ಬೆಂಗಳೂರು:ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವು ರಾಜ್ಯಗಳು ಪ್ರವಾಹಪೀಡಿತವಾಗಿವೆ. ಇತ್ತ ಕರ್ನಾಟಕದ ವಿಷಯಕ್ಕೆ ಬರುವುದಾದರೆ ಬೆಂಗಳೂರು ಸೇರಿದಂತೆ ಹಲವು ನಗರಗಳು ಮುಳುಗಿ ಹೋಗಿವೆ. ಇದೀಗ ಬೆಂಗಳೂರಿನ ಆವಾಂತರಗಳ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಕಿಡಿ ಕಾರಿದ್ದಾರೆ.
ಬೆಂಗಳೂರು ದಿನೇ ದಿನೇ ಮುಳುಗಲು ಕಾರಣ ಎಂಎಲ್​ಎಗಳು ಹಾಗೂ ಎಂಪಿಗಳೇ ಎಂದು ಮಾಜಿ ಸಂಸದೆ ಟ್ವೀಟ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಯಿಂದ ಸೃಷ್ಟಿ ಆಗಿರೋ ಅವಾಂತರಕ್ಕೆ ಶಾಸಕರು ಹಾಗೂ ಜನಪ್ರತಿನಿಧಿಗಳೇ ಕಾರಣ, ಅವರ ರಿಯಲ್​ ಎಸ್ಟೇಟ್​ ಬಿಜಿನೆಸ್ಸೇ ಕಾರಣ ಎಂದು ರಮ್ಯಾ ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮ ಮಿತಿಮೀರಿದೆ. ಕರ್ನಾಟಕದಲ್ಲಿ ಎಷ್ಟು ಮಂದಿ ಎಂಎಲ್‌ಎ ಹಾಗೂ ಎಂಪಿಗಳು ರಿಯಲ್‌ ಎಸ್ಟೇಟ್ ಉದ್ಯಮ ಮಾಡುತ್ತಿದ್ದಾರೆ ಅನ್ನೋದು ನಿಮಗೆ ಗೊತ್ತಿದೆಯೇ ಎಂದು ಪ್ರಶ್ನಿಸಿರೋ ನಟಿ, ಇದಕ್ಕೆ ತಾವೇ ಉತ್ತರಿಸಿದ್ದಾರೆ. 28 ಮಂದಿ ಶಾಸಕರಲ್ಲಿ 26 ಮಂದಿ ಬಳಿ ರಿಯಲ್‌ ಎಸ್ಟೇಟ್ ಬಿಜಿನೆಸ್​ ಇದೆಯಂತೆ. ಈ ಬಗ್ಗೆ ನನಗೆ ಯಾರೋ ಹೇಳಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ದುಡ್ಡಿದ್ದವರಿಗೆ, ರಿಯಲ್ ಎಸ್ಟೇಟ್​ನಲ್ಲಿದ್ದವರಿಗೆ ಟಿಕೆಟ್ ಸಿಕ್ತಿದೆ. ಶಾಸಕ ಸ್ಥಾನಕ್ಕೆ ಸ್ಪರ್ಧಿಸೋರು 40 ಲಕ್ಷ ಖರ್ಚು ಮಾಡಲು ಅವಕಾಶ ಇದೆ. ಆದರೆ ಒಬ್ಬೊಬ್ಬರೂ ಕೋಟಿ ಕೋಟಿ ಖರ್ಚು ಮಾಡಿ ಶಾಸಕರಾಗುತ್ತಿದ್ದಾರೆ ಎಂದು ಮಾಜಿ ಸಂಸದೆ ಕಿಡಿ ಕಾರಿದ್ದಾರೆ.
ಈ 26 ರಿಯಲ್‌ ಎಸ್ಟೇಟ್ ಎಂಎಲ್‌ಎಗಳನ್ನು ಆಯ್ಕೆ ಮಾಡಿದ್ದು ಜನರೇ ಅಲ್ಲವೆ ಎಂದು ಪ್ರಶ್ನಿಸಿರುವ ಅವರು, ಈ ಬಾರಿ ಮತ ಚಲಾಯಿಸುವಾಗ ಸರಿಯಾಗಿ ಯೋಚನೆ ಮಾಡಿ ಎಂದಿದ್ದಾರೆ. ಮೊದಲು ಮತ ಚಲಾಯಿಸಿ, ಹೀಗೆ ಮತ ಚಲಾಯಿಸುವಾಗ ಯೋಚನೆ ಮಾಡಿ, ಕೆಲವರು ಮತವನ್ನೇ ಚಲಾಯಿಸುವುದಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನರು ವೋಟ್ ಮಾಡುವುದಿಲ್ಲ. ಆ ಮೇಲೆ ಜನಪ್ರತಿನಿಧಿಗಳನ್ನು ದೂಷಿಸಿದರೆ ಪ್ರಯೋಜನ ಇಲ್ಲ ಎಂದಿದ್ದಾರೆ.
And btw these 26 MLA’s into real estate are ‘elected’- It was ‘the people’s choice’. No point cribbing. So please vote (firstly) & vote wisely. Most people don’t even vote especially urban & then when this happens there’s fury. We are all to be blamed for the state we are in.— Ramya/Divya Spandana (@divyaspandana)September 6, 2022
And btw these 26 MLA’s into real estate are ‘elected’- It was ‘the people’s choice’. No point cribbing. So please vote (firstly) & vote wisely. Most people don’t even vote especially urban & then when this happens there’s fury. We are all to be blamed for the state we are in.
ಇರುವೆ ತಂದಿಟ್ಟ ಸಂಕಷ್ಟ: ಬದುಕು ಹೈರಾಣ- ಊರನ್ನೇ ತೊರೆಯುತ್ತಿರುವ ಗ್ರಾಮಸ್ಥರು!
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿನ ಭವಿಷ್ಯ ಮೊದಲೇ ನುಡಿದಿದ್ದ ಸ್ವಾಮೀಜಿ! ಪೋಸ್ಟ್​ ವೈರಲ್​
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
