ಬಾಗಲಕೋಟೆ:ಸಾರಾಯಿ ಬಂದ್ ಮಾಡಬೇಕೆಂದು ಪಂಚಾಯಿತಿ ಕಟ್ಟಡ ಏರಿದ ಕುಡುಕ ಹೈಡ್ರಾಮಾ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಕನೂರಿನಲ್ಲಿ ನಡೆದಿದೆ.
ಸಾರಾಯಿ ಅಂಗಡಿ ಬಂದ್ ಮಾಡಿಸದಿದ್ದರೆ ಪಂಚಾತಿಯಲ್ಲೇ ನೇಣು ಹಾಕಿಕೊಂಡು ಸಾಯ್ತಿನಿ ಎಂದು ಕಾಕಪ್ಪ ಮಾದರ ಎಂಬ ವ್ಯಕ್ತಿ ಕಟ್ಟಡ ಏರಿ ಕುಳಿತಿದಿದ್ದ. ಅಚ್ಚರಿಯ ವಿಷಯ ಎಂದರೆ ಕಂಠಪೂರ್ತಿ ಕುಡಿದುಕೊಂಡೇ ಈತ ಕಟ್ಟಡ ಏರಿ ಸಾರಾಯಿ ಅಂಗಡಿ ಬಂದ್​ ಮಾಡಲು ಆಗ್ರಹಿಸುತ್ತಿದ್ದ!
ನಾ ಮನೆ ಕೇಳಿಲ್ಲ, ಹೊಲ‌ ಕೇಳಿಲ್ಲ ಸಾರಾಯಿ‌ ಮಾರಾಟ ಬಂದ್ ಮಾಡಿಸಿ ಎಂದು ಕೇಳುತ್ತಿದ್ದೇನೆ, ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ಬಂದ್ ಮಾಡಿಸಿ, ನೀವು ಅಂಗಡಿ ಬಂದ್​ ಮಾಡಿಸಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಧಮ್ಕಿ ಹಾಕುತ್ತಿದ್ದ.
ಪಂಚಾಯಿತಿ ಕಟ್ಟಡದ ಮೇಲೆ ಕೂತು ಅರ್ಧ ಗಂಟೆಗೂ ಅಧಿಕ ಕಾಲ ಕೂಗಾಡುತ್ತಿದ್ದ ಈತನನ್ನು ಕೆಳಕ್ಕೆ ಇಳಿಸುವುದೇ ಸವಾಲಾಗಿ ಹೋಗಿತ್ತು. ಕೊನೆಗೆ ಗ್ರಾಮದ ಹಿರಿಯರು ಬಂದು ಆತನ ಮನವೊಲಿಕೆ ಮಾಡಿದ ಬಳಿಕ ವ್ಯಕ್ತಿ ಕೆಳಕ್ಕಿಳಿದ. (ದಿಗ್ವಿಜಯ ನ್ಯೂಸ್​)
ಇಲ್ಲಿದೆ ನೋಡಿ ವಿಡಿಯೋ:
ಸಾರಾಯಿ ಬಂದ್ ಮಾಡಬೇಕೆಂದು ಕುಡಿದುಕೊಂಡೇ ಪಂಚಾಯಿತಿ ಕಟ್ಟಡ ಏರಿದ ವ್ಯಕ್ತಿಯೊಬ್ಬ ಹೈಡ್ರಾಮಾ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಕನೂರಿನಲ್ಲಿ ನಡೆದಿದೆ.pic.twitter.com/RFOS2hNQrC
— Vijayavani (@VVani4U)September 5, 2022

ಮಠಗಳಲ್ಲಿ ಲೈಂಗಿಕ ಹಗರಣ: ಮಹಿಳೆಯರ ಆಡಿಯೋ ವೈರಲ್​- ಮನನೊಂದು ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ

ಬೆಳ್ಳಂಬೆಳಗ್ಗೆ ಹೋಟೆಲ್​ನಲ್ಲಿ ಅಗ್ನಿ ಅನಾಹುತ: ಹೊರಕ್ಕೆ ಬರಲಾಗದೇ ಗೋಳಾಟ- ಇಬ್ಬರ ಸಾವು

ಕೇರಳದ ಮಾಜಿ ಸಚಿವೆ ಶೈಲಜಾಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಅವಾರ್ಡ್​ ಪಡೆಯಲು ಬಿಡದ ಸರ್ಕಾರ- ಕಾರಣ ಇದಂತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + twelve =
Remember me
