ಬೆಂಗಳೂರು:ಭಾರತೀಯ ಸೇನೆಯ ಅಧಿಕಾರಿಯೊಬ್ಬರ ಮನೆಗೆ ಕನ್ನಹಾಕಿ 70 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ ನೇಪಾಳಿ ಗ್ಯಾಂಗ್ ಡಿಜೆ ಹಳ್ಳಿ ಪೊಲೀಸರ ಬಲೆಗೆ ಬಿದ್ದಿದೆ.
ನೇಪಾಳ ಮೂಲದ ಬಾಗಲೂರು ನಿವಾಸಿಗಳಾದ ಮನೋಜ್ ಮಾಸಿ (37), ಕೇಶವರಾಜ್ ಭಟ್ (56), ಪ್ರಕಾಶ್ ಬಹದ್ದೂರ್ (23), ವಿಕ್ರಂ ಸಿಂಗ್ (36) ಬಂಧಿತರು.ಆರೋಪಿಗಳಿಂದ 221 ಗ್ರಾಂ ಚಿನ್ನಾಭರಣ , 13 ಗ್ರಾಂ ವಜ್ರದ ಕಲ್ಲಿನ ಆಭರಣಗಳು, 500 ಗ್ರಾಂ ಬೆಳ್ಳಿಯ ಆಭರಣ ಸೇರಿ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಡಿಜೆಹಳ್ಳಿಯ ಎಂಎಂ ಲೇಔಟ್‌ನ ನಿವಾಸಿ ಭಾರತೀಯ ಸೇನೆಯ ಅಧಿಕಾರಿ ಪ್ರೇಮ್ ಕೃಷ್ಣದಾಸ್ ಕಪೂರ್ ಅವರ ಪತ್ನಿ ಅಲ್ಗಾ ಕಪೂರ್ ಕರೊನಾ ಭೀತಿಯಿಂದ ಏ.3ರಂದು ಮನೆಗೆ ಬೀಗ ಹಾಕಿ ರಾಜನಕುಂಟೆಯಲ್ಲಿರುವ ಮಗಳ ಮನೆಗೆ ತೆರಳಿದ್ದರು. ಏ.9ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾ-ಪಿಲ್ಲಿಯಾಗಿತ್ತು. ಕಳ್ಳರು ಬೆಡ್‌ರೂಮ್‌ನ ಕಿಟಕಿಯ ಗ್ರಿಲ್ ಮುರಿದು ಮನೆಯೊಳಗೆ ಪ್ರವೇಶಿಸಿ ಲಾಕರ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, 1 ಸಾವಿರ ರೂ. ಲಂಡನ್ ಪೌಂಡ್ಸ್, ಯುಎಸ್ ಡಾಲರ್ ಸೇರಿ ಒಟ್ಟು 70 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿತ್ತು. ಕೂಡಲೇ ಅಲ್ಗಾ ಅವರು ಸೊಸೆ ಪೂಜಾ ಕಪೂರ್‌ಗೆ ಈ ಕುರಿತು ಮಾಹಿತಿ ನೀಡಿದ್ದರು. ಪೂಜಾ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.
ಸಿಸಿಕ್ಯಾಮರಾ ಕೊಟ್ಟ ಸುಳಿವು:ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಬಂದು ಮನೆಗೆ ಅಳವಡಿಸಿರುವ ಸಿಸಿಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳಾದ ಮನೋಜ್, ಕೇಶವ್‌ರಾಜ್ ಭಟ್, ವಿಕ್ರಂ ಸಿಂಗ್ ಕಳ್ಳತನ ಮಾಡುತ್ತಿರುವ ದೃಶ್ಯ ಕಂಡು ಬಂದಿತ್ತು. ಕಳ್ಳರು ನೇಪಾಳಿ ಮೂಲದವರು ಎಂಬ ಸುಳಿವು ಸಿಕ್ಕಿದರೂ ಇವರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಪ್ರಕರಣದ ಬೆನ್ನತ್ತಿ ಹೋದಾಗ ಕಳ್ಳತನ ನಡೆದ ಮನೆಯ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಪ್ರಕಾಶ್ ಬಹದ್ದೂರ್ ಮೇಲೆ ಅನುಮಾನ ಉಂಟಾಗಿತ್ತು. ಈತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಅಲ್ಗಾ ಮನೆಯಲ್ಲಿ ಕೆಲ ದಿನಗಳಿಂದ ಯಾರೂ ಇಲ್ಲದಿರುವ ಬಗ್ಗೆ ತಾನೇ ಉಳಿದ ಆರೋಪಿಗಳಿಗೆ ಮಾಹಿತಿ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದ. ಈತ ಕೊಟ್ಟ ಮಾಹಿತಿ ಆಧಾರದ ಮೇಲೆ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೇಪಾಳದಲ್ಲಿ ಚಿನ್ನಾಭರಣ ಜಪ್ತಿ: ಕಳ್ಳತನದ ಮಾಡಿದ ಬಳಿಕ ಬಳಿಕ ಜನತಾ ಕರ್ಫ್ಯೂ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಆಭರಣ ವಿಲೇವಾರಿ ಮಾಡುವುದು ಕಷ್ಟವಾಗಿ ನೇಪಾಳಕ್ಕೆ ಸಾಗಿಸಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾಗಿ ಆರೋಪಿಗಳು ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ನೇಪಾಳಕ್ಕೆ ತೆರಳಿದ್ದ ಡಿಜೆಹಳ್ಳಿ ಪೊಲೀಸರ ತಂಡ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಮೂವರು ಆರೋಪಿಗಳು ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರೆ, ವಿಕ್ರಮ್ ನೇಪಾಳಕ್ಕೆ ಹೊರಟಿದ್ದ. ಮುಂಬೈನಿಂದ ನೇಪಾಳಕ್ಕೆ ಹೋಗುವ ಮಾರ್ಗದಲ್ಲಿ ಈತನನ್ನು ಬಂಧಿಸಲಾಗಿದೆ. ಆರೋಪಿಗಳು ನಗರದಲ್ಲಿ ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿದ್ದು, ಯಾರೂ ವಾಸವಿಲ್ಲದ ಶ್ರೀಮಂತರ ಮನೆಯನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕರೊನಾ ನಡುವೆ ನಿಗೂಢ ರೋಗ: ಕಲಬುರಗಿಯ ಒಂದೇ ಗ್ರಾಮದ 26 ಮಂದಿ ಸಾವು

ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!

ಮದ್ವೆಯಾದಾಗಿನಿಂದಲೂ ದೂರ ಮಲಗುತ್ತಿರೋ ಪತಿಯನ್ನು ಕಟ್ಕೊಂಡು ಏನ್‌ ಮಾಡ್ಲಿ ಮೇಡಂ?

ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 3 =
Remember me
