇದಾಗಲೇ ಹಲವು ಅಭಿಮಾನಿಗಳು ಅದರಲ್ಲಿಯೂ ಮಹಿಳೆಯರು ಪ್ರತಿಭಟನೆಯನ್ನೂ ಮಾಡಿದ್ದಾರೆ. ಆದರೆ ಅವರನ್ನು ವಾಪಸ್​ ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಕಾರಣ, ಆರ್ಯವರ್ಧನ್​ ಪಾತ್ರಕ್ಕೆ ಯಾರು ಬರುತ್ತಾರೆ ಎನ್ನುವ ಕುತೂಹಲ ಧಾರಾವಾಹಿ ಪ್ರಿಯರಲ್ಲಿ ಇದೆ.
ಈ ನಡುವೆಯೇ, ಧಾರಾವಾಹಿಯಲ್ಲಿ ಹೊಸ ಪಾತ್ರದ ಪರಿಚಯ ಮಾಡಲಾಗಿದೆ. ಆರ್ಯವರ್ಧನ್​ ಅವರ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್ ಅವರನ್ನು ಪರಿಚಯಿಸಲಾಗಿದೆ. ಸದಾ ಭವಿಷ್ಯ ನುಡಿಯುವ ಜೋಗತಮ್ಮಾ ‘ ನಿಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬರು ಸಾಯುತ್ತಾರೆ’ ಎಂದು ಆರ್ಯವರ್ಧನ್​ ತಾಯಿಗೆ ಹೇಳಿದ್ದಾಳೆ. ಸಹಜವಾಗಿ ಆರ್ಯವರ್ಧನ್​ ಪಾತ್ರವನ್ನೇ ಸಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೀಗ ಕುತೂಹಲ ಎನ್ನುವಂತೆ, ಧಾರಾವಾಹಿಯ ಪ್ರೊಮೋ ಒಂದು ಬಿಡುಗಡೆಯಾಗಿದೆ. ನಿರ್ಮಾಪಕ ಆರೂರು ಜಗದೀಶ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ “ನಿಮ್ಮ ನೆಚ್ಚಿನ ಧಾರಾವಾಹಿ “ಜೊತೆ ಜೊತೆಯಲಿ” ಕುತೂಹಲಭರಿತ ಮಹಾ ತಿರುವುಗಳೊಂದಿಗೆ ನಿಮ್ಮ ಜೊತೆ ಜೊತೆಯಲಿ….” ಎಂದು ಬರೆದುಕೊಂಡಿದ್ದಾರೆ. ಅದರಲ್ಲಿ ಧಾರಾವಾಹಿಯ ಪ್ರೋಮೊ ಹಾಕಲಾಗಿದೆ.
ಈ ಪ್ರೋಮೊದಲ್ಲಿ ಒಂದೆಡೆ ಆರ್ಯವರ್ಧನ್​ ಅತ್ಯಂತ ವೇಗದಲ್ಲಿ ಕಾರು ಓಡಿಸಿಕೊಂಡು ಹೋಗುತ್ತಿದ್ದರೆ, ಇನ್ನೊಂದೆಡೆ ಅವರ ಸಹೋದರ ಹೋಗುತ್ತಿರುವ ಕಾರು ಕೂಡ ಅತಿವೇಗದಲ್ಲಿ ಸಾಗುತ್ತದೆ. ಅದೇ ಸಮಯದಲ್ಲಿ ಎದುರುಗಡೆಯಿಂದ ಬರುವ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆಯುತ್ತಾ ಸಾಗಿರುವ ದೃಶ್ಯ ಇದೆ. ವಿಡಿಯೋ ನೋಡಿದರೆ ಆರ್ಯವರ್ಧನ್​ ಅಪಘಾತದಲ್ಲಿ ಸಾಯುತ್ತಾನೆ ಎಂದು ಎನಿಸುತ್ತಿದೆ. ಈ ಪಾತ್ರವನ್ನು ಸಾಯಿಸುತ್ತಾರೆಯೋ ಅಥವಾ ಇದಾಗಲೇ ಕೆಲವು ಸಿನಿಮಾ, ಧಾರಾವಾಹಿಗಳಲ್ಲಿ ಮಾಡಿರುವಂತೆ ಪ್ಲಾಸ್ಟಿಕ್​ ಸರ್ಜರಿ ಮೂಲಕ ಆರ್ಯವರ್ಧನ್​ ಪಾತ್ರಕ್ಕೆ ಬೇರೆಯವರನ್ನು ತರುತ್ತಾರೆಯೋ ಎನ್ನುವ ಕುತೂಹಲ ಧಾರಾವಾಹಿ ಪ್ರಿಯರದ್ದು.
ವಿಡಿಯೋ ಇಲ್ಲಿದೆ ನೋಡಿ

ಇರುವೆ ತಂದಿಟ್ಟ ಸಂಕಷ್ಟ: ಬದುಕು ಹೈರಾಣ- ಊರನ್ನೇ ತೊರೆಯುತ್ತಿರುವ ಗ್ರಾಮಸ್ಥರು!
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿನ ಭವಿಷ್ಯ ಮೊದಲೇ ನುಡಿದಿದ್ದ ಸ್ವಾಮೀಜಿ! ಪೋಸ್ಟ್​ ವೈರಲ್​
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
