ಬೆಂಗಳೂರು:ಇತ್ತೀಚೆಗೆ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವತಿಯ ಮೇಲೆ ನಡೆದಿದ್ದ ವಿಕೃತ ಗ್ಯಾಂಗ್‌ರೇಪ್‌ ಕೇಸ್‌ ಇಡೀ ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಬಾಂಗ್ಲಾದೇಶದ ಅಕ್ರಮ ವಲಸಿಗರು ಬೆಂಗಳೂರಿನಲ್ಲಿ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಯುವತಿಯನ್ನು ರೇಪ್‌ ಮಾಡಿ ಆಕೆಯ ಗುಪ್ತಾಂಗಕ್ಕೆ ಬಾಟಲಿಚೂರುಗಳನ್ನು ತುರುಕಿ ವಿಕೃತಿ ಮೆರೆದಿರುವ ಕೇಸ್‌ ಇದಾಗಿದ್ದು, ಈ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ತನಿಖೆ ಚುರುಕಾಗುತ್ತಿದ್ದಂತೆಯೇ, ಅವರ ಜಾಡನ್ನು ಹಿಡಿದು ಹೋದ ಪೊಲೀಸರಿಗೆ ಇವರ ಬಳಿ ಸಹಸ್ರಾರು ವಿಡಿಯೋಗಳು ಸಿಕ್ಕಿವೆ. ಅದನ್ನು ನೋಡಿ ಪೊಲೀಸರೇ ಶಾಕ್‌ ಆಗಿದ್ದಾರೆ. ಏಕೆಂದರೆ ಮೊಬೈಲ್‌ನಲ್ಲಿ ಶೂಟ್‌ ಮಾಡಿರುವ ಈ ವಿಡಿಯೋಗಳಲ್ಲಿ ಇವರು ವಿಕೃತಿ ಮೆರೆದಿರುವ ದೃಶ್ಯಗಳಿವೆ, ಮಾತ್ರವಲ್ಲದೇ ಅರೆಬೆತ್ತಲೆ ಇರುವ ಹೆಣ್ಣುಮಕ್ಕಳ ವಿಡಿಯೋಗಳೂ ಇದ್ದು, ಯುವಕ – ಯುವತಿಯರು, ಅರೆಬೆತ್ತಲೆಯಾಗಿ ಡಾನ್ಸ್ ಮಾಡುತ್ತಿರುವ ದೃಶ್ಯಗಳೂ ಅದರಲ್ಲಿವೆ.
ಯುವಕರ ಮೊಬೈಲ್ ಪರಿಶೀಲನೆ ವೇಳೆ ಇವುಗಳು ಸಿಕ್ಕಿವೆ. ಬಾಂಗ್ಲಾ ಯುವತಿಯ ಮೇಲೆ ಗ್ಯಾಂಗ್‌ರೇಪ್‌ ಮಾಡಿದ್ದ ಸಂದರ್ಭದಲ್ಲಿಯೂ ಅದರ ವಿಡಿಯೋ ಮಾಡಿ ಈ ಕಾಮುಕರು ಹರಿಬಿಟ್ಟಿದ್ದರು. ದೇಶಾದ್ಯಂತ ಇದು ವೈರಲ್ ಆಗಿತ್ತು. ನಂತರ ಆರೋಪಿಗಳ ಜಾಡು ಹಿಡಿದು ಹೊರಟಿದ್ದ ಪೊಲೀಸರು ಇದುವರೆಗೆ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಬಾಂಗ್ಲಾದೇಶದಿಂದ ಯುವತಿಯರನ್ನು ಕರೆತರುತ್ತಿದ್ದ ಈ ಯುವಕರು, ನಗರದ ಕೆಲ ಪ್ರತಿಷ್ಠಿತ ಲೇಔಟ್ ಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ವೇಶ್ಯಾವಾಟಿಕೆ ಸೇರಿದಂತೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಇದೇ ವಿಚಾರದ ಹಣ ಹಂಚಿಕೆ ವಿಚಾರಕ್ಕೆ ಗಲಾಟೆ ನಡೆದು, ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿತ್ತು. ವಿಚಾರಣೆ ವೇಳೆ ಇದೇ ದಂಧೆ ಮಾಡುತ್ತಲೇ ದಿನವೊಂದಕ್ಕೆ ಈ ಯುವಕರು ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುವುದೂ ಪೊಲೀಸ್‌ ತನಿಖೆಯಿಂದ ತಿಳಿದುಬಂದಿತ್ತು.
ಏನಿದು ಪ್ರಕರಣ ಇಲ್ಲಿ ಕ್ಲಿಕ್ಕಿಸಿ?:https://www.vijayavani.net/s-banglalady-case-lakhs-income-for-accused/
ಮಲೇಷ್ಯಾದ ಪ್ರವಾಸಿ ರಾಯಭಾರಿಗೆ ಮೂರು ಬಾರಿ ಗರ್ಭಪಾತ ಮಾಡಿಸಿ ಎಸ್ಕೇಪ್‌ ಆದ ಮಾಜಿ ಸಚಿವ ಅರೆಸ್ಟ್‌!

ಕರೊನಾ ನೆಗೆಟಿವ್‌ ವರದಿ ಪಡೆದ ಖುಷಿಯಲ್ಲಿರುವಾಗಲೇ ಶಾಸಕನ ಸಾವು- ವೈದ್ಯರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 13 =
Remember me
