ಬಾಗಲಕೋಟೆ:ಅಂತ್ಯಸಂಸ್ಕಾರಕ್ಕೆ ಹೋದವರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೋದವರಿಗೂ ಕರೊನಾ ಸೋಂಕು ಬಾಧಿಸುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ರೇಲ್ವೆ ಸ್ಟೇಷನ್ ಗ್ರಾಮದಲ್ಲಿ ನಡೆದಿದೆ.
ಒಂದೇ ಮನೆಯ ಹಾಗೂ ಸಂಬಂಧಿಕರು ಸೇರಿ ಒಟ್ಟು 18 ಜನರಿಗೆ ಸೋಂಕು ತಗುಲಿದೆ. ಇವರ ಪೈಕಿ 10 ಮಂದಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರೆ, ಎಂಟು ಮಂದಿ ಸಾಂತ್ವನ ಹೇಳಲು ಹೋಗಿದ್ದರು ಎಂದು ತಿಳಿದುಬಂದಿದೆ.
ಶಂಕ್ರಪ್ಪ ಗೌಡರ(48) ಮೇ 5 ರಂದು ಮೃತಪಟ್ಟಿದ್ದರು. ಕೋವಿಡ್ ಶಂಕೆ ಹಿನ್ನೆಲೆಯಲ್ಲಿ ಕೋವಿಡ್ ನಿಯಮಾವಳಿ ಪ್ರಕಾರವೇ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇವರ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದರು. ನಂತರ ಇದರ ಕುಟುಂಬದ ಕೆಲ ಸದಸ್ಯರು ಸಾಂತ್ವನ ಹೇಳಲು ಮನೆಗೆ ಹೋಗಿದ್ದರು.
ಕೆಲ ದಿನಗಳ ಬಳಿಕ ಆರೋಗ್ಯ ಇಲಾಖೆ ತಪಾಸಣೆಗೆ ಹೋಗಿದೆ. ಆಗ ತಪಾಸಣೆ ಮಾಡಿದಾಗ ಎಲ್ಲಾ 18 ಮಂದಿಗೆ ಸೋಂಕು ತಗುಲಿರುವುದು ತಿಳಿದಿದೆ. ಸದ್ಯ ಮೃತನ ಕುಟುಂಬಸ್ಥರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಈ ಗ್ರಾಮಕ್ಕೆ ಕೆಲ ವಲಸಿಗರು ಬಂದಿದ್ದು, ಅವರಿಂದಲೇ ಕೋವಿಡ್ ಹರಡಿರುವ ಶಂಕೆ ವ್ಯಕ್ತಪಡಿಸುತ್ತಿರುತ್ತಿದ್ದಾರೆ ಗ್ರಾಮಸ್ಥರು.
ಸೋಂಕಿನಿಂದ ಗುಣಮುಖರಾದ ಖುಷಿಯಲ್ಲಿದ್ದ ಯುವ ಅಧಿಕಾರಿಯನ್ನು ಏಕಾಏಕಿ ಬಲಿ ಪಡೆದ ಕರೊನಾ!

ಸೋಂಕಿತ ಬಾಲಕನಿಗೆ ಮರವೇ ಐಸೋಲೇಷನ್‌ ಸೆಂಟರ್‌! ಮನೆಯಲ್ಲಿಲ್ಲ ಜಾಗ, 11 ದಿನಗಳಿಂದ ಇಲ್ಲಿಯೇ ವಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
