ಬೆಂಗಳೂರು:‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಷೋ ಮೂಲಕ ಮನೆಮಾತಾಗಿದ್ದ ಪುಟಾಣಿಯೆಂದರೆ ಆಕೆ ಸಮನ್ವಿ. ಆರು ವರ್ಷದ ಈ ಪುಟಾಣಿಗೆ ಫಿದಾ ಆಗದವರೇ ಇಲ್ಲ. ಬೆಳೆದು ದೊಡ್ಡವಳಾಗಿ ಇನ್ನೂ ಕೀರ್ತಿವಂತಳಾಗಬೇಕಿದ್ದ ಪುಟಾಣಿಯ ಜೀವವನ್ನು ಕಸಿದುಕೊಂಡಿತ್ತು ಕಳೆದ ಜನವರಿ ತಿಂಗಳು ಬೆಂಗಳೂರಿನಲ್ಲಿ ನಡೆದ ಅಪಘಾತ.
ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಬಾಲಕಿ ಮೃತಪಟ್ಟಿದ್ದಳು. ಮೊದಲೇ ಒಂದು ಮಗುವನ್ನು ಕಳೆದುಕೊಂಡಿದ್ದ ಇವಳ ಅಮ್ಮ ಖ್ಯಾತ ನಿರೂಪಕಿ ಅಮೃತಾ ನಾಯ್ಡು ಹಾಗೂ ತಂದೆ ರೂಪೇಶ್​ ಬಾಳು ಅಕ್ಷರಶಃ ನಲುಗಿ ಹೋಗಿದ್ದ ದಿನವದು. ಆದರೆ ಇವತ್ತು ಆ ಮನೆಯಲ್ಲಿ ಮತ್ತೆ ಖುಷಿ ಮನೆಮಾಡಿದೆ. ಸಮನ್ವಿಗೆ ಪುಟ್ಟ ತಮ್ಮನ ಆಗಮನವಾಗಿದೆ.

ಸಮನ್ವಿ ಸಾಯುವ ಸಂದರ್ಭದಲ್ಲಿಯೇ ಗರ್ಭವತಿಯಾಗಿದ್ದ ಅಮೃತಾ ಅವರು ಇಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರ ಪತಿ ರೂಪೇಶ್​ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗಳ ಸಾವಿನ ಸಂದರ್ಭದಲ್ಲಿ ತಮಗೆ ಬೆಂಬಲಿಸಿದ, ಸಮಾಧಾನ ಹೇಳಿದವರಿಗೆ ಈ ಸಂದರ್ಭದಲ್ಲಿ ಅವರು ಧನ್ಯವಾದ ಸಲ್ಲಿಸಿದ್ದಾರೆ. ನನ್ನೊಳಗೆ ಒಂದು ಪುಟ್ಟ ಜೀವವಿದೆ, ನಾನು ಆ ಬೆಳಕನ್ನು ನೋಡುತ್ತೇನೆ ಎಂದು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅಮೃತಾ ಬರೆದುಕೊಂಡಿದ್ದರು.
ಚಾಕೊಲೇಟ್ ಪ್ರಿಯರಿಗೆ ಶಾಕ್​! ವಿಶ್ವದ ಅತಿದೊಡ್ಡ ಕಾರ್ಖಾನೆಯಲ್ಲಿ ​ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ: ಫ್ಯಾಕ್ಟರಿ ಸ್ಥಗಿತ

ಮಗು ಗರ್ಭದಲ್ಲಿ ಇರುವಾಗಲೇ ದತ್ತು ತೆಗೆದುಕೊಳ್ಳಬಹುದಾ? ಹೈಕೋರ್ಟ್​ನಿಂದ ಹೊರಟಿದೆ ಮಹತ್ವದ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eight =
Remember me
