1994ರಲ್ಲಿ ತೆರೆ ಕಂಡಿದ್ದ ಅನಂತ್​ ನಾಗ್​, ವಿನಯಾ ಪ್ರಸಾದ್​ ಅಭಿನಯದ ‘ಯಾರಿಗೂ ಹೇಳ್ಬೇಡಿ’ ಹಾಸ್ಯ ಚಿತ್ರ ಎಂದಾಕ್ಷಣ ನೆನಪಾಗುವುದು “ಚೆನ್ನಾಗ್​ ಹೇಳಿದ್ರಿ” ಡೈಲಾಗ್​. ಈ ಡೈಲಾಗ್​ ಅದೆಷ್ಟು ಜನಪ್ರಿಯವಾಗಿದೆಯೆಂದರೆ ಇಂದಿಗೂ ಹಾಸ್ಯಭರಿತ ಮಾತನಾಡುವಾಗ ಇದನ್ನು ಹೇಳುವುದುಂಟು.
ಇಂಥದ್ದೊಂದು ಅಪರೂಪದ ಡೈಲಾಗ್​ ಮೂಲಕ ಸದಾ ನೆನಪಿನಲ್ಲಿರುವ ನಟಿಯೆಂದರೆ ಸರ್ವಮಂಗಳ. ಇವರು ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
‘ಯಾರಿಗೂ ಹೇಳ್ಬೇಡಿ’ ಹೊರತಾಗಿ ‘ಭಂಡ ನನ್ನ ಗಂಡ’, ‘ಹೆಂಡ್ತಿಯರೇ ಹುಷಾರ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸರ್ವಮಂಗಳಾ ಅವರಿಗೆ 68 ವರ್ಷ ವಯಸ್ಸಾಗಿತ್ತು. ರಾತ್ರಿ 8.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಟನೆ, ಸಂಭಾಷಣೆ ಹಾಗೂ ನಿರ್ದೇಶನದಿಂದ ಜನಪ್ರಿಯತೆ ಗಳಿಸಿದ್ದ ಕುಣಿಗಲ್ ನಾಗಭೂಷಣ್ ಅವರ ಪತ್ನಿ ಸರ್ವಮಂಗಳಾ. 2013ರಲ್ಲಿ ಹೃದಯಾಘಾತದಿಂದ ನಾಗಭೂಷಣ್​ ಮೃತಪಟ್ಟಿದ್ದರು.
ಸುಮ್ಮನಳ್ಳಿಯ ಚಿತಾಗಾರದಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.
ಕಾರಿನ ಹಿಂಬದಿ ಸವಾರರೂ ಹಾಕ್ಬೇಕು ಬೆಲ್ಟ್​- ಬೈಕ್​ಗಳಿಗೆ ಇರ್ಲೇಬೇಕು ಸೈಡ್​ ಮಿರರ್:​ ಇಲ್ಲಿ ಬಂತು ರೂಲ್ಸ್​!

ಭಾರತದಲ್ಲಿ ಇಂದು ಕೋವಿಡ್​ ಲಸಿಕೆ ಮೊದಲು ಪಡೆದವರು ಯಾರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 3 =
Remember me
