ಬೆಂಗಳೂರು:ಬಹುದಿನಗಳಿಂದ ಪ್ರೀತಿಸುತ್ತಿದ್ದ ಚಿತ್ರನಟರಾದ ಕೃಷ್ಣ ಮತ್ತು ಮಿಲನಾ ಅವರು ಇಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‍ಫುಲ್ ಮಂಟಪದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿದೆ.
ಬೆಳಗ್ಗೆ 9:30 ರಿಂದ 10:30ರ ನಡುವಿನ ಮುಹೂರ್ತದಲ್ಲಿ ವಿವಾಹ ಕಾರ್ಯ ಸಂಪನ್ನಗೊಂಡಿದೆ. ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇದಾಗಲೇ ಮೆಹಂದಿ ಹಾಗೂ ಅರಿಶಿಣ ಶಾಸ್ತ್ರಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೋಡಿ ಇದೀಗ ಮದುವೆ ಕಾರ್ಯಕ್ರಮದ ಫೋಟೋವನ್ನೂ ಶೇರ್‌ ಮಾಡಿದ್ದಾರೆ.

ನಿನ್ನೆ ಸಂಜೆ ಸಂಗೀತ ಕಾರ್ಯಕ್ರಮದ ನಡೆದಿತ್ತು. ಕೃಷ್ಣ ಮತ್ತು ಮಿಲನಾ ಮೊದಲಿಗೆ ಜತೆಯಾಗಿ ನಟಿಸಿದ್ದು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ. ಆ ನಂತರ ‘ಚಾರ್ಲಿ’ಯೆಂಬ ಇನ್ನೊಂದು ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು.
ಕ್ರಮೇಣ ಹತ್ತಿರವಾದ ಇಬ್ಬರೂ, ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಜತೆಯಾಗಿ ನಟಿಸುವುದಲ್ಲದೆ, ಆ ಚಿತ್ರದ ಬರವಣಿಗೆ ಮತ್ತು ನಿರ್ವಣದಲ್ಲೂ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಆ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪರಸ್ಪರ ಪ್ರೀತಿಸುತ್ತಿರುವುದಾಗಿ ಘೋಷಿಸಿದ್ದರು. ವರ್ಷಾಂತ್ಯಕ್ಕೆ ಮದುವೆ ಎಂದು ಹೇಳಿದ್ದರೂ, ಲಾಕ್​ಡೌನ್​ನಿಂದಾಗಿ ಈ ಪ್ರೇಮಿಗಳ ದಿನಕ್ಕೆ ಮದುವೆಗೆ ಮುಹೂರ್ತ ಸಿಕ್ಕಿತ್ತು.
VIDEO: ಪ್ರೇಮಿಗಳ ದಿನದಂದು ದರ್ಶನವಾಯ್ತು ಜ್ಯೂ. ಚಿರು ಮುದ್ದುಮುಖ- ನೀವೂ ನೋಡಿ ಪುಟಾಣಿಯ ಫೋಟೋ‌

ರಾಮಸೇತು ನಿರ್ಮಾಣಕ್ಕೆ 48 ಅಡಿ ಉದ್ದದ ಕೇಕ್‌ ಮೇಲೆ ಕಲ್ಲುಹೊತ್ತು ಸಾಗುತಿದೆ ವಾನರಸೇನೆ

ಮನೆಯಿಂದ ಹೊರಟ ತುಂಬು ಗರ್ಭಿಣಿ ದಾರಿ ಮಧ್ಯೆಯೇ ಮಗುವನ್ನು ಹೆತ್ತು ಪರೀಕ್ಷೆ ಬರೆದು ಬಂದಳು!

ಮನೆ ಮನೆಗೆ ಆಹಾರ ವಿತರಿಸಿದ ಮುದ್ದು‌ ಪಾಂಡಾ: ಫೋಟೋ ನೋಡಿ ಖುಷಿಪಟ್ಟರು, ಪೂರ್ತಿ ಓದಿ ಪೆಚ್ಚಾದರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + nineteen =
Remember me
