ಬೆಂಗಳೂರು:ಆತ್ಮೀಯ ಕನ್ನಡದ ಬಂಧುಗಳೆ, 42 ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆಮಾಡಿ, ಕಾಯಾ ವಾಚಾ ಮನಸಾ ಸತ್ಯಮಾರ್ಗದಲ್ಲಿ ಬದುಕಿದ್ದೇನೆ. ನನ್ನ ನೆಚ್ಚಿನ ಭಾಜಪ ರಾಜ್ಯದ ಮುಖ್ಯ ಮಂತ್ತಿಗಳು,ಮಂತ್ರಿಗಳು,ಶಾಸಕಮಿತ್ರರು,ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ ತಮಗೆ ಶಿರಬಾಗಿ ವಂದಿಸುವೆ..ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ…
ಹೀಗೆಂದು ನಟ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ. ಈ ಖುಷಿಗೆ ಕಾರಣ ಅವರಿಗೆ ಕುತೂಹಲ ಬೆಳವಣಿಗೆಯಲ್ಲಿ ರಾಜ್ಯಸಭೆ ಟಿಕೆಟ್ ಸಿಕ್ಕಿರುವುದು. ನಿನ್ನೆಯಷ್ಟೇ ಜಗ್ಗೇಶ್‌ ಅವರ ಹೆಸರನ್ನು ಪ್ರಕಟಿಸಲಾಗಿದೆ.
ರಾಜ್ಯಸಭೆಗೆ 15 ರಾಜ್ಯಗಳಿಂದ 57 ಸ್ಥಾನಗಳಿಗೆ ಜೂನ್ 10ರಂದು ನಡೆಯುವ ಚುನಾವಣೆಗೆ ಬಿಜೆಪಿ 16 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು ಅದರಲ್ಲಿ ಜಗ್ಗೇಶ್‌ ಅವರ ಹೆಸರೂ ಪ್ರಕಟವಾಗಿದೆ. ಉಳಿದಂತೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ (ಕರ್ನಾಟಕ), ಪಿಯೂಷ್ ಗೋಯಲ್ (ಮಹಾರಾಷ್ಟ್ರ), ಮುಖಂಡರಾದ ಲಕ್ಷ್ಮಿಕಾಂತ್ ವಾಜಪೇಯಿ, ರಾಧಾ ಮೋಹನ್ ಅಗರ್ವಾಲ್, ಸುರೇಂದ್ರ ನಾಗರ್, ಬಾಬುರಾಮ್ ನಿಷಾದ್, ದರ್ಶನಾ ಸಿಂಗ್, ಸಂಗೀತಾ ಯಾದವ್ (ಉತ್ತರ ಪ್ರದೇಶ), ಅನಿಲ್ ಬೋಂಡೆ (ಮಹಾರಾಷ್ಟ್ರ), ಘನಶ್ಯಾಮ್ ತಿವಾರಿ (ರಾಜಸ್ಥಾನ), ಕಲ್ಪನಾ ಸೈನಿ (ಉತ್ತರಾಖಂಡ), ಸತೀಶ್ ಚಂದ್ರ ದುಬೆ ಮತ್ತು ಶಂಭು ಶರಣ ಪಟೇಲ್ (ಬಿಹಾರ), ಕಿಶನ್ ಲಾಲ್ ಪನ್ವಾರ್ (ಹರಿಯಾಣ), ಕವಿತಾ ಪಾಟಿದಾರ್ (ಮಧ್ಯಪ್ರದೇಶ) ಇವರ ಹೆಸರನ್ನು ಪ್ರಕಟಿಸಲಾಗಿದೆ. ಈ ಚುನಾವಣೆಯಲ್ಲಿ ಗೆಲ್ಲುವುದು ಮುಂದಿನ ಜುಲೈನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಗೆ ಬಹಳ ಮಹತ್ವದ್ದಾಗಿದೆ.
ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿ ಆದ ವೇಳೆ ಬಿಜೆಪಿಗೆ ಬಂದಿದ್ದ ಜಗ್ಗೇಶ್ ನಂತರ ರಾಜಕೀಯ ಮುನ್ನೆಲೆಗೆ ಬರಲು ಸಾಕಷ್ಟು ಶ್ರಮಿಸಿದ್ದರು. ಪರಿಷತ್ ಸದಸ್ಯರಾಗಿ ನಂತರ ಯಶವಂತಪುರ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕು ಕಣಕ್ಕಿಳಿದು ಪರಾಜಿತಗೊಂಡಿದ್ದರು. ಇದೀಗ ರಾಜ್ಯಸಭೆಗೆ ಟಿಕೆಟ್ ನೀಡುವ ಮೂಲಕ ಜಗ್ಗೇಶ್ ಮತ್ತೆ ರಾಜಕೀಯ ಮುನ್ನೆಲೆಗೆ ಬರಲು ಬಿಜೆಪಿ ಹೈಕಮಾಂಡ್ ಅವಕಾಶ ಕಲ್ಪಿಸಿದೆ.
ಬೊಮ್ಮಾಯಿ ಸರ್ಕಾರದಿಂದ ಮಹತ್ವದ ಆದೇಶ: 11 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಔಷಧ ತರುವ ಮುನ್ನ ಎಚ್ಚರ! ರೋಗಿಯ ಬಲಿ ಪಡೆದ ಹುಬ್ಬಳ್ಳಿಯ ಮೆಡಿಕಲ್‌ ಷಾಪ್‌: ಮದುವೆ ಮನೆಯಲ್ಲಿ ಸೂತಕ

ಸಿಕ್ಕಾಪಟ್ಟೆ ಫೇಮಸ್​ ಆಗ್ತಿದೆಯಂತೆ ಈ ಬಿಯರ್​! ಆಹಾಹಾ ಎನ್ನೋ ಮೊದ್ಲು ಇದ್ರ ಬಗ್ಗೆ ತಿಳಿದುಕೊಂಡ್​ಬಿಡಿ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
