ತುಮಕೂರು:ಸಂಬಂಧಿಯೊಬ್ಬರ ಜತೆ ಪತ್ನಿ ವಿದೇಶಕ್ಕೆ ಹೋದಳು ಎಂಬ ಕಾರಣಕ್ಕೆ, ಪತಿ ತನ್ನ ಮೂವರೂ ಮಕ್ಕಳಿಗೆ ವಿಷವುಣಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಮನಮಿಡಿಯುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಹೆಂಡತಿ ಸಾಹೇರಾ ಬಾನು ಬಿಟ್ಟು ಹೋಗಿದ್ದಕ್ಕೆ ಮನನೊಂದ ಮಕ್ಕಳಿಗೆ ವಿಷವಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ನಗರದ ಪಿ.ಎಚ್ ಕಾಲೋನಿ ನಿವಾಸಿ ‌ ಸಮೀವುಲ್ಲಾ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರೆ, ಮುಗ್ಧ ಕಂದಮ್ಮಗಳು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿವೆ.
ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗು (ಶೈಮಾ (11) ಮೊಮೀನ್ (12) ಮತ್ತು ಸುಹೇಲ್ (7)) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಕ್ಕಳ ನರಳಾಟ ನೋಡಲಾಗುತ್ತಿಲ್ಲ. ತಾಯಿ ಮಾಡಿದ ತಪ್ಪಿಗೆ ಮಕ್ಕಳಿಗೆ ಇದೆಂಥ ಶಿಕ್ಷೆ ಎನ್ನುವಂತಾಗಿದೆ.
ದುಶ್ಚಟಗಳಿಗೆ ಬಲಿಯಾಗಿದ್ದ ಸಾಹೇರಾ, ಪತಿ ಮತ್ತು ಮಕ್ಕಳನ್ನು ಮರೆಯಲು ಸೌದಿಗೆ ಹೋಗಿದ್ದಳು ಎನ್ನಲಾಗಿದೆ. ಅಷ್ಟಕ್ಕೇ ಸುಮ್ಮನಾಗದೇ ಮೋಜು ಮಸ್ತಿ ಮಾಡುತ್ತಾ ವಿಡಿಯೋ ಕಾಲ್ ಮಾಡಿ ಗಂಡನನ್ನು ರೇಗಿಸುತ್ತಿದ್ದಳು. ಇದರಿಂದ ಸಮೀವುಲ್ಲಾ ಅವರಿಗೆ ತೀರಾ ನೋವಾಗಿದೆ. ಇದರಿಂದ ಅವರು ಇಂಥದ್ದೊಂದು ಕೃತ್ಯಕ್ಕೆ ಇಳಿದಿದ್ದಾರೆ. ಕೆಲಸ ಕೊಡಿಸುವುದಾಗಿ ಪ್ರಿಯಕರ ಈಕೆಯನ್ನು ಸೌದಿಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಸೌದಿಯಲ್ಲಿ ಮನೆ ಕೆಲಸ ಮಾಡಿಕೊಂಡಿರುವ ಸಾಹೇರಾ ಬಾನು ಕರೆ ಮಾಡಿದಾಗಲೆಲ್ಲಾ ಸಮೀವುಲ್ಲಾ ವಾಪಸ್​ ಬರುವಂತೆ ಕೇಳಿಕೊಂಡಿದ್ದಾರೆ. ಮಕ್ಕಳು ಕಣ್ಣೀರಿಟ್ಟರೂ ಈ ಅಮ್ಮನ ಕರಳು ಕೇಳಿಸಿಕೊಳ್ಳಲೇ ಇಲ್ಲ. ಇನ್ನು ತಾಯಿಯಲ್ಲದೇ ತಾನೊಬ್ಬನೇ ಮಕ್ಕಳನ್ನು ಹೇಗೆ ಸಲಹುವುದು ಎಂದು ತಿಳಿಯದ ಸಮೀವುಲ್ಲಾ ಹಿಂದೆ ಮುಂದೆ ಯೋಚನೆ ಮಾಡದೇ ಘೋರ ಕೃತ್ಯ ಎಸಗಿಯೇ ಬಿಟ್ಟಿದ್ದಾರೆ. ಎಲ್ಲಾ ಮಕ್ಕಳಿಗೂ ವಿಷ ಕೊಟ್ಟು ತಾವೂ ಕುಡಿದಿದ್ದಾರೆ.(ದಿಗ್ವಿಜಯ ನ್ಯೂಸ್​)
ಎರಡು ಸಾವಿರ ರೂ.ಗೆ ಯುವತಿಯ ಜತೆ ಮಂಚಕ್ಕೆ ಹೋದ ಇನ್ಸ್​ಪೆಕ್ಟರ್​: ಪೊಲೀಸರ ಬಲೆಗೆ ಗಂಡ-ಹೆಂಡ್ತಿ, ಅಪ್ಪ!

VIDEO: ಮಣ್ಣಿನೊಳಗೆ ಕೈಹಾಕಿ ವಿಗ್ರಹ ತೆಗೆದ ಕಳ್ಳ ಸ್ವಾಮೀಜಿ- ನಿಧಿ ಆಸೆ ತೋರಿಸಿ ಹಾಸನದ ದಂಪತಿಗೆ ಪಂಗನಾಮ!

ಗಿಳಿ ಹುಡುಕಿದವರಿಗೆ 80 ಸಾವಿರ ರೂ. ಬಹುಮಾನ ನೀಡಿದ್ದ ತುಮಕೂರಿನ ದಂಪತಿಯಿಂದ ಮತ್ತೊಂದು ಮಹತ್ವದ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
