ಬೆಂಗಳೂರು:ಮೇಕ್ರೀ ವೃತ್ತದ ಬಳಿ ಇರುವ ರಮಣ ಮಹರ್ಷಿ ಧ್ಯಾನ ಕೇಂದ್ರದಿಂದ ಅರಮನೆ ಮೈದಾನಕ್ಕೆ ಪಾದಚಾರಿಗಳಿಗೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ಎಸ್ಕಲೇಟರ್‌ ಸಹಿತ  ಸ್ಕೈವಾಕ್‌ ನಿರ್ಮಾಣ ಕಾಮಗಾರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಬುಧವಾರ ಬೆಳಗ್ಗೆ ಭೂಮಿಪೂಜೆ ನೆರೆವೇರಿಸಿದರು.
ಬಳ್ಳಾರಿ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಾದಚಾರಿಗಳು ದಾಟುವ ವ್ಯವಸ್ಥೆ ಇಲ್ಲದಿರುವುದರಿಂದ ಬಹಳ ಸಮಸ್ಯೆ ಆಗಿತ್ತಲ್ಲದೆ, ಅಪಘಾತಗಳು ಉಂಟಾಗಿ ಪ್ರಾಣ ನಷ್ಟವೂ ಉಂಟಾಗಿತ್ತು. ವಾಹನ ದಟ್ಟಣಿಯಿಂದ ಕೂಡಿರುವ ಈ ರಸ್ತೆಯಲ್ಲಿ ಸ್ಕೈವಾಕ್‌ ಅಗತ್ಯವನ್ನು ಮನಗಂಡ ಡಿಸಿಎಂ, ಅದರ ನಿರ್ಮಾಣಕ್ಕಿಂದು ಚಾಲನೆ ನೀಡಿದ್ದಾರೆ. ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನ ಸವಾರರೂ ನಿರಾಳರಾಗುವಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ. “ಇದು ಅತ್ಯಂತ ಅಗತ್ಯವಾಗಿದ್ದ ಯೋಜನೆ. ಪಾದಚಾರಿಗಳ ಸುರಕ್ಷತೆಗೆ ಬೇಕಾಗಿತ್ತು. ಬಳ್ಳಾರಿ ರಸ್ತೆಯು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾದ್ದರಿಂದ ವಾಹನ ದಟ್ಟಣೆ ಜಾಸ್ತಿ” ಎಂದರು.
ಪ್ರಕಾಶ್‌ ಆರ್ಟ್ಸ್‌ ಕಂಪನಿಗೆ ಯೋಜನೆ ವಹಿಸಲಾಗಿದ್ದು, ಅವರೇ ಮೇಲು ಸೇತುವೆಯನ್ನು ನಿರ್ಮಾಣ ಮಾಡಿ ನಿರ್ವಹಣೆಯನ್ನೂ ಮಾಡಲಿದ್ದಾರೆ. ಜತೆಗೆ, ವರ್ಷಕ್ಕೆ 12 ಲಕ್ಷ ರೂ. ಪರವಾನಗಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಲಿದ್ದಾರೆ. ಮೇಲು ಸೇತುವೆಯ ಎರಡೂ ಕಡೆ ಎಸ್ಕಲೇಟರ್‌ಗಳು ಇರುತ್ತವೆ. ಈ ಸೌಲಭ್ಯದಿಂದ ವಿಕಲಾಂಗರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳಿಗೆ ಅನುಕೂಲವಾಗುತ್ತದೆ. ಜತೆಗೆ ಲಿಫ್ಟ್‌ ಕೂಡ ಇರುತ್ತದೆ ಎಂದರು ಡಿಸಿಎಂ.
ಈ ಸ್ಕೈವಾಕ್‌ ನಿರ್ಮಾಣಕ್ಕೆ 4 ಕೋಟಿ ರೂ. ವೆಚ್ಚವಾಗುತ್ತಿದ್ದು, ಆರು ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಪಾಲಿಕೆ ಮಾಜಿ ಸದಸ್ಯೆ ಸರ್ವಮಂಗಳ ಕೇಶವಮೂರ್ತಿ ಇದ್ದರು.
ಸುಳ್ಳು ರೇಪ್‌ ಕೇಸ್‌ನಲ್ಲಿ ಸಿಲುಕಿರೋ ಖ್ಯಾತ ನಟನ ಬದುಕು ಛಿದ್ರ ಛಿದ್ರ- ಕುಟುಂಬದಲ್ಲಿ ಸಾಲು ಸಾಲು ದುರಂತ

ಮೂಡಬಿದ್ರೆಯಲ್ಲಿ ಬೆಚ್ಚಿಬೀಳಿಸೋ ಘಟನೆ: ಲಸಿಕೆ ಕೊಡಿಸೋ ನೆಪದಲ್ಲಿ ರಾತ್ರೋರಾತ್ರಿ ಮಹಿಳೆಯರ ಸಾಗಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 15 =
Remember me
