ಬೆಂಗಳೂರು:ಕೆಜಿಎಫ್​-2 ಚಿತ್ರದ ಭರ್ಜರಿ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್​ ಯಶ್​ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವಾರು ಹಿಟ್​ ಚಿತ್ರಗಳನ್ನು ನೀಡಿರುವ ಈ ನಟ, ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಯಶ್​ ದಂಪತಿ ಗೋವಾಕ್ಕೆ ಭೇಟಿ ಕೊಟ್ಟ ಬಳಿಕ ಆಗಿರುವ ಬೆಳವಣಿಗೆ ಹಾಗೂ ಈಚೆಗೆ ಜ್ಯೋತಿಷಿ ನುಡಿದಿರುವ ಭವಿಷ್ಯ!
ಯಶ್​ ಮತ್ತು ರಾಧಿಕಾ ಗೋವಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ. ಬಾಗಲಕೋಟ್ ಯಶಿಸಂ ಎನ್ನುವ ಇನ್​ಸ್ಟಾಗ್ರಾಂ ಪೇಜ್ ಈ ಭೇಟಿಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದೆ. ಇದಕ್ಕೆ ‘ಯಶ್ ಬಾಸ್ ಗೋವಾ ಸಿಎಂ ಪ್ರಮೋದ್​ ಸಾವಂತ್ ಹಾಗೂ ಕೆವಿಎನ್ ಪ್ರೊಡಕ್ಷನ್ ಜೊತೆ ಪಣಜಿಯಲ್ಲಿ’ ಎಂದು ಶೀರ್ಷಿಕೆ ಕೊಡಲಾಗಿದೆ. ಇದು ಯಶ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ಎಂದೇ ಬಣ್ಣಿಸಲಾಗುತ್ತಿದೆ.

ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಇತ್ತೀಚೆಗೆ ಬೆಂಗಳೂರಿನ ಜ್ಯೋತಿಷಿಯೊಬ್ಬರು ನುಡಿದಿರುವ ಭವಿಷ್ಯ. ದಶಕದ ನಂತರ ಯಶ್ ರಾಜಕೀಯಕ್ಕೆ ಬರುತ್ತಾರೆ ಎಂದು ಈ ಜ್ಯೋತಿಷಿ ನುಡಿದಿರುವುದು ಸುದ್ದಿಯಾಗಿದ್ದು, ಇದು ನಿಜವಾಗುತ್ತದೆ ಎಂದೇ ನಂಬಲಾಗಿದೆ. ಶಾರುಖ್​ ಖಾನ್​ ಅವರಂತೆ ಯಶ್​ ದೊಡ್ಡ ಸ್ಟಾರ್​ ಆಗುತ್ತಾರೆ ಎಂದು ಇದೇ ಜ್ಯೋತಿಷಿ ಹೇಳಿದ್ದರಂತೆ. ಕೆಜಿಎಫ್​-2 ಭಾರಿ ಸಂಚಲನ ಸೃಷ್ಟಿಸಿದ ನಂತರ ದೇಶಾದ್ಯಂತ ಯಶ್​ ಭಾರಿ ಜನಪ್ರಿಯತೆ ಪಡೆದುಕೊಂಡು ಈ ಮಾತು ನಿಜವಾಗಿರುವ ಕಾರಣ ರಾಜಕೀಯದ ಭವಿಷ್ಯವೂ ನಿಜವಾಗಲಿದೆಯೇ ಎಂಬ ಸಂದೇಹ ಅಭಿಮಾನಿಗಳಲ್ಲಿ ಮೂಡಿದೆ.
‘ಯಶೋಮಾರ್ಗ’ದ ಮೂಲಕ ಈಗಾಗಲೇ ಅವರು ಸಾಮಾಜಿಕ ಕೆಲಸ ಕೂಡ ಮಾಡಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನದಲ್ಲಿ ಅವರು “ನನ್ನ ಗುರಿ ಬೇರೆಯೇ ಇದೆ” ಎಂದೂ ಹೇಳಿಕೊಂಡಿದ್ದು, ರಾಜಕೀಯದ ಎಂಟ್ರಿಯ ಬಗ್ಗೆ ಇನ್ನಷ್ಟು ಪುಷ್ಟಿ ನೀಡುತ್ತಿದೆ.
ಶಾರುಖ್​ ನನ್ನನ್ನು ಎತ್ತಿಕೊಳ್ತಾರೆ ಎಂದು ಬರೀ ಕಡಲೆಕಾಯಿ ತಿಂದಿದ್ದೆ- ಗುಟ್ಟು ಬಿಚ್ಚಿಟ್ಟ ಟ್ವಿಂಕಲ್​ ಖನ್ನಾ

ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

ಮಸೀದಿ ಬಳಿ ಮೊಳಗಿತು ಹನುಮಾನ್​ ಚಾಲೀಸಾ! ಹೇಳಿದ್ದು ಕೇಳದಿದ್ದಕ್ಕೆ ಪಾಠವಂತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fourteen =
Remember me
