ನವದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್​ 4ರಂದು ಸಿಸಿಬಿ ಪೊಲೀಸರಿಂದ ಬಂಧಿಯಾಗಿದ್ದು, ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರುವ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಮಂಜೂರಾಗಿದೆ.
ಇಂದು ಸುಪ್ರೀಂಕೋರ್ಟ್​ ನಟಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ 140 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ ನಟಿಗೆ ಬಿಡುಗಡೆಯಾದಂತಾಗಿದೆ.
ಹೈಕೋರ್ಟ್​ ಜಾಮೀನು ನೀಡದೇ ಇರುವುದನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ದಸರಾ, ದೀಪಾವಳಿ ಕೊನೆಗೆ ಹೊಸ ವರ್ಷ ಬಂದರೂ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಕೋರ್ಟ್​ ಕೆಲವೊಂದು ಕಾರಣಗಳಿಂದ ಅರ್ಜಿಯ ವಿಚಾರಣೆಯನ್ನು ಮುಂದೂಡುತ್ತಾ ಬಂದಿತ್ತು.
ಅಂತೂ ಇದೀಗ ಜಾಮೀನು ಮಂಜೂರು ಆಗಿದೆ. ಕಳೆದ ಮೂರು ತಿಂಗಳಿನಿಂದ ರಾಗಿಣಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಇವರ ವಿರುದ್ಧ ಇರುವ ಆರೋಪಗಳು ಸುಳ್ಳು. ಇವರನ್ನು ಬಿಡುಗಡೆ ಮಾಡಿ ಎಂದು ರಾಗಿಣಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು. ಇದರ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದ್ದು, ತಾತ್ಕಾಲಿಕ ರಿಲೀಫ್​ ಅಂತೂ ಸಿಕ್ಕಿದೆ.
ಮೊದಲ ರಾತ್ರಿಯೇ ಪತ್ನಿಗೆ ಗುಟ್ಟು ಹೇಳಿದೆ- ಆಕೆ ಕ್ಷಮಿಸಿದರೂ ನನ್ನ ಮೇಲೆಯೇ ನನಗೆ ಅಸಹ್ಯ ಹುಟ್ಟಿದೆ…

2021 ಆರಂಭ ಕೊಡಲಿಲ್ಲ ಲಕ್​: ರಾಗಿಣಿ ಬೇಲ್​ ಅರ್ಜಿ ಮುಂದೂಡಿಕೆ

ಕಾರಿನೊಳಗೆ ಪ್ರೇಯಸಿ ಜತೆ… ಪತ್ನಿ ಕೈಲಿ ಸಿಕ್ಕಿಬಿದ್ದ ಇಂಜಿನಿಯರ್! ಮುಂದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
