ಕಲಬುರಗಿ:ಜಿಲ್ಲೆಯ ಆಳಂದ ಪಟ್ಟಣದಲ್ಲಿ ಶಿವಲಿಂಗ ಪೂಜೆ ಸಂಬಂಧ ಎರಡು ಕೋಮುಗಳ ನಡುವೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು 167 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತರಲ್ಲಿ 10 ಮಹಿಳೆಯರು ಸಹ ಸೇರಿದ್ದಾರೆ.
ಆಳಂದದ ಲಾಡ್ಲೆ ಮಶಾಕ್ ದರ್ಗಾ ಪರಿಸದಲ್ಲಿ ಈಶ್ವರಲಿಂಗ ಇದೆ. ಇತ್ತೀಚಿಗೆ ಈ ಲಿಂಗಕ್ಕೆ ಕಿಡಿಗೇಡಿಗಳು ಅವಮಾನಿಸಿದ್ದರು. ಹೀಗಾಗಿ ಶಿವರಾತ್ರಿ ನಿಮಿತ್ತ ಈಶ್ವರಲಿಂಗ ಶುದ್ಧೀಕರಣ ಅಭಿಯಾನವನ್ನು ಶ್ರೀರಾಮ ಸೇನೆ ಹಮ್ಮಿಕೊಂಡಿತ್ತು. ಇದಕ್ಕೆ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ಆಳಂದನಲ್ಲಿ ಜಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೂ ಶಿವಲಿಂಗ ಪೂಜೆಗಾಗಿ ಆಳಂದಕ್ಕೆ ಹಿಂದುಪರ ಕಾರ್ಯಕರ್ತರು ಹೊರಟಿದ್ದರು. ಇದಕ್ಕೆ ಸ್ಥಳೀಯ ಮುಸ್ಲಿಂ ಸಂಘಟನೆ ಹಾಗೂ ಸಮಾಜದಿಂದ ವಿರೋಧ ವ್ಯಕ್ತವಾಗಿತ್ತು.
ಪೂಜೆ ಮಾಡಲು ಹೊರಟ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ್ ಗುತ್ತೇದಾರ ರಾಜಕುಮಾರ್ ಪಾಟೀಲ್ ತೆಲ್ಕೂರ ಇತರರನ್ನು ಪೊಲೀಸರು ತಡೆದಿದ್ದರು. ದರ್ಗಾದೊಳಗೆ ಇವರನ್ನು ಬರಲ್ಲ ಬಿಡುವುದಿಲ್ಲ ಎಂದು ಮುಸ್ಲಿಂ ಸಮಾಜದವರು ಅತ್ತ ಪ್ರತಿಭಟನೆ ನಡೆಸಿದರು. ಎರಡೂ ಕಡೆ ಗುಂಪು ಸೇರಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಘಟನೆಯ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ಇಂದು ಸಹ ಬಂದ್ ವಾತಾವರಣವಿದೆ. ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಇವೆ. ಎಲ್ಲೆಡೆ ಪೊಲೀಸರು ಕಾಣುತ್ತಿದ್ದಾರೆ. ಎಸ್ಪಿ ಇಶಾ ಪಂತ್ ಆಳಂದನಲ್ಲೇ ಬೀಡು ಬಿಟ್ಟು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ.
ಆಳಂದ ಪಟ್ಟಣ ಸಂಪೂರ್ಣ ಶಾಂತವಿದೆ. ಸ್ಥಿತಿ ನಿಯಂತ್ರಣದಲ್ಲಿದೆ. ಇಡೀ ಪಟ್ಟಣ ಪೊಲೀಸರ ಸುಪರ್ದಿಯಲ್ಲಿದೆ ಎಂದು ಎಸ್ಪಿ ಇಶಾ ಪಂತ್ ಹೇಳಿಕೆ ನೀಡಿದ್ದಾರೆ. ನಿನ್ನೆಯ ಗಲಾಟೆ ಪ್ರಕರಣದಲ್ಲಿ 167 ಜನರಿಗೆ ಬಂಧಿಸಲಾಗಿದೆ‌. ಇನ್ನುಳಿದ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಲಾಗುತ್ತದೆ. ಪೊಲೀಸರ ಸಕಾಲಿಕ ಕ್ರಮದಿಂದ ಹೆಚ್ಚಿನ ಅನಾಹುತಗಳಾಗಿಲ್ಲ. ಘಟನೆ ಸಂಬಂಧ ಯಾರೂ ಸುಳ್ಳು ಮಾಹಿತಿ ಹಬ್ಬಿಸಬಾರದು. ನಿನ್ನೆಯ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂಬುದು ಸುಳ್ಳು. ಸುಳ್ಳು ಸುದ್ದಿ ಹರಡಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಕೆಲವರು ಮನೆ‌ ಮೇಲೆ ಕಲ್ಲು, ಬಡಿಗೆಗಳು ಜಮೆ ಮಾಡಿರುವ ಬಗ್ಗೆ ಇಂಟೆಲಿಜೆನ್ಸ್ ಮಾಹಿತಿ ಇತ್ತು. ಈ ಮಾಹಿತಿ ಪ್ರಕಾರ ಅವೆಲ್ಲವುಗಳನ್ನ ತೆಗೆದು ಹಾಕಿದ್ದೇವೆ. ಸಾಕಷ್ಟು ಬಡಿಗೆ ವಶಕ್ಕೆ ಪಡೆಯಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ.
‘ವಾಪಸ್​ ಕರೆಸಿಕೊಳ್ಳಿ’ ಎಂದು ಗೋಳಿಡುತ್ತಲೇ ಯೂಕ್ರೇನ್​ನಲ್ಲೂ ಭಾರತದ ವಿರುದ್ಧ ಪ್ರಚಾರ ಶುರು ಮಾಡಿದ! ಈತನ ಹಿಸ್ಟರಿ ಕೇಳಿ…

ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ! ಅಜಯ್​ ದೇವಗನ್ನೂ ಹಿಂದೆ ಬಿದ್ದಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − eleven =
Remember me
