ಕಲಬುರಗಿ:ಇದೇ 3ರಂದು ನಡೆದ ಗುಂಡಿನ ದಾಳಿಯಲ್ಲಿ ಕಲಬುರಗಿ ಜಿಲ್ಲೆಯ ಯೋಧ ರಾಜಕುಮಾರ ಮಾವಿನ್ ಹುತಾತ್ಮರಾಗಿದ್ದಾರೆ.
ತ್ರಿಪುರಾ ಗಡಿಯಲ್ಲಿ‌ ಗಸ್ತು ತಿರಗುತ್ತಿದ್ದ ಬಾಂಗ್ಲಾ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಭಾರತ- ಬಾಂಗ್ಲಾ ಗಡಿಯ ಧಲಾಯಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಎದೆಗೆ ಗುಂಡು ತಾಗಿ ಗಡಿ ಭದ್ರತಾ ಪಡೆ ಯೋಧ ಮಾವಿನ್‌ (38) ಹುತಾತ್ಮರಾಗಿದ್ದಾರೆ. ಇವರು ಜಿಲ್ಲೆಯ ಚಿಂಚನಸೂರು ಗ್ರಾಮದವರು.
ಇವರ ಪಾರ್ಥಿವ ಶರೀರ ಇಂದು ನಸುಕಿನ ಮೂರು ಗಂಟೆಯ ವೇಳೆಗೆ ಸ್ವಗ್ರಾಮ ತಲುಪಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ತ್ರಿಪುರಾ ಗಡಿಯಲ್ಲಿ‌ ನಡೆದ ಗುಂಡಿನ ದಾಳಿಯಲ್ಲಿ ಕಲಬುರಗಿ ಜಿಲ್ಲೆಯ ಆಳಂದದ ಯೋಧ ರಾಜಕುಮಾರ ಮಾವಿನ್ ಹುತಾತ್ಮರಾಗಿದ್ದು, ಅವರ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರಲಾಯಿತು.pic.twitter.com/0OqcTlOLhS
— Vijayavani (@VVani4U)August 5, 2021

ಇಂದು ಇದ್ದೇನೆ… ನಾಳೆ ಗೊತ್ತಿಲ್ಲ… ಹುತಾತ್ಮ ಯೋಧನ ಕೊನೆ ಸಂದೇಶ ಸತ್ಯವಾಗಿಯೇ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − three =
Remember me
