ಬಾಗಲಕೋಟೆ:ಘಟಪ್ರಭಾ ನದಿಯಲ್ಲಿ ಪಂಪಸೆಟ್ ತರಲು ಹೋದ ರೈತನೊಬ್ಬ ಕೊಚ್ಚಿಹೋಗಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಚಿಕ್ಕ ಆಲಗುಂಡಿ ಗ್ರಾಮದ ಬಸವರಾಜ ಇರಕಣ್ಣವರ (38) ಕೊಚ್ಚಿಹೋಗಿದ್ದಾರೆ. ನದಿ ಮಧ್ಯದಲ್ಲಿ ಇದ್ದ ಪಂಪಸೆಟ್ ತೆಗೆಯಲು ಈಜಿಕೊಂಡು ಬಸವರಾಜ್ ಹೋಗಿದ್ದರು. 200 ಫೂಟ್ ವರೆಗೂ ಈಜಿದ್ದರು. ‌ನೀರು ವೇಗವಾಗಿ ಹರಿಯುತ್ತಿದ್ದರಿಂದ ಮುಂದಕ್ಕೆ ಹೋಗಲು ಆಗಲಿಲ್ಲ. ವಾಪಸ್​ ಕೂಡ ಅವರಿಗೆ ಬರಲು ಸಾಧ್ಯವಾಗಲಿಲ್ಲ. ದಡದಿಂದ ಹಗ್ಗ ಹಾಕಿ ಅವರನ್ನು ಎಳೆಯಲು ಮಾಡಿದ ಪ್ರಯತ್ನವೂ ಯಶಸ್ಬಿಯಾಗಿಲ್ಲ. ನಂತರ ಅವರು ಕೊಚ್ಚಿಕೊಂಡು ಹೋಗಿದ್ದಾರೆ.
2019ರಲ್ಲಿ ಪ್ರವಾಹ ಉಂಟಾಗಿ ವಿದ್ಯುತ್ ಮೋಟಾರ್ ಹಾಳಾಗಿದ್ದವು. ಈಗ ಮತ್ತೆ ಮಳೆಯಿಂದ ಅದು ಹಾಳಾಗಬಾರದು ಎನ್ನುವ ಕಾರಣಕ್ಕೆ ಬಸವರಾಜ ಅವರು ಅದನ್ನು ಕಾಪಾಡಿಕೊಳ್ಳಲು ಹೋಗಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸುತ್ತಿದ್ದಾರೆ. ನದಿಯಲ್ಲಿ ನೀರಿನ ಹರಿವು 52 ಸಾವಿರ ಕ್ಯೂಸೆಕ್ ಇದೆ. ಇದರಿಂದಾಗಿ ನೀರು ವೇಗವಾಗಿ ಹರಿಯುತ್ತಿದ್ದು ಕಾರ್ಯಾಚರಣೆಗೂ ತೊಂದರೆಯಾಗುತ್ತಿದೆ. ನೀರಿನ‌ ಹರಿವು ಜಾಸ್ತಿ ಇದ್ದಿದ್ದರಿಂದ ಮುಂದಕ್ಕೆ ಹರಿದು ಹೋಗಿರಬೇಕು. ಆದ್ದರಿಂದ ಅವರು ಇದುವರೆಗೂ ಪತ್ತೆಯಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿ ಹೇಳುತ್ತಿದ್ದಾರೆ.
ಬಸವರಾಜ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಂತ ಜಮೀನು ಇಲ್ಲದೇ ಲಾವಣಿ ಮಾಡಿಕೊಂಡಿದ್ದ ಮಗ, ದುಡಿವ ಯಜಮಾನನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಪತ್ನಿ ತುಳಸವ್ವ, 11 ವರ್ಷದ ಮಗಳು ರೇಖಾ ಅವರ ಕಣ್ಣೀರು ನೋಡಲಾಗುತ್ತಿಲ್ಲ.(ದಿಗ್ವಿಜಯ ನ್ಯೂಸ್​)
ವಿಚ್ಛೇದನಕ್ಕೆಂದು ಬಂದ ಐವರು ತುಮಕೂರಿನ ದಂಪತಿ, ಹಾರ ಬದಲಿಸಿಕೊಂಡು ಜತೆಯಾಗಿ ಹೋದರು!

VIDEO: ಕೋಲಾರದಲ್ಲಿ ತಯಾರಾಗ್ತಿದೆ ದೇಶದ ಅತಿದೊಡ್ಡ ತ್ರಿವರ್ಣ ಧ್ವಜ: ಆಹಾ! ಎಷ್ಟೆಲ್ಲಾ ವಿಶೇಷತೆಗಳು…

ಕಾಂಗ್ರೆಸ್​ನ ‘ಸ್ವಾತಂತ್ರ್ಯ ನಡಿಗೆ’ಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬರುತ್ತಿರುವಿರಾ? ವಿಶೇಷ ಸೌಲಭ್ಯದ ಮಾಹಿತಿ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
