ಮಂಗಳೂರು:ಕೆಲ ತಿಂಗಳುಗಳ ಹಿಂದೆ ಶಾಲಾ- ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದರ ಕುರಿತು ಭಾರಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಉಡುಪಿಯ ಕಾಲೇಜೊಂದರಲ್ಲಿ ಶುರುವಾಗಿದ್ದ ಈ ಘಟನೆ ವಿದೇಶಗಳಲ್ಲಿ ಅದರಲ್ಲಿಯೂ ಮುಸ್ಲಿಂ ರಾಷ್ಟ್ರಗಳಲ್ಲಿಯೂ ಸುದ್ದಿಯಾಗಿ, ಅವರು ಕೂಡ ಭಾರತಕ್ಕೆ ಬುದ್ಧಿ ಹೇಳುವ ಮಟ್ಟಿಗೆ ಬಂದು ನಿಂತಿತ್ತು. ವಿವಾದ ತಣ್ಣಗಾಗುತ್ತಿದೆ ಎನ್ನುತ್ತಿರುವಾಗಲೇ ಮತ್ತೆ ಇದೇ ವಿಷಯವಾಗಿ ಗಲಾಟೆ ಶುರು ಮಾಡಲಾಗಿತ್ತು.
ಶಾಲಾ-ಕಾಲೇಜು ಮಾಡಿರುವ ನಿಯಮಗಳ ಅನ್ವಯ ಸಮವಸ್ತ್ರ ಧರಿಸುವುದು ಕಡ್ಡಾಯ, ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಇಲ್ಲ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಇದರ ನಂತರವೂ ಗಲಾಟೆ ಕಡಿಮೆಯಾಗಿರಲಿಲ್ಲ. ಹಲವು ವಿದ್ಯಾರ್ಥಿನಿಯರು ತರಗತಿಗಳನ್ನಷ್ಟೇ ಅಲ್ಲದೇ, ಪರೀಕ್ಷೆಗಳನ್ನೂ ಬಹಿಷ್ಕರಿಸಿದ ಘಟನೆ ನಡೆಯಿತು.
ಈ ವಿವಾದಕ್ಕೆ ಇದೀಗ ಟ್ವಿಸ್ಟ್​ ಸಿಕ್ಕಿದೆ. ತಾವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯು ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಆಡಳಿತ ಮಂಡಳಿಗಳು ಪಿಯು ಬೋರ್ಡ್​ಗೆ ಅರ್ಜಿ ಸಲ್ಲಿಸಿವೆ.
ಈ ವರ್ಷದಲ್ಲಿ ಪಿಯು ಕಾಲೇಜು ಆರಂಭಿಸಲು 14 ಸಂಸ್ಥೆಗಳು ಅರ್ಜಿ‌ ಸಲ್ಲಿಸಿದೆ. ಇದರಲ್ಲಿ 13 ಮುಸ್ಲಿಂ ವ್ಯಕ್ತಿಗಳು ನಡೆಸುತ್ತಿರುವ ಶಾಲೆಗಳಿಂದ ಅರ್ಜಿ ಸಲ್ಲಿಸಲಾಗಿದೆ. ಇದು ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಆದ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಸರ್ಕಾರದಿಂದ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ. ಹೀಗಾಗಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಕೂಲವಾಗಲಿ ಎಂದು ಮುಸ್ಲಿಮರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಪಿಯು ಕಾಲೇಜು ನಡೆಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ ಎನ್ನಲಾಗುತ್ತಿದೆ.
ಆದರೆ ಈ ಪೈಕಿ ಸದ್ಯ ಎರಡು ಕಾಲೇಜು ತೆರೆಯಲು ಪಿಯು ಬೋರ್ಡ್​ ಅನುಮತಿ ನೀಡಿದೆ. ಇನ್ನುಳಿದ 12 ಅರ್ಜಿಗಳು ಬಾಕಿ ಉಳಿದಿದ್ದು, ಅವರು ಇನ್ನೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಗುರುಪುರ ಬಳಿಯ ಸಹರಾ ಪಿಯು ಕಾಲೇಜಿಗೆ ಮತ್ತು ಸುಬ್ರಹ್ಮಣ್ಯ ಸಮೀಪದ ಕುಮಾರಸ್ವಾಮಿ ಪಿಯು ಕಾಲೇಜಿಗೆ ಪಿಯು ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ. ಇವುಗಳಲ್ಲಿ ಒಂದು ಮುಸ್ಲಿಮ್​ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ಹಾಗೂ ಇನ್ನೊಂದು ಮುಸ್ಲಿಮೇತರರು ಸಲ್ಲಿಸಿರುವ ಅರ್ಜಿ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ನೋಡಿ ನಾನಿನ್ನೂ ಕನ್ಯೆ, ಸಿಕ್ಕೇಬಿಡ್ತು ಸರ್ಟಿಫಿಕೇಟ್​! ಹೀಗೆಲ್ಲಾ ನಡೀತಿದೆ ಕನ್ಯತ್ವ ಪರೀಕ್ಷೆ- ಪಾಸ್​ ಆದ್ರೆ ಪ್ರಮಾಣಪತ್ರ

ಇನ್ಮುಂದೆ ರೈಲ್ವೆ ಪ್ರಯಾಣಿಕರ ಟೀ- ಕಾಫಿಗಿಲ್ಲ ಸೇವಾ ಶುಲ್ಕ: ಆದರೆ… ಉಳಿದ ಆಹಾರಗಳ ರೇಟ್​ ಹೀಗಾಯ್ತು ನೋಡಿ…

ಜಾತಿ ಕುರಿತು ವಿ.ವಿ ವಿದ್ಯಾರ್ಥಿಗಳಿಗೆ ಇದೆಂಥ ಪ್ರಶ್ನೆ? ಶುರುವಾಯ್ತು ಭಾರಿ ಪ್ರತಿಭಟನೆ- ತನಿಖೆಗೆ ತಂಡ ರಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twenty =
Remember me
